ಬೆಂಗಳೂರು : ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳಿಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ 77213/77214 ಗುಂತಕಲ್–ಹಿಂದೂಪುರ–ಗುಂತಕಲ್ ಡೆಮು ರೈಲುಗಳ ನಿಲುಗಡೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಗಸಮುದ್ರಂ ನಿಲ್ದಾಣದಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದೆ.
ಭುವನೇಶ್ವರ–ಯಶವಂತಪುರ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ – ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಪೂರ್ವ ಕರಾವಳಿ ರೈಲ್ವೆಯು ರೈಲು ಸಂಖ್ಯೆ 02811/02812 ಭುವನೇಶ್ವರ–ಯಶವಂತಪುರ–ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ.
ಪ್ರತಿ ಶನಿವಾರ ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 02811 ಭುವನೇಶ್ವರ–ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈ ಹಿಂದೆ 2026ರ ಫೆಬ್ರವರಿ 21ರ ವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಈಗ ಇದನ್ನು 2026ರ ಫೆಬ್ರವರಿ 28 ರಿಂದ ಮಾ.28 ರವರೆಗೆ ವಿಸ್ತರಿಸಲಾಗಿದೆ.
ಪ್ರತಿ ಸೋಮವಾರ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 02812 ಯಶವಂತಪುರ–ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 2026ರ ಫೆಬ್ರವರಿ 23 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈ ಸೇವೆಯನ್ನು ಈಗ ಮಾ.2 ರಿಂದ ಮಾ.30 ರವರೆಗೆ ಸಂಚರಿಸಲಿದೆ.
ವಿಸ್ತರಿಸಲಾದ ಈ ಅವಧಿಯಲ್ಲಿ ಎರಡೂ ಮಾರ್ಗಗಳಲ್ಲಿ ತಲಾ ಐದು ಟ್ರಿಪ್‌ಗಳನ್ನು ಈ ರೈಲುಗಳು ಪೂರೈಸಲಿವೆ. ವೇಳಾಪಟ್ಟಿ, ನಿಲುಗಡೆಗಳು ಮತ್ತು ರೈಲಿನ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.















