ಮನೆ ರಾಜ್ಯ ಬೇರೆ ಹುಡ್ಗಿ ಜೊತೆ ಸಂಪರ್ಕದಲ್ಲಿದ್ದಾನೆ ಅಂತ, ಚಾಕು ಇರಿದ ಪ್ರೇಯಸಿ

ಬೇರೆ ಹುಡ್ಗಿ ಜೊತೆ ಸಂಪರ್ಕದಲ್ಲಿದ್ದಾನೆ ಅಂತ, ಚಾಕು ಇರಿದ ಪ್ರೇಯಸಿ

0

ರಾಮನಗರ : ಪ್ರಿಯಕರ ಬೇರೆ ಹುಡುಗಿ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಜಿಮ್ ಟ್ರೈನರ್‌ ಪ್ರಿಯಕರನಿಗೆ ಪ್ರೇಯಸಿಯೇ ಚಾಕು ಇರಿದಿರೋ ಘಟನೆ ಬಿಡದಿಯ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಗುರುವಾರ ರಾತ್ರಿ ನಡೆದಿದೆ.

ವೇಣುಗೋಪಾಲ್ (27) ಚಾಕು ಇರಿತಕ್ಕೊಳಗಾದ ಯುವಕ. ಸುಧಾ (30) ಚಾಕು ಇರಿದಿರೋ ಪ್ರೇಯಸಿ. ಕಳೆದ 5-6 ವರ್ಷಗಳಿಂದ ವೇಣುಗೋಪಾಲ್ ಹಾಗೂ ಸುಧಾ ಪ್ರೀತಿ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದ ವೇಣುಗೋಪಾಲ್ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.

ಅಲ್ಲದೇ ಬೇರೊಂದು ಯುವತಿ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಕೋಪಗೊಂಡು, ಮಾತನಾಡಬೇಕು ಬಾ ಎಂದು ಯುವಕನನ್ನು ಮನೆ ಬಳಿ‌ ಕರೆಸಿಕೊಂಡು ಚಾಕು ಇರಿದಿದ್ದಾಳೆ. ಚಾಕು ಇರಿದ ಬಳಿಕ ಸುಧಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಯುವಕನಿಗೆ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.