ವಿಜಯಪುರ : ಜಿಲ್ಲೆಯಲ್ಲಿಂದು ಜೆಡಿಎಸ್ ಪಕ್ಷದಿಂದ ಜನತಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಮ.12ಗಂಟೆಗೆ ಹೆಲಿಕಾಪ್ಟರ್ ಮೂಲಕ ಗುಮ್ಮಟನಗರಕ್ಕೆ ಹೆಚ್‌ಡಿ ದೇವಗೌಡ ಅವರು ಆಗಮಿಸಿದ್ರು.
ಕಿತ್ತೂರು ಕರ್ನಾಟಕ ಭಾಗದ ಜೆಡಿಎಸ್ ಬೆಳ್ಳಿಹಬ್ಬ ಸಮಾವೇಶ ಹಾಗೂ ಜನತಾ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಆಗಮಿಸಲಿದ್ದಾರೆ. ದೇವೇಗೌಡ ಅವರಿಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಸಾಥ್ ನೀಡಲಿದ್ದಾರೆ.
ವಿಜಯಪುರ ನಗರದ ಹೊರವಲಯದಲ್ಲಿರುವ ಸಿಂದಗಿ ಬೈಪಾಸ್‌ನಲ್ಲಿ ಸಮಾವೇಶ ನಡೆಯಲಿದ್ದು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರು ಹಾಗೂ ಹಾಲಿ, ಮಾಜಿ ಶಾಸಕರು ಭಾಗಿಯಾಗಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಿಂದ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬರುವ ಸ್ಥಳೀಯ ಚುನಾವಣೆ, ವಿಧಾನ ಸಭೆ ಎಲೆಕ್ಷನ್ ಹಿನ್ನೆಲೆ ಪಕ್ಷದ ಬಲಬರ್ಧನೆಗೆ ಇದು ಸಹಕಾರಿ ಆಗಲಿದೆ. ಕಾರ್ಯಕರ್ತರು ಪಕ್ಷದೊಂದಿಗಿದ್ದಾರೆ. ಜನರಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಹೋರಾಟ ಇನ್ನಷ್ಟು ಹೆಚ್ಚಾಗಲಿದೆ ಎಂದು ಜೆಡಿಎಸ್‌ನ ನಿಖಿಲ್ ಹೇಳಿದ್ದಾರೆ.















