ಮನೆ ಸುದ್ದಿ ಜಾಲ ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

0

ಮುಂಬೈ : ಟಿಸಿಎಸ್ ‘ಮತಾಂತರ’ ಆರೋಪಿ ನಿದಾ ಖಾನ್ ಜಾಮೀನು ಕೋರಿ ಕೋರ್ಟ್‌ ಮೊರೆ ಹೋಗಿದ್ದಾಳೆ. ‘ನಾನು ತುಂಬು ಗರ್ಭಿಣಿ. ನನಗೆ ಜಾಮೀನು ಕೊಡಿ’ ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾಳೆ. ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ನಾಸಿಕ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ನಿದಾ ಖಾನ್ ಈಗ ಮುಂಬೈನಲ್ಲಿದ್ದಾಳೆ.

ಪ್ರಸ್ತುತ ಪರಾರಿಯಾಗಿರುವ ಖಾನ್, ನಾಸಿಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿ ಕೋರಿ ಅರ್ಜಿ ಸಲ್ಲಿಸಿದ್ದಾಳೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಆಕೆಯನ್ನು ಕಸ್ಟಡಿಗೆ ತರಲು ಪ್ರಯತ್ನ ಮುಂದುವರಿಸಿದೆ.

25 ವರ್ಷದ ನಿದಾ ಖಾನ್ 2021 ರಲ್ಲಿ ನಾಸಿಕ್‌ನಲ್ಲಿರುವ ಟಿಸಿಎಸ್‌ನ ಬಿಪಿಒ ಘಟಕಕ್ಕೆ ಸೇರಿದ್ದಳು. ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಒಂಬತ್ತು ದೂರುಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಂಪನಿಯ ಆರು ಪುರುಷರು ಮತ್ತು ಓರ್ವ ಹೆಚ್‌ಆರ್‌ ಹೆಡ್‌ ಸೇರಿದಂತೆ 7 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಂಟು ಮಹಿಳಾ ಉದ್ಯೋಗಿಗಳು ಸಲ್ಲಿಸಿದ ದೂರುಗಳ ತನಿಖೆಗಾಗಿ ಕಳೆದ ವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.