ಮನೆ ರಾಷ್ಟ್ರೀಯ ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ..?

ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ..?

0

ಹೈದಾರಾಬಾದ್ : ಸಾಮಾಜಿಕ ಜಾಲತಾಣದಲ್ಲಿ ಎಂ.ಎಸ್ ಧೋನಿ ಸಿಎಸ್‌ಕೆ ಬಸ್ ಹತ್ತುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಶನಿವಾರ (ಏ.18) ನಡೆಯಲಿರುವ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಶನಿವಾರ (ಏ.18) ಹೈದರಾಬಾದ್‌ನಲ್ಲಿ ಸಿಎಸ್‌ಕೆ ತಂಡ ಎಸ್‌ಆರ್‌ಹೆಚ್‌ನ್ನು ಎದುರಿಸಲಿದೆ. ಹೀಗಾಗಿ ಧೋನಿ ಪಂದ್ಯಕ್ಕೂ ಮುನ್ನ ಹೈದರಾಬಾದ್‌ಗೆ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಸಿಎಸ್‌ಕೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ ಇದರ ಹೊರತಾಗಿ ಪಂದ್ಯದಲ್ಲಿ ಆಡುತ್ತಾರಾ? ಎನ್ನುವ ಕುರಿತು ಈವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಮೊದಲೆರಡು ವಾರಗಳಲ್ಲಿ ಧೋನಿ ಕಾಣಿಸಿಕೊಳ್ಳುವುದಿಲ್ಲ ಎಂದು ಸಿಎಸ್‌ಕೆ ಐಪಿಎಲ್ 2026ರ ಆವೃತ್ತಿ ಆರಂಭಕ್ಕೂ ಮುನ್ನ ತಿಳಿಸಿತ್ತು. ಈಗಾಗಲೇ ಎರಡು ವಾರ ಕಳೆದಿದ್ದು, ಮುಂದಿನ ಪಂದ್ಯದಲ್ಲಿ ಧೋನಿ ಆಡುತ್ತಾರಾ ಎಂದು ಕಾದು ನೋಡಬೇಕಿದೆ.

ಈವರೆಗೂ ಒಟ್ಟು ಐದು ಪಂದ್ಯಗಳನ್ನಾಡಿರುವ ಸಿಎಸ್‌ಕೆ ತನ್ನ ತವರಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಶನಿವಾರ (ಏ.18) ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಎಸ್‌ಆರ್‌ಹೆಚ್‌ನ್ನು ಎದುರಿಸಲಿದೆ.