ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಗ್ರಹಣ ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ನಡೆಯುತ್ತಿದೆ. ಗ್ರಹಣದ ಸ್ಪರ್ಶ ಕಾಲವು ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ, ಮಧ್ಯಮ ಕಾಲವು ಸಂಜೆ 4 ಗಂಟೆ 29 ನಿಮಿಷಕ್ಕೆ ಮತ್ತು ಮೋಕ್ಷ ಕಾಲವು ಸಂಜೆ 6 ಗಂಟೆ 19 ನಿಮಿಷಕ್ಕೆ ಆಗಿರುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುವುದು ಮತ್ತು ಹೆಚ್ಚು ಪ್ರಯಾಣಿಸುವುದು ಶುಭಕರವಲ್ಲ. ಹೀಗಾಗಿ ರಾಜ್ಯದ ಹಲವು ದೇವಾಲಯಗಳಲ್ಲಿ ಗ್ರಹಣ ಸ್ಪರ್ಶವಾಗದಂತೆ ಗರ್ಭಗುಡಿಗಳನ್ನ ಮುಚ್ಚಲಾಗುತ್ತದೆ.
ಇಂದು ಸಂಭವಿಸುವ ರಕ್ತಚಂದ್ರಗ್ರಹಣ ಯಾವೆಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ? ಯಾವ ರಾಶಿಗಳಿಗೆ ಸಂಕಷ್ಟ..? ಯಾವ ರಾಶಿಗಳು ಸಮಸ್ಯೆ ಬಗೆಹರಿಸಲು ಯಾವ ಪರಿಹಾರ ಮಾಡಿಸಿಕೊಳ್ಳಬೇಕು..? ಸಿಂಹ ರಾಶಿಯಲ್ಲಿ ಗ್ರಹಣ ಆಗುತ್ತಿರುವ ಹಿನ್ನೆಲೆ ಎಫೆಕ್ಟ್ ಹೇಗೆ ಇರಲಿದೆ? ಎಂಬುದರ ಕುರಿತು ಆಧ್ಯಾತ್ಮಿಕ ಚಿಂತಕರಾದ ವಿಠ್ಠಲ್ ಭಟ್ ಹಾಗೂ ಖ್ಯಾತ ಜೋತಿಷ್ಯಿ ರೇಣುಕಾರಾಧ್ಯ ಮಾತನಾಡಿದ್ದಾರೆ.
ಮೇಷ ರಾಶಿ – 5 ನೇ ರಾಶಿಯಲ್ಲಿ ಗ್ರಹಣ ಆಗುತ್ತಿರುವ ಕಾರಣ ಮಿಶ್ರಫಲ. ಮಕ್ಕಳ ಸಂತಾನ ವಿಚಾರದಲ್ಲಿ ಹೆಚ್ಚಿನ ಗಮನಕೊಡಬೇಕು. ಶುಭನು ಆಗಬಬಹುದು ಅಶುಭವು ಆಗಬಹುದು.
ಪರಿಹಾರ – ದೇವತಾರಾಧನೆ ಮಾಡಬೇಕು. 48 ದಿನ ಹೊಸ ಕಾರ್ಯ ಆರಂಭ ಮಾಡುವಾಗ ಎಚ್ಚರ ವಹಿಸಬೇಕು. ಮಕ್ಕಳ ಏಳಿಗೆ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಬೇಕು.
ವೃಷಭ ರಾಶಿ – ಅಶುಭ ಫಲ. 48 ದಿನ ಎಚ್ಚರ ವಹಿಸಬೇಕು. ತಾಯಿ ಆರೋಗ್ಯ ವಿಚಾರವಾಗಿ ಎಚ್ಚರವಹಿಸಬೇಕು. ವಿವಾಹಿ ಸ್ತ್ರೀ ತವರು ಮನೆಯಿಂದ ಯಾವುದೇ ಕೆಟ್ಟ ಸನ್ನಿವೇಶ ಬಾರದಂತೆ ಎಚ್ಚರವಹಿಸಬೇಕು. ವಿದ್ಯಾರ್ಥಿಗಳು ಹೆಚ್ಚು ಓದಬೇಕು. ಭೂ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು.
ಪರಿಹಾರ – ಚಂದ್ರಗ್ರಹಣ ಶಾಂತಿ ಮಾಡಿಸಬೇಕು. ಉರುಳಿ, ಭತ್ತ ದಾನ ಮಾಡಬೇಕು.
ಮಿಥುನ ರಾಶಿ – ಶುಭಫಲ. ಸಹೋದರ ವಿಚಾರ ಕೆಟ್ಟಿದ್ದಲ್ಲಿ ಸರಿಯಾಗಬಹುದು. ಪಿತೃರ್ಜಿತ ಆಸ್ತಿ ವಿಚಾರದಲ್ಲಿ ಒಳ್ಳೆಯದಾಗುವ ಸಾಧ್ಯತೆ. ಪೊಲೀಸ್, ಆರ್ಮಿ, ರಾಜಕೀಯ ಕ್ಷೇತ್ರದವರಿಗೆ ಅದ್ಬುತ ಅವಕಾಶ.
ಕರ್ಕಾಟಕ ರಾಶಿ – ಮಿಶ್ರಫಲ. ಹಣಕಾಸು ವಿಚಾರದಲ್ಲಿ ಎಚ್ಚರವಹಿಸಬೇಕು. ಆರ್ಥಿಕತೆ ವಿಚಾರದಲ್ಲಿ 48 ದಿನ ಎಚ್ಚರ ವಹಿಸಬೇಕು. ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗದಂತೆ ಎಚ್ಚರವಹಿಸಬೇಕು. ಆರೋಗ್ಯ , ಮಾನಸಿಕತೆ ವಿಚಾರದಲ್ಲಿ ಎಚ್ಚರ ವಹಿಸಬೇಕು.
ಪರಿಹಾರ – ಶಾಂತಿ ಹೋಮ ಮಾಡಿಸಿ.
ಸಿಂಹ ರಾಶಿ – ಅಶುಭಫಲ. ಕಳೆದುಕೊಳ್ಳುವಿಕೆ ಜಾಸ್ತಿ ಆಗಬಹುದು. ಅಧಿಕಾರ, ಉದ್ಯೋಗ, ವಸ್ತುಗಳ ಕಳೆದುಕೊಳ್ಳಬಹುದು. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಮಾನಸಿಕವಾಗಿ ಕುಗ್ಗಿಸುವ ಪರಿಸ್ಥಿತಿ ಬರಬಹುದು. ದೂರ ಪ್ರಯಾಣ, ಒಬ್ಬರೆ ಪ್ರಯಾಣ 48 ದಿನ ಬೇಡ.
ಪರಿಹಾರ – ಗ್ರಹಣ ಶಾಂತಿ. ಹುರುಳಿ, ಭತ್ತ ದಾನ ಮಾಡಿ. ಚಂದ್ರ ಬಿಂಬ ದಾನ ಮಾಡಿ.
ಕನ್ಯಾ ರಾಶಿ – ಅಶುಭ ಫಲ. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ. 48 ದಿನ ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಹಿಸಬೇಕು. ನಷ್ಟದ ಸಾಧ್ಯತೆ ಇದೆ. ಕಳೆದುಕೊಳ್ಳುವಿಕೆ ಸಾಧ್ಯತೆ ಇದೆ. ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹೆಚ್ಚು.
ಪರಿಹಾರ – ನಿತ್ಯ 48 ದಿನ ವಿಷ್ಣುಸಹಸ್ರನಾಮ ಪಠಿಸಿ. ಮಹಾಚಂದ್ರಗ್ರಹಣ ಶಾಂತಿ ಹೋಮ ಮಾಡಿಸಿ. ಉರುಳಿ, ಭತ್ತ, ಚಂದ್ರ ಬಿಂಬ ದಾನ ಮಾಡಿ.
ತುಲಾ ರಾಶಿ – ಶುಭಫಲ. ಉದ್ಯೋಗದಲ್ಲಿ ಶುಭಸುದ್ದಿ ಸಾಧ್ಯತೆ. ಹಿಂದಿನ ವ್ಯಾಪಾರ, ವ್ಯವಹಾರದಲ್ಲಿ ಲಾಭ ಸಾಧ್ಯತೆ.
ವೃಶ್ಚಿಕ ರಾಶಿ – ಶುಭಫಲ. ಉದ್ಯೋಗದಲ್ಲಿ ಶುಭಫಲ. ನಿರುದ್ಯೋಗಿಗಳಿಗೂ ಶುಭ ಸುದ್ದಿ. ಪಿತ್ರಾರ್ಜಿತ ಆಸ್ತಿಯಲ್ಲಿ ಅನೂಕೂಲ ಸಾಧ್ಯತೆ. ತಂದೆ ಆರೋಗ್ಯ, ಸಂಬಂಧ ಸುಧಾರಣೆ ಆಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸಮಯ.
ಧನು ರಾಶಿ – ಮಿಶ್ರ ಫಲ. 48 ದಿನ ನಷ್ಟದ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ಸ್ತ್ರಿಯರು ಯಜಮಾನರ ಆರೋಗ್ಯದಲ್ಲಿ ಗಮನಹರಿಸಬೇಕು. ನಿಮ್ಮ ಮಾನಸಿಕ ಸ್ಥಿತಿ ಬಗ್ಗೆ ಗಮನ ಇರಲಿ.
ಪರಿಹಾರ – ಗ್ರಹಣ ಶಾಂತಿ ಹೋಮ. ಉರುಳಿ, ಭತ್ತ ಅಥವಾ ಅಕ್ಕಿ ದಾನ. ಚಂದ್ರಬಿಂಬ ದಾನ. ಈಶ್ವರ ದೇವಾಲಯದಲ್ಲಿ ಹಾಲಿನಿಂದ ರುದ್ರಾಭಿಷೇಕ ಮಾಡಿಸಿ.
ಮಕರ ರಾಶಿ – ಅಶುಭ ಫಲ. ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಸಮಸ್ಯೆಯಾಗಲಿದೆ. ಅಡತಡೆಸಾಧ್ಯತೆ. ವಿವಾಹಿತರಿಗೆ ಬಾಳಸಂಗಾಂತಿ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ವಿವಾಹಿತ ಸ್ತ್ರಿಯರು ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸಬೇಕು. ದೂರ ಪ್ರಯಾಣ ಬೇಡ. ಒಬ್ಬರೆ ಓಡಾಟ, ವಿದೇಶ ಪ್ರಯಾಣ ಬೇಡ.
ಪರಿಹಾರ – ಈಶ್ವರ ಆರಾಧನೆ, ಕುಲದೇವರ ಆರಾಧನೆ ಮಾಡಿ. ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಪಂಚಾಕ್ಷರಿ ಜಪ ಮಾಡಿ. ಗ್ರಹಣ ಶಾಂತಿ ಹೋಮ, ಧಾನ ಮಾಡಿ.
ಕುಂಭರಾಶಿ – ಮಿಶ್ರಾಫಲ. ಸಾಲ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ. ಆರೋಗ್ಯ ಭಾದೆ. ಶತೃ ದೃಷ್ಟಿ ಸಮಸ್ಯೆ ಸಾಧ್ಯತೆ.
ಪರಿಹಾರ – ಅಷ್ಟೋತ್ರ, ಗಣಪತಿ ಅಷ್ಟೋತ್ರ ಪಠಣೆ ಮಾಡಿ. ಗ್ರಹಣ ಶಾಂತಿ ಹೋಮ. ಚಂದ್ರ ಬಿಂಬ, ಹುರುಳಿ, ಭತ್ತ ದಾನ.
ಮೀನ ರಾಶಿ – ಶುಭಫಲ. ಸಾಲದ ಸಮಸ್ಯೆ ಬಗೆಹರಿಯಬಹುದು. ಶತೃಗಳು ಮಿತ್ರರಾಗುವ ಸಾಧ್ಯತೆ. ದೃಷ್ಟಿ ದೋಷ ದಿನ ತಪ್ಪಿಸಿ ಕೊಳ್ಳ ಬಹುದು. ಆರೋಗ್ಯ ಸುಧಾರಣೆ.
ಪರಿಹಾರ – ಮನೆದೇವರ ದರ್ಶನ ಮಾಡಿ. ಭತ್ತ, ಉರುಳಿ ಚಂದ್ರಬಿಂಬ ದಾನ.















