ಮನೆ ಸುದ್ದಿ ಜಾಲ ಇಂದು ಮಧ್ಯರಾತ್ರಿ 12ರಿಂದ ಅಲಿ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭ..!

ಇಂದು ಮಧ್ಯರಾತ್ರಿ 12ರಿಂದ ಅಲಿ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭ..!

0

ಟೆಹರಾನ್‌ : ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಮೃತಪಟ್ಟು ನಾಲ್ಕು ದಿನಗಳಾಗಿವೆ. ಇಂದು (ಮಾ.4) ಮಧ್ಯರಾತ್ರಿ 12ರಿಂದ ಅವರ ಅಂತ್ಯಕ್ರಿಯೆ ಪ್ರಕ್ರಿಯೆಗಳು ನಡೆಯಲಿವೆ.

ಶನಿವಾರ ಖಮೇನಿ ಕಚೇರಿ ಇದ್ದ ಟೆಹರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿದ ಇಸ್ರೇಲ್, ಅಮೆರಿಕ ಮಾರ್ಚ್ 1ರಂದು ಖಮೇನಿ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಕಳೆದ ವರ್ಷ ಇದೇ ಟೆಹರಾನ್‌ನ ಇಮಾಮ್ ಖಮೇನಿ ಪ್ರಾರ್ಥನಾ (ಮೊಸಲ್ಲಾ) ಮಂದಿರದಲ್ಲಿ ಇಸ್ರೇಲ್ ವಿರುದ್ಧ ಅವರು ಪ್ರತಿಕಾರದ ಮಾತುಗಳಾಡಿದ್ದರು. ಅವರ ಭಾಷಣ ಕೇಳಲು ಲಕ್ಷಾಂತರ ಜನರು ಸೇರಿದ್ದರು. ಇಂದು ಅದೇ ಮೊಸಲ್ಲಾದಲ್ಲಿ ಮೂರು ದಿನಗಳಿಂದ ಅಪಾರ ಜನ ಖಮೇನಿಯ ಅಂತಿಮ ದರ್ಶನ ಪಡೆದಿದ್ದಾರೆ.

ಮುಂದಿನ ಮೂರು ದಿನಗಳವರೆಗೆ ವಿಧಿ ವಿಧಾನ ಮುಂದುವರಿಸಲು ತೀರ್ಮಾನಿಸಲಾಗಿದೆ. ಇರಾನ್‌ನಾದ್ಯಂತ ಸುಮಾರು 40 ದಿನ ಶೋಕಾಚರಣೆ ನಡೆಯಲಿದೆ ಎಂದು ವರದಿಯಾಗಿದೆ. ಖಮೇನಿ ಅಂತ್ಯಕ್ರಿಯೆ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಧ್ಯರಾತ್ರಿ 12ರಿಂದ ಪ್ರಾರಂಭವಾಗುವ ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಅಲಿ ಖಮೇನಿ ಅವರ ದೇಹಕ್ಕೆ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಲಿದ್ದಾರೆ. ಮುಸ್ಲಿಂ ಸಮುದಾಯ ಅನೇಕ ಗಣ್ಯರು, ಮುಖ್ಯಸ್ಥರ ಉಪಸ್ಥಿತಿ ಇರಲಿದ್ದಾರೆ. ಇತ್ತ ಇಸ್ರೇಲ್, ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದವರಿಗೂ ಇದೇ ಗತಿ ಬರಲಿದೆ ಎಂದು ಎಚ್ಚರಿಸಿದೆ.

2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ನ್ಯಾಯಸಮ್ಮತವಾಗಿದೆ ಎಂದು ಖಮೇನಿ ಪ್ರತಿಪಾದಿಸಿದ್ದರು. ಇಸ್ರೇಲ್‌ನ್ನು ಸಂಪೂರ್ಣ ನಿರ್ನಾಮ ಮಾಡಲಾಗುವುದು. ಪ್ರತಿಕಾರ ಕೈಗೊಳ್ಳಲಾಗುವುದು ಎಂದು ಖಮೇನಿ 2024ರಲ್ಲಿ ಇದೇ ಪ್ರಾರ್ಥನಾ ಮಂದಿರದಲ್ಲಿ ಹೇಳಿದ್ದರು.