ಮನೆ ಸುದ್ದಿ ಜಾಲ ಕಾರನ್ನೇ ಬಾರ್‌ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರಿಂದ ಶಾಕ್‌..!

ಕಾರನ್ನೇ ಬಾರ್‌ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರಿಂದ ಶಾಕ್‌..!

0

ಬೆಳಗಾವಿ : ನಗರದಲ್ಲಿ ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರಸ್ತೆ ಪಕ್ಕ ಕಾರು ನಿಲ್ಲಿಸಿ, ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಬೆಳಗಾವಿ ಮಹಾನಗರದಲ್ಲಷ್ಟೇ ಈವರೆಗೆ ಇಂತಹ 24 ಪ್ರಕರಣಗಳು ದಾಖಲಾಗಿವೆ. 1 ವಾರದಲ್ಲಿ 24 ಪ್ರಕರಣಗಳ ಪೈಕಿ 36 ಜನರ ವಿರುದ್ಧ ಮಹಾನಗರ ಪೊಲೀಸರು ಕ್ರಮ ಜರುಗಿಸಿದ್ದಾರೆ. ಸಾರ್ವಜನಿಕ ಸ್ಥಳ, ಕಾರು, ಜಮೀನು, ಮೈದಾನ ಸೇರಿದಂತೆ ವಿವಿಧೆಡೆ ಪಾರ್ಟಿ ಮಾಡ್ತಿದ್ದವರಿಗೆ ಈ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಬಾರ್ & ರೆಸ್ಟೋರೆಂಟ್ ಇರುವಾಗಲೂ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದವರಿಗೆ ಹಾಗೂ ರಸ್ತೆ ಪಕ್ಕ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುವವರಿಗೂ ಸಹ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆ ಕೊಟ್ಟಿದ್ದಾರೆ.

ರಸ್ತೆ ಅಕ್ಕಪಕ್ಕ ರಾತ್ರಿ ವೇಳೆ ನಿಲುಗಡೆ ಆಗುವ ಕಾರುಗಳನ್ನ ತಪಾಸಣೆ ಮಾಡಲು ಪೊಲೀಸರು ಶುರು ಮಾಡಿದ್ದರು. ಆ ಮೂಲಕ ಡ್ರಂಕ್ & ಡ್ರೈವ್‌ ಪ್ರಕರಣ ತಗ್ಗಿಸಲು ಬೆಳಗಾವಿ ಪೊಲೀಸರು ಮುಂದಾಗಿದ್ದರು. ಹೀಗೆ ಪರಿಶೀಲನೆ ಮಾಡುವ ವೇಳೆಯೇ 24 ಪ್ರಕರಣಗಳನ್ನ ಬೆಳಗಾವಿ ಪೊಲೀಸರು ದಾಖಲಿಸಿದ್ದಾರೆ.