ಮನೆ ರಾಜ್ಯ ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದ, ಮಗು ಪಾರು

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದ, ಮಗು ಪಾರು

0

ಮಂಡ್ಯ : ಕೌಟುಂಬಿಕ ಕಲಹಕ್ಕೆ 2ರ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪಾರಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ನೇಣಿಗೆ ಶರಣಾದ ದಂಪತಿ. ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತ ದಂಪತಿ ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿತ್ತು. ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ದಂಪತಿ ಬಾಡಿಗೆಗೆ ಇದ್ದರು. ದಿವ್ಯಶ್ರೀ ಫಾರ್ಮಸಿ ಓದಿದ್ದಳು. ಸ್ವಂತ ಮೆಡಿಕಲ್ ಮಾಡಿಕೊಡಿವಂತೆ ಗಂಡನ ಬಳಿ ಹಲವಾರು ಬಾರಿ ಒತ್ತಾಯಿಸಿದ್ದಳಂತೆ.

ಆದರೆ, ಊರಿನಲ್ಲಿ ಹೊಸ ಮನೆ ನಿರ್ಮಾಣ ಮಾಡಿದ್ರಿಂದ ಸ್ವಲ್ಪ ಸಾಲ ಇದೆ. ಈಗ ಬೇಡ ಅಂತ‌ ದರ್ಶನ್ ಸಮಾಧಾನ ಮಾಡಿಕೊಂಡು ಬಂದಿದ್ದರು. ಅದೇ ವಿಚಾರಕ್ಕೆ ಇಂದು (ಮಾ.9) ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳ ಆಗಿರಬಹುದು ಎನ್ನಲಾಗಿದ್ದು, ದರ್ಶನ್ ಹಾಲು ತರೋದಕ್ಕೆ ಅಂತ ಅಂಗಡಿಗೆ ಹೋಗಿದ್ದಾಗ ದಿವ್ಯಶ್ರೀ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಂಗಡಿಯಿಂದ ಬಂದ ದರ್ಶನ್ ಪತ್ನಿ ಸಾವನ್ನಪ್ಪಿರೋದನ್ನ ನೋಡಿ ತನ್ನಣ್ಣನಿಗೆ ಫೋನ್ ಮಾಡಿ, ತಾನು ಸಾಯುವುದಾಗಿ ಹೇಳಿದ್ದರು. ಮಗು ಕತ್ತು‌ ಹಿಸುಕಿ, ಈ ವೇಳೆ ಮಗು ಅಸ್ವಸ್ಥಗೊಂಡಿದೆ. ಬಳಿಕ ಹೆಂಡತಿಯ ಮೃತದೇಹವನ್ನು ನೇಣುಕುಣಿಕೆಯಿಂದ ಇಳಿಸಿ ಅದೇ ಕುಣಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಬದುಕುಳಿದಿದೆ. ಈವರೆಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.