ಕಾರವಾರ : ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರೂ ಕೂಡ ಹಾಜರಾಗಿಲ್ಲ ಅಂತ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಎಂಬ ವಿದ್ಯಾರ್ಥಿನಿಯನ್ನು ಫೇಲ್ ಮಾಡಲಾಗಿದೆ. ಶಿರಸಿ ನಗರದ ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯಲ್ಲಿ ಓದುತ್ತಿದ್ದ ಲೀಸಾ ಖಾನಮ್ ಅಂಧ ವಿದ್ಯಾರ್ಥಿನಿಯಾದ್ದರಿಂದ ವಿಷಯ ವಿನಾಯ್ತಿ ಇತ್ತು.
ಅದರಂತೆ ಗಣಿತ ಮತ್ತು ವಿಜ್ಞಾನ ವಿಷಯದ ಬದಲು ಪೊಲಿಟಿಕಲ್ ಸೈನ್ಸ್, ಎಕನಾಮಿಕ್ಸ್ ವಿಷಯದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಇದರಂತೆ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರೂ ಆಬ್ಸೆಂಟ್ ಎಂದು ನಮೂದಿಸಲಾಗಿದೆ. ಉರ್ದು 124, ಕನ್ನಡ -100, ಇಂಗ್ಲೀಷ್ -92, ಎಕನಾಮಿಕ್ಸ್ -98, ಪೊಲಿಟಿಕಲ್ ಸೈನ್ಸ್ -92 ಸೇರಿದಂತೆ ಒಟ್ಟು 526 ಅಂಕದೊಂದಿಗೆ 84.16% ಫಲಿತಾಂಶ ಪಡೆದಿದ್ದಾರೆ.
ತಾನು ಎಲ್ಲಾ ಪರೀಕ್ಷೆ ಬರೆದರೂ ತನ್ನನ್ನು ಫೇಲ್ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಿಲ್ಲ ಎಂದು ನಮೋದಿಸಲಾಗಿದೆ, ಅಂಧತ್ವ ಇದ್ದರೂ ಕಷ್ಟಪಟ್ಟು ಕೇಳಿಸಿಕೊಂಡು ಪರೀಕ್ಷೆ ಪರೆದಿದ್ದೇನೆ ಆದರೆ ಹೀಗೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾಳೆ. ಶಿಕ್ಷಣ ಇಲಾಖೆಗೆ ಎಲ್ಲಾ ದಾಖಲೆ ನೀಡಲಾಗಿದೆ. ಪ್ರಾಧಿಕಾರ ಫೇಲ್ ಮಾಡಿದೆ, ತಕ್ಷಣ ಆದ ಯಡವಟ್ಟನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.














