ಮನೆ ಸುದ್ದಿ ಜಾಲ ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ

ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ

0

98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಇಂದು ನಡೆಯಿತು. ‘ಸಿನ್ನರ್ಸ್‌’ ಸಿನಿಮಾಗಾಗಿ ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

‘ಹ್ಯಾಮ್ನೆಟ್‌’ ಸಿನಿಮಾಗಾಗಿ ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಅವರ ಮೊದಲ ಆಸ್ಕರ್ ಪ್ರಶಸ್ತಿಯಾಗಿದೆ. ನಟಿ-ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಆಸ್ಕರ್ ಪ್ರಶಸ್ತಿ ವಿಜೇತ ಜೇವಿಯರ್ ಬಾರ್ಡೆಮ್ ಜೊತೆಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಸೀಸನ್‌ನಲ್ಲಿ ಪ್ರಶಸ್ತಿ ರೇಸ್‌ನಲ್ಲಿ 16 ಪ್ರಶಸ್ತಿಗಳೊಂದಿಗೆ ಮುಂಚೂಣಿಯಲ್ಲಿದ್ದ ಬ್ಲ್ಯಾಕ್ ಪ್ಯಾಂಥರ್ ನಿರ್ದೇಶಕ ರಯಾನ್ ಕೂಗ್ಲರ್ ಅವರ ‘ಸಿನ್ನರ್ಸ್’ ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಟ (ಮೈಕೆಲ್ ಬಿ ಜೋರ್ಡಾನ್) ಪ್ರಶಸ್ತಿಯು ಒಂದೇ ಸಿನಿಮಾಗೆ ಸಿಕ್ಕಿದೆ.

‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಈ ಸಿನಿಮಾ ಒಟ್ಟು ಐದು ಪ್ರಶಸ್ತಿಗಳನ್ನು ಗಳಿಸಿತು. ಅತ್ಯುತ್ತಮ ಪಾತ್ರವರ್ಗ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ರೂಪಾಂತರಿತ ಚಿತ್ರಕಥೆ, ಪಾಲ್ ಥಾಮಸ್ ಆಂಡರ್ಸನ್‌ಗೆ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಯು ಈ ಸಿನಿಮಾಗೆ ಒಲಿದಿದೆ.