ಬೆಂಗಳೂರು : ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಂಡಜ್ಜಿ ಬಸಪ್ಪ ಕಾರ್ಯಕ್ರಮದಲ್ಲಿ ಹೆಗ್ಡೆ ಕುಸಿದು ಬಿದ್ದರು. ಕೂಡಲೇ ವಾಹನದಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಗ್ಡೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶುಗರ್ ಲೆವೆಲ್ ಕಡಿಮೆಯಾದ ಹಿನ್ನೆಲೆ ಅಸ್ವಸ್ಥಗೊಂಡಿದ್ದರು. ಸ್ಪೀಕರ್ ಖಾದರ್ ತಮ್ಮ ವಾಹನದಲ್ಲೇ ಕರೆತಂದು ಆಸ್ಪತ್ರೆಗೆ ಸೇರಿಸಿದ್ದಾರೆ.
ಪಿಜಿಆರ್ ಸಿಂಧ್ಯಾಗೆ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಅಭಿನಂದನಾ ಕಾರ್ಯಕ್ರಮವಿತ್ತು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಗೆ ವಾಮಿಟ್ ಆಯ್ತು. ಮನೆಗೆ ಹೋಗಬೇಕು ಅಂತಾ ಸ್ಟೇಜ್ನಿಂದ ಹೊರಟಾಗ ಕುಸಿದು ಬಿದ್ದರು.
ಈ ವೇಳೆ ಅಂಬುಲೆನ್ಸ್ ಇರಲಿಲ್ಲ. ನನ್ನ ವಾಹನದಲ್ಲೇ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಆರಾಮಾಗಿ ಇದ್ದಾರೆ. ಸಂತೋಷ್ ಹೆಗ್ಡೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದಾರೆ. ಯಾವುದೇ ತೊಂದರೆಯಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.














