ಬೆಂಗಳೂರು : ಸಿಎಂ ಕುರ್ಚಿ ಗೊಂದಲ ಹೈಕಮಾಂಡ್ ಶೀಘ್ರವೇ ಇತ್ಯರ್ಥ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಕುರ್ಚಿ ವಿಚಾರದಲ್ಲಿ ಗೊಂದಲ ಆಗಬಾರದಿತ್ತು. ಜನ 136 ಸೀಟು ಕೊಟ್ಟಿದ್ದಾರೆ. 2.5 ವರ್ಷದ ಆದ ಮೇಲೆ ಸಂಪುಟ ಪುನರ್ ರಚನೆ ಮಾಡಿ ಕೆಲಸ ಮಾಡದ ಮಂತ್ರಿಗಳನ್ನು ಕೈ ಬಿಟ್ಟಿದ್ದರೆ ಎಲ್ಲವು ಸರಿ ಆಗ್ತಿತ್ತು. ಸಿಎಂ ಕುರ್ಚಿ ವಿಚಾರ ಜನ ಸಾಮಾನ್ಯರಲ್ಲಿ ಚರ್ಚೆ ಆಗ್ತಿದೆ. ಹೈಕಮಾಂಡ್ ಇದನ್ನ ಇತ್ಯರ್ಥ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೈಕಮಾಂಡ್ ಸಿದ್ದರಾಮಯ್ಯ ಅವರನ್ನಾದ್ರು ಮುಂದುವರೆಸಲಿ ಅಥವಾ ಯಾರನ್ನಾದರೂ ಮಾಡಲಿ. ಆದರೆ ಆದಷ್ಟು ಬೇಗ ಗೊಂದಲ ಸರಿ ಮಾಡಬೇಕು. ಆಡಳಿತ ದೃಷ್ಟಿಯಿಂದ ಈ ಗೊಂದಲ ಇತ್ಯರ್ಥ ಮಾಡಬೇಕು. ಅನೇಕ ಇಲಾಖೆಯಲ್ಲಿ ಸಚಿವರ ಮಾತುಗಳನ್ನು ಅಧಿಕಾರಿಗಳು ಕೇಳುತ್ತಿಲ್ಲ. ಆದಷ್ಟು ಬೇಗ ಇದೆಲ್ಲ ಇತ್ಯರ್ಥ ಮಾಡಬೇಕು ಎಂದಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಹೋಗೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯಾವಾಗ ರಾಹುಲ್ ಗಾಂಧಿ ಕರೆಯುತ್ತಾರೆ ಅಂತ ಕಾಯ್ತಾ ಇದ್ದಾರೆ. ರಾಹುಲ್ ಗಾಂಧಿ ವಿದೇಶದಲ್ಲಿದ್ದಾರೆ. ಈ ವಾರದಲ್ಲಿ ಅವರು ವಾಪಸ್ ಆಗಬಹುದು. ಅವರು ವಾಪಸ್ ಬಂದ ಬಳಿಕ ಸಿಎಂ, ಡಿಸಿಎಂ ಸೇರಿಕೊಂಡು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತಾಡ್ತಾರೆ. ಅವರ ಭೇಟಿ ಬಳಿಕ ನಾವು ಶಾಸಕರು ದೆಹಲಿಗೆ ಹೋಗ್ತೀವಿ ಎಂದು ಹೇಳಿದ್ದಾರೆ.
ಈಗ 3 ಸಚಿವ ಸ್ಥಾನ ಖಾಲಿ ಇದೆ. ಒಟ್ಟು 15 ಜನ ಹೊಸ ಶಾಸಕರಿಗೆ ಅವಕಾಶ ಸಿಗಬಹುದು ಎಂಬುದು ನಮ್ಮ ಮಾಹಿತಿ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಕೋಲಾರದಲ್ಲಿ ಬಲಗೈ ಸಮುದಾಯಕ್ಕೆ ಅವಕಾಶ ಕೊಡಬೇಕು. ನನಾನು ಜಿಲ್ಲೆಯಲ್ಲಿ ಹಿರಿಯ ಇದ್ದೇನೆ. ಹೈಕಮಾಂಡ್ ಇದೆಲ್ಲ ಗಮನಿಸಿ ಕೊಡುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
















