ಮನೆ ಸುದ್ದಿ ಜಾಲ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಪೂರೈಕೆ ಮಾಡಿಲ್ಲ – ಪರಮೇಶ್ವರ್‌

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಪೂರೈಕೆ ಮಾಡಿಲ್ಲ – ಪರಮೇಶ್ವರ್‌

0

ಬೆಂಗಳೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಪೂರೈಕೆ ಮಾಡಿಲ್ಲ. ಇದರಿಂದಲೇ ಸಮಸ್ಯೆ ಆಗ್ತಿರೋದು ಎಂದು ಗೃಹಸಚಿವ ಜಿ. ಪರಮೇಶ್ವರ್‌ ಬೇಸರ ವ್ಯಕ್ತಪಡಿಸಿದರು. ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ನಾವು ಕೇಂದ್ರಕ್ಕೆ ಬೇಡಿಕೆಯನ್ನ ಕೊಟ್ಟಿದ್ದೇವೆ. ಒಂದು ರಾಜ್ಯಕ್ಕೆ ಕೊಡಬೇಕಾದ ಅಲಾಟ್‌ಮೆಂಟ್ ಕೊಡಬೇಕು. ಒಂದಿಷ್ಟು ತೊಂದರೆ ಆಗಿದೆ. ಇದು ಎಲ್ಲಾರಿಗೂ ಗೊತ್ತಿದೆ. ಯುದ್ದದಿಂದ ಎಲ್ಲಾರಿಗೂ ತೊಂದರೆ ಆಗಿದೆ.

ಕೇಂದ್ರ ಸರ್ಕಾರ ರಾಜ್ಯ ಬರಬೇಕಾದ ಅನಿಲ ಪೂರೈಕೆ ಮಾಡಿಲ್ಲ. ಕನಿಷ್ಠ ಪೂರೈಕೆಯನ್ನಾದರೂ ಮಾಡಬೇಕಲ್ವಾ? ಅದಕ್ಕಾಗಿ ಸಮಸ್ಯೆ ಆಗ್ತಿದೆ. ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಮರ್ಪಕವಾಗಿ ಕೊಡಲಿ ಎಂದು ಒತ್ತಾಯಿಸಿದ್ದಾರೆ. ನಮಗೆ ಗ್ಯಾಸ್, ಪೆಟ್ರೋಲ್ ಡೀಸೆಲ್ ಬೇಕು, ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಮರ್ಪಕವಾಗಿ ಕೊಡಬೇಕು ಎಂದರಲ್ಲದೇ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ಕೆಲವೆಡೆ ಕೇಸ್ ಕೂಡ ಆಗಿವೆ ಎಂದು ತಿಳಿಸಿದ್ರು.

ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ವಿಚಾರದಲ್ಲಿ ಲೋಕಭವನ ಪತ್ರ ವಿಚಾರ ಕುರಿತು ಮಾತನಾಡಿ, ಇದೇನ್ ಮೊದಲೇನೂ ಅಲ್ವಲ್ಲ. ವಿಶೇಷವಾಗಿ ಹಿಂದಿ ಬಳಸದ ರಾಜ್ಯಗಳಲ್ಲಿ ಮೊದಲಿನಿಂದಲೂ ಇದೆ. ಇದು ಆದಷ್ಟು ಬೇಗ ಬಗೆಹರಿದರೆ ಒಳ್ಳೆಯದು ಎಂದರು. ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಚಾರಕ್ಕೆ ಪ್ರತಿಕ್ರಿತಿಸಿ, ಜನಸಂಖ್ಯೆ ಆಧಾರದ ಮೇಲೆ ಬೇಡ ಎಂಬ ಸಿಎಂ ಹೇಳಿಕೆ ಸರಿ ಇದೆ. ಉತ್ತರ ಭಾರದಲ್ಲಿ ಜನಸಂಖ್ಯೆ ಜಾಸ್ತಿ ಇದೆ ಎಂಬ ಕಾರಣಕ್ಕೆ ಹೇಳಿದ್ದಾರೆ. ನಮ್ಮಲ್ಲಿ ಜನಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದರು.