ಮನೆ ರಾಜ್ಯ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿದ್ದ, ಮೃತದೇಹಗಳು ಪತ್ತೆ..!

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿದ್ದ, ಮೃತದೇಹಗಳು ಪತ್ತೆ..!

0

ಶಿವಮೊಗ್ಗ : ಹುಲಿಕಲ್‌ ಘಾಟ್‌ನಲ್ಲಿ (ಬಾಳೇ ಬರೆ) ಗುಡ್ಡ ಕುಸಿದು ಸಾವನ್ನಪ್ಪಿದ್ದ, ಮತ್ತೊಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ. ಈ ಮೂಲಕ ಎಲ್ಲಾ ಮೂವರು ಕಾರ್ಮಿಕರ ಶವಗಳು ಪತ್ತೆಯಾದಂತಾಗಿದೆ.

ಇಂದು (ಏ.10) ಮುಂಜಾನೆ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್ (40) ಮೃತದೇಹ ಪತ್ತೆಯಾಗಿದೆ. ಘಾಟ್‌ನ ಹೇರ್ ಪಿನ್ ಕ್ರಾಸ್ ನಲ್ಲಿ ಕಾಂಕ್ರೀಟ್ ವಾಲ್ ದುರಸ್ತಿ ವೇಳೆ ಭೂ ಕುಸಿತ ಸಂಭವಿಸಿತ್ತು. ಈ ಅವಘಡದಲ್ಲಿ ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಎಂಬವರು ಸಾವನ್ನಪ್ಪಿದ್ದರು. ಇಬ್ಬರ ಶವ ನಿನ್ನೆ (ಏ.9) ಪತ್ತೆಯಾಗಿದ್ದವು.

ಮೂರು ಮೃತದೇಹಗಳನ್ನು ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ದುರಂತದಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ.