ಮನೆ ಸುದ್ದಿ ಜಾಲ ಮ್ಯೂಸಿಕ್‌ ಪಾರ್ಟಿಯಲ್ಲಿ ಡ್ರಗ್‌ ಓವರ್‌ ಡೋಸ್‌ – ಎಂಬಿಎ ವಿದ್ಯಾರ್ಥಿಗಳು ಸಾವು..!

ಮ್ಯೂಸಿಕ್‌ ಪಾರ್ಟಿಯಲ್ಲಿ ಡ್ರಗ್‌ ಓವರ್‌ ಡೋಸ್‌ – ಎಂಬಿಎ ವಿದ್ಯಾರ್ಥಿಗಳು ಸಾವು..!

0

ಮುಂಬೈ : ಮ್ಯೂಸಿಕ್‌ ಪಾರ್ಟಿಯಲ್ಲಿ ಭಾಗವಹಿಸಿದ್ದ, ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್‌ ಓವರ್‌ ಡೋಸ್‌ನಿಂದ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಏಪ್ರಿಲ್‌ 11 ರ ರಾತ್ರಿ ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ನಡೆದ ಮ್ಯೂಸಿಕ್‌ ಪಾರ್ಟಿಯಲ್ಲಿ ಸುಮಾರು 4,000 ಜನರು 2,000 ರೂ. ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಿದ್ದರು. ಇದೇ ಪಾರ್ಟಿಯಲ್ಲಿ ಘಟನೆ ನಡೆದಿದೆ. ಪಾರ್ಟಿಯಲ್ಲಿ ಪಾಲ್ಗೊಂಡ ಕೆಲವರು ನಿಷೇಧಿತ MDMA ಡ್ರಗ್‌ ಸೇವನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏ.11 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೂವರು ವಿದ್ಯಾರ್ಥಿಗಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಈ ವೇಳೆ 24 ವರ್ಷದ ಯುವತಿ, 28 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾರೆ. 25 ವರ್ಷದ ಮತ್ತೊರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.

ಪೊಲೀಸರ ಪ್ರಕಾರ, ಮೃತ ಇಬ್ಬರಲ್ಲಿ ಒಬ್ಬರು ಕಾರ್ಯಕ್ರಮಕ್ಕೆ ಹೋಗುವಾಗ ಟ್ಯಾಕ್ಸಿಯಲ್ಲೇ ಕುಳಿತು ಒಂದು ಮಾತ್ರೆ ಸೇವಿಸಿದ್ದರು. ಕಾರ್ಯಕ್ರಮದಲ್ಲಿ ಮತ್ತೊಂದು ಮಾತ್ರೆ ಸೇವಿಸಿದ್ದರು. ಇದರಿಂದ ಓವರ್‌ ಡೋಸ್‌ ಆಗಿ ಸಾವು ಸಂಭವಿಸಿದೆ. ಡ್ರಗ್ಸ್‌ ಓವರ್‌ ಡೋಸ್‌ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು, ಮೃತರಿಗೆ ಮಾತ್ರೆ ಪೂರೈಸಿದ್ದ ಆರೋಪಿಯನ್ನ ಬಂಧಿಸಲಾಗಿದೆ, ಆತನಿಂದ 6-7 ಮತ್ತೇರಿಸುವ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.