ಮನೆ ರಾಜ್ಯ ಲವ್‌ ಜಿಹಾದ್​ ಆರೋಪಕ್ಕೆ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ

ಲವ್‌ ಜಿಹಾದ್​ ಆರೋಪಕ್ಕೆ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ

0

ಬಾಗಲಕೋಟೆ : ಆಕೆ‌ ಹಿಂದೂ ಹುಡುಗಿ, ಆತ‌ ಮುಸ್ಲಿಂ ಹುಡುಗ. ಇಬ್ಬರ ಮಧ್ಯೆ ನಾಲ್ಕು ವರ್ಷದಿಂದ ಪ್ರೀತಿ ಇತ್ತಂತೆ. ಆದರೆ ಹುಡುಗಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಈ ಬೆನ್ನಲ್ಲೇ ಲವ್‌ ಜಿಹಾದ್​ ಆರೋಪ ಕೇಳಿಬಂದಿತ್ತು. ಹುಡುಗನ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಂಬಂಧಿಕರು ಗಂಭೀರ ಆರೋಪ ಕೂಡ ಮಾಡಿದ್ದಾರೆ.

ಈ ಮಧ್ಯೆ ಹುಡುಗಿಯ ತಾಯಿ ನೀಡಿದ ದೂರಿನಲ್ಲಿ ಹಲವು ವರ್ಷಗಳಿಂದ ಹುಡುಗ ರಿಲೇಷನ್‌ಶಿಪ್​​​ನಲ್ಲಿದ್ದ ಎಂಬ ಸ್ಫೋಟಕ ವಿಚಾರವನ್ನು ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ ಗೋಯೆಲ್​ ಬಹಿರಂಗ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​​ಪಿ ಸಿದ್ದಾರ್ಥ ಗೋಯೆಲ್​, ನಿನ್ನೆ ಭೂಮಿಕಾ ಮೋಹನ್ ತಿಪ್ಪಣ್ಣವರ ಎಂಬ 19 ವರ್ಷದ ಯುವತಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ನಾವು ಹಾಗೂ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದೆವು.

ಸೀನ್ ಆಫ್ ಕ್ರೈಂ ಅಧಿಕಾರಿಗಳು ಕೂಡ ಬಂದಿದ್ದರು. ಹುಡುಗಿಯ ಫೋನ್ ಸೀಜ್ ಮಾಡಿದ್ದೇವೆ. ಡೊಂಗ್ರಿ ಸಾಬ್ ನದಾಫ್ ಎಂಬ ಹುಡುಗನ ಮೇಲೆ ಯುವತಿ ತಾಯಿ ಕೊಟ್ಟ ದೂರಿನ ಮೇಲೆ ಎಫ್​ಐಆರ್​ ದಾಖಲಿಸಿದ್ದೇವೆ. ಆತನ ಫೋನ್ ಕೂಡ ಸೀಜ್ ಮಾಡಿದ್ದೇವೆ ಎಂದು ಹೇಳಿದರು.

ಕ್ರೈಂ ನಂ 68/2026, ಬಿಎನ್​ಎಸ್ 108 ಆತ್ಮಹತ್ಯೆಗೆ ಪ್ರೇರಣೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ ಆ ಹುಡುಗನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಅವರ ತಾಯಿ ಹೇಳುವ ಪ್ರಕಾರ ಹುಡುಗಿಯ ಜೊತೆ ಹಲವು ವರ್ಷಗಳಿಂದ ಹುಡುಗ ರಿಲೇಷನ್‌ಶಿಪ್​​ನಲ್ಲಿದ್ದ​. ಮದುವೆ ಮಾಡಿಕೊಳ್ಳಲು ಆತ ಒತ್ತಾಯ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆದ ಕಾರಣ ಮಾನಸಿಕವಾಗಿ ನೊಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ದೂರದಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಯುವತಿಗೆ ಯಾವ ರೀತಿ ಟಾರ್ಚರ್ ಕೊಡಿತ್ತಿದ್ದರು, ಏನೆಲ್ಲಾ ತೊಂದರೆ ಕೊಡುತ್ತಿದ್ದರು ಅದರ ಬಗ್ಗೆ ಸಂಪೂರ್ಣ ವಿಚಾರಣೆ ಮಾಡಿ ನಾವು ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಎರಡು ಸಮುದಾಯದವರೆಗೂ ನಾವು ಮನವಿ ಮಾಡುತ್ತೇವೆ ದಯವಿಟ್ಟು ಶಾಂತಿ ಕಾಪಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಪ್ರಕಾರ ನಾವು ಕ್ರಮಕೈಗೊಳ್ಳುತ್ತೇವೆ. ಡೆತ್ ನೋಟ್ ಏನು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಇನ್ನು ಹಿಂದೂಪರ ಸಂಘಟನೆಯಿಂದ ಲವ್ ಜಿಹಾದ್ ಆರೋಪ‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಯಿಯ ದೂರಿನಲ್ಲಿ ಸದ್ಯಕ್ಕೆ ಅಂತಹ ಯಾವುದೇ ವಿಷಯಗಳ ಉಲ್ಲೇಖವಿಲ್ಲ. ಅವರಿಗೆ ಅವಕಾಶ ಇದೆ, ಇನ್ನೊಂದು ಸಾರಿ ದೂರು ಕೊಡುವುದಕ್ಕೆ. ಅವರು ಏನೆಲ್ಲಾ ವಿಷಯಗಳನ್ನು ಉಲ್ಲೇಖ ಮಾಡುತ್ತಾರೆ ಅದರ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಎಸ್​​ಪಿ ಸಿದ್ದಾರ್ಥ ಗೋಯೆಲ್ ಹೇಳಿದ್ದಾರೆ.