ಮೈಸೂರು : ಸಿದ್ದಾರ್ಥ ನಗರದ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುರೇಶ್ ಎಂಬುವವರ ಮನೆಯ ಮಂಚದ ಕೆಳಗೆ ಅವಿತು ಕುಳಿತಿರೋದು ಕಂಡುಬಂದಿದೆ. ಸುರೇಶ್ ಪತ್ನಿ ಸುಜಾತಾ, ತಾಯಿ ಶೈಲಜಾ ಮನೆಯಲ್ಲಿದ್ದಾಗ ಏಕಾಏಕಿ ಮನೆಗೆ ಎಂಟ್ರಿಕೊಟ್ಟ ಚಿರತೆ ವೃದ್ಧೆ ಶೈಲಜಾ ಮಲಗಿದ್ದ, ಕೊಠಡಿಯೊಳಗೆ ಪ್ರವೇಶಿಸಿದೆ.
ಸಮಯಪ್ರಜ್ಞೆಯಿಂದ ಅತ್ತೆ ಶೈಲಜಾರನ್ನು ಈ ವೇಳೆ ಸುಜಾತಾ ರಕ್ಷಣೆ ಮಾಡಿದ್ದು, ಏಕಾಏಕಿ ಚಿರತೆ ನುಗ್ಗಿದ್ದರಿಂದ ಮನೆಯವರು ಆತಂಕಕ್ಕೀಡಾದ ಪ್ರಸಂಗ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.














