ಮನೆ ರಾಜ್ಯ ಲಂಚಕ್ಕೆ ಕೈಯೊಡ್ಡಿ ರೆಡ್‌ಹ್ಯಾಂಡ್ ಆಗಿ `ಲೋಕಾ’ ಬಲೆಗೆ ಬಿದ್ದ ಪಿಎಸ್‌ಐ

ಲಂಚಕ್ಕೆ ಕೈಯೊಡ್ಡಿ ರೆಡ್‌ಹ್ಯಾಂಡ್ ಆಗಿ `ಲೋಕಾ’ ಬಲೆಗೆ ಬಿದ್ದ ಪಿಎಸ್‌ಐ

0

ಬಾಗಲಕೋಟೆ : ಬಾದಾಮಿ ತಾಲೂಕಿನ ಕೆರೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಎಸ್‌ಐ ಹಾಗೂ ಪೇದೆ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಕೆರೂರು ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಎಂದು ಗುರುತಿಸಲಾಗಿದೆ.

ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಕೈಬಿಡಲು ಹಾಗೂ ಆತನ ಬೈಕ್‌ ಬಿಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.70 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲಂಚದ ಬೇಡಿಕೆ ಬಗ್ಗೆ ಮುತ್ತಪ್ಪ ನಾಯ್ಕರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಫೋನ್‌ ಕರೆ ರೆಕಾರ್ಡಿಂಗ್ ಆಧಾರದ ಮೇಲೆ ದಾಳಿ ಮಾಡಿ ಇಬ್ಬರನ್ನು ಲೋಕಾಯುಕ್ತ ಬಂಧಿಸಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಲೋಕಾಯುಕ್ತ ಎಸ್.ಪಿ ಮಹಾಲಿಂಗ್ ನಂದಗಾಂವಿ ಮಾರ್ಗದರ್ಶನದಲ್ಲಿ, ಲೋಕಾ ಡಿವೈಎಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.