ಮನೆ ಸುದ್ದಿ ಜಾಲ ರಷ್ಯಾ ಅಧ್ಯಕ್ಷ ಪುಟಿನ್​ : ಮೋದಿ ಮೇಲೆ ನಿರ್ಬಂಧ ಬೆದರಿಕೆ ವ್ಯರ್ಥ ̧  ಭಾರತ ನಮ್ಮ...

ರಷ್ಯಾ ಅಧ್ಯಕ್ಷ ಪುಟಿನ್​ : ಮೋದಿ ಮೇಲೆ ನಿರ್ಬಂಧ ಬೆದರಿಕೆ ವ್ಯರ್ಥ ̧  ಭಾರತ ನಮ್ಮ ಸಹೋದರ ಪಾಲುದಾರ

0

ನವದೆಹಲಿ: ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಂದ ಮಾರ್ಗದರ್ಶಿಸಲ್ಪಟ್ಟ ಸಾರ್ವಭೌಮ ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ವಿರುದ್ಧ ನಿರ್ಬಂಧಗಳ ಬೆದರಿಕೆಗಳು ವ್ಯರ್ಥವಾಗಲಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಮಾಸ್ಕೋದಲ್ಲಿ ನಡೆದ ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ 2026ರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತವನ್ನು ಸಹೋದರ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಕರೆದರು. ನವದೆಹಲಿಯೊಂದಿಗಿನ ಪಾಲುದಾರಿಕೆಯಲ್ಲಿ ರಷ್ಯಾದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಭಾರತದೊಂದಿಗಿನ ರಷ್ಯಾದ ಸಹಕಾರವು ರಾಜಕೀಯ ಸಂದರ್ಭಗಳಿಂದ ಪ್ರಭಾವಿತವಾಗಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತವು ರಷ್ಯಾದ ಬಹು ಪ್ರಮುಖ ಪಾಲುದಾರನಾಗಿದ್ದು, ಈ ದ್ವಿಪಕ್ಷೀಯ ಸಹಕಾರಗಳು ಬದಲಾಗುವ ರಾಜಕೀಯ ಪರಿಸ್ಥಿತಿಗಳಿಂದ ಪ್ರಭಾವಿತವಾಗಿಲ್ಲ. ನಾವು ಉತ್ತಮ ನಂಬಿಕೆ ಆಧಾರಿತ ಸಹೋದರತ್ವದ ಸಂಬಂಧವನ್ನು ಹೊಂದಿದ್ದೇವೆ ಎಂದು ಬಣ್ಣಿಸಿದರು. ಭಾರತದ ಮಾನವ ಸಂಪನ್ಮೂಲವನ್ನು ಪ್ರಶಂಸಿ ಮಾತನಾಡಿದ ಅವರು, ಭಾರತೀಯರು ಹೆಚ್ಚು ಶಿಕ್ಷಿತರಾಗಿದ್ದು, ವಿಶೇಷವಾಗಿ ಕೋಡಿಂಗ್​ ಮತ್ತು ತಂತ್ರಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ಜಾಗತಿಕ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಭಾರತ ಜಾಗತಿಕ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ ಎಂದು ಪುಟಿನ್​ ಹೇಳಿದರು. ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನತೆಗೆ ಸಂಬಂಧಿಸಿದ ಇತ್ತೀಚಿನ ಅಡೆತಡೆಗಳನ್ನು ಉಲ್ಲೇಖಿಸಿದ ರಷ್ಯಾ ಅಧ್ಯಕ್ಷರು, ರಷ್ಯಾ ಮತ್ತು ಭಾರತೀಯ ಕಂಪನಿಗಳು ಸಹಕಾರವನ್ನು ಹೆಚ್ಚಿಸುವ ಮೂಲಕ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿವೆ. ರಷ್ಯಾ ಭಾರತ ಮತ್ತು ಇತರ ಏಷ್ಯಾದ ಮಾರುಕಟ್ಟೆಗಳಿಗೆ ಪೂರೈಕೆಯನ್ನು ಹೆಚ್ಚಿಸುತ್ತಿದೆ. ತನ್ನ ಪಾಲುದಾರರೊಂದಿಗೆ ತಾಂತ್ರಿಕ ಪರಿಹಾರಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತಿದೆ ಎಂದರು. ಹಾಗೂ ಭಾರತದೊಂದಿಗಿನ ಮಾಸ್ಕೋದ ಪಾಲುದಾರಿಕೆಯನ್ನು ಬಾಹ್ಯ ಶಕ್ತಿಗಳು ನಿರ್ದೇಶಿಸಲು ಸಾಧ್ಯವಿಲ್ಲ. ನಮ್ಮ ಎಲ್ಲ ಇತರ ಪಾಲುದಾರರಂತೆ ಭಾರತದೊಂದಿಗಿನ ನಮ್ಮ ಸಹಕಾರವು ರಾಜಕೀಯ ಪ್ರೇರಿತವಾಗಿಲ್ಲ. ನಾವು ಭಾರತಕ್ಕೆ ಏನು ನೀಡಬೇಕು ಅಥವಾ ಏನು ಮಾಡಬಾರದು ಎಂದು ಯಾರೂ ನಮಗೆ ನಿರ್ದೇಶಿಸಲು ಸಾಧ್ಯವಿಲ್ಲ. ರಷ್ಯಾ ಪಾಲುದಾರಿಕೆ ವಿಶೇಷವಾಗಿ ಭಾರತದಂತಹ ದೇಶಗಳಿಗೆ ನೀಡಿದ ಬದ್ಧತೆಗಳನ್ನು ಪಾಲಿಸುವುದನ್ನು ಮುಂದುವರಿಸುತ್ತದೆ ಎಂದು ಒತ್ತಿ ಹೇಳಿದರು.

ಇದರಿಂದ ಭಾರತದೊಂದಿಗಿನ ರಕ್ಷಣಾ ಸಂಬಂಧಗಳ ಕುರಿತು ಉಲ್ಲೇಖಿಸಿದ ಪುಟಿನ್​, ಯುಗದಿಂದಲೂ ಭಾರತ ಮತ್ತು ರಷ್ಯಾ ಸೋವಿಯತ್ ಮಿಲಿಟರಿ ಮತ್ತು ತಾಂತ್ರಿಕ ಸಹಕಾರದ ದೀರ್ಘ ಇತಿಹಾಸ ಹೊಂದಿದೆ. ಭಾರತದ ಸಶಸ್ತ್ರ ಪಡೆಗಳಲ್ಲಿನ ಗಮನಾರ್ಹ ಭಾಗವು ರಷ್ಯಾದ ಉಪಕರಣಗಳಿಂದ ಸಜ್ಜುಗೊಂಡಿದೆ. ಇದು ಸೋವಿಯತ್ ಕಾಲದಿಂದಲೂ ಬಂದಿರುವ ಸಂಪ್ರದಾಯವಾಗಿದೆ. ಈ ಸಂಬಂಧವು ರಕ್ಷಣಾ ಉಪಕರಣಗಳ ಖರೀದಿ ಮತ್ತು ಮಾರಾಟವನ್ನು ಮೀರಿ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ. ಭಾರತ ಮತ್ತು ರಷ್ಯಾದ ತಜ್ಞರ ನಡುವಿನ ಯಶಸ್ವಿ ಸಹಯೋಗಕ್ಕೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಸಾಕ್ಷಿಯಾಗಿದೆ ಎಂದು ಅವರು ಉದಾಹರಣೆಯನ್ನೂ ನೀಡಿದರು. ಭಾರತವು ತನ್ನ ಅವಶ್ಯಕತೆಗಳಿಗೆ ಸೂಕ್ತವಾದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಆಯ್ಕೆ ಮಾಡಲು ಮುಕ್ತವಾಗಿದೆ. ಭಾರತವೂ ಸದಾ ದೇಶದ ಹಿತಾಸಕ್ತಿಯಿಂದ ಮಾರ್ಗದರ್ಶಿತವಾಗಿದೆ ಎಂದು ತಿಳಿಸಲಾಗಿದೆ.