Facebook Instagram Share Twitter Youtube
  • ಸುದ್ದಿ ಜಾಲ
    • ಅಂಕಣ
    • ಅಂತರಾಷ್ಟ್ರೀಯ
    • ಆಟೋ ಮೊಬೈಲ್
    • ಕೃಷಿ
    • ತಂತ್ರಜ್ಞಾನ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Monday, April 27, 2026
  • About Us
  • Contact us
Facebook Instagram Share Twitter Youtube
Saval News
  • ಸುದ್ದಿ ಜಾಲ
    • IPL 2026 : ರಘುವಂಶಿಗೆ 4.28 ಲಕ್ಷರೂ. ದಂಡ!
      ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’ – ಕುಣಿಗಲ್ ಶಾಸಕ ರಂಗನಾಥ್
      ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ – ಅಶೋಕ್ ಪಟ್ಟಣ್
      ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು – ವೈದ್ಯರಿಲ್ಲದೆ ಮಹಿಳೆಯರಿಂದಲೇ ಹೆರಿಗೆ..!
      ವಿದ್ಯಾರ್ಥಿಗಳ ನಡುವೆ ಘರ್ಷಣೆ, ದರೋಡೆ, ಕೇರಳ-ತಮಿಳುನಾಡು ಮೂಲದ ಆರು ವಿದ್ಯಾರ್ಥಿಗಳ ಬಂಧನ!
      ಎಲ್ಲಾಅಂಕಣಅಂತರಾಷ್ಟ್ರೀಯಆಟೋ ಮೊಬೈಲ್ಕೃಷಿತಂತ್ರಜ್ಞಾನ
  • ವೀಡಿಯೋಗಳು
    • ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’ – ಕುಣಿಗಲ್ ಶಾಸಕ ರಂಗನಾಥ್
      ಮೀಸಲಾತಿ ಅನ್ವಯವಾಗದ ಹುದ್ದೆಗಳನ್ನು ಜನರಲ್ ಎಸ್‌ಸಿ ಎಂದು ಕರೆದರೆ ಅದು ಒಳಮೀಸಲಾತಿ ಹೇಗೆ ಆಗುತ್ತೆ – ಛಲವಾದಿ ನಾರಾಯಣಸ್ವಾಮಿ
      ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಗೇಮ್ – ಹೈಕಮಾಂಡ್ ಮುಂದೆ ಖಡಕ್ ಷರತ್ತುಗಳು..!
      ದೆಹಲಿ ಅಂಗಳದಲ್ಲಿ ಡಿಸಿಎಂ ಡಿಕೆಶಿ ತಮ್ಮ ಪವರ್ ಕ್ಲೈಮ್ ಆರಂಭಿಸಿದ್ರಾ..?!
      SSLCಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್​​ ಬಗ್ಗೆ BJP, JDS ಕಿಡಿ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ಸುದ್ದಿ ಜಾಲ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು – ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದ್ದು, ಯಾಕೆ?
  • ಸುದ್ದಿ ಜಾಲ
  • ರಾಷ್ಟ್ರೀಯ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು – ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದ್ದು, ಯಾಕೆ?

April 25, 2026
0
Share
WhatsApp
Telegram
Facebook
Twitter
Email

    ನವದೆಹಲಿ : ನಿಯಮಗಳನ್ನು ನಿರಂತರ ಉಲ್ಲಂಘನೆ ಮಾಡಿದ್ದಕ್ಕೆ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿದ್ದು, ಇದು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಬ್ಯಾಂಕ್ ಪದೇ ಪದೇ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಆರ್‌ಬಿಐ ಬ್ಯಾಂಕಿನ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

    ಏನಿದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ? – ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿ ಬರುವ ವಿಶೇಷ ಬ್ಯಾಂಕ್‌ ಆಗಿತ್ತು.ಇದು ಸಾಮಾನ್ಯ ಬ್ಯಾಂಕುಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿತ್ತು.ಇವು ಗ್ರಾಹಕರಿಂದ ಠೇವಣಿ ಸ್ವೀಕರಿಸಲು ಅನುಮತಿ ಇತ್ತು. ಆದರೆ ಸಾಲ ನೀಡಲು ಅಥವಾ ಕ್ರೆಡಿಟ್ ಕಾರ್ಡ್ ನೀಡಲು ಇವುಗಳಿಗೆ ಅನುಮತಿ ಇರುವುದಿಲ್ಲ.

    ಈ ಬ್ಯಾಂಕ್ ಖಾತೆಯಲ್ಲಿ ಒಬ್ಬ ಗ್ರಾಹಕರು ಗರಿಷ್ಠ 2 ಲಕ್ಷದವರೆಗೆ ಮಾತ್ರ ಹಣವನ್ನು ಇಟ್ಟುಕೊಳ್ಳಲು ಅವಕಾಶವಿತ್ತು. ಇದು ಉಳಿತಾಯ ಖಾತೆ (Savings Account), ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಸೇವೆಗಳನ್ನು ನೀಡುತ್ತಿತ್ತು. ಇದಕ್ಕೆ ಸಾಮಾನ್ಯ ಬ್ಯಾಂಕುಗಳಂತೆ ಹೆಚ್ಚಿನ ಭೌತಿಕ ಶಾಖೆಗಳಿರಲಿಲ್ಲ. ಮೊಬೈಲ್ ಆಪ್ ಮೂಲಕವೇ ಎಲ್ಲ ವ್ಯವಹಾರಗಳು ನಡೆಯುತ್ತಿದ್ದವು.

    ಲೈಸೆನ್ಸ್‌ ರದ್ದಿಗೆ ಕಾರಣ ಏನು? – ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣಕಾಸು ವಹಿವಾಟು ಮತ್ತು ಅದಕ್ಕೆ ಸಂಬಂಧಿಸಿದ ಲೋಪಗಳ ಬಗ್ಗೆ ಆರ್‌ಬಿಐ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ಗ್ರಾಹಕರ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದವು. ಉದಾಹರಣೆಗೆ ಒಂದು ಪ್ಯಾನ್ ಕಾರ್ಡ್ ಅನ್ನು ಸಾವಿರಾರು ಖಾತೆಗಳಿಗೆ ಲಿಂಕ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದು ಹಣದ ಮೂಲವನ್ನು ಪತ್ತೆ ಹಚ್ಚಲು ಕಷ್ಟವಾಗುವಂತೆ ಮಾಡಿತ್ತು.

    ಲಕ್ಷಾಂತರ ಖಾತೆಗಳಲ್ಲಿ ಸರಿಯಾದ ಗ್ರಾಹಕರ ಮಾಹಿತಿ ಇರಲಿಲ್ಲ. ಬಹಳ ಮುಖ್ಯವಾಗಿ ಪೇಮೆಂಟ್ ಬ್ಯಾಂಕ್‌ಗಳಿಗೆ ನಿಗದಿಪಡಿಸಿದ ವಹಿವಾಟಿನ ಮಿತಿಯನ್ನು ಮೀರಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತಿದ್ದುದ್ದು ಆರ್‌ಬಿಐನ ಸಂಶಯಕ್ಕೆ ಕಾರಣವಾಗಿತ್ತು. ಯಾವುದೇ ಹಣವಿಲ್ಲದ ಲಕ್ಷಾಂತರ ಖಾತೆಗಳನ್ನು ವ್ಯವಸ್ಥಿತವಾಗಿ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗುತ್ತಿತ್ತು ಹೆಚ್ಚಿನ ಸಂಖ್ಯೆಯ Dormant ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಯ ಮಧ್ಯವರ್ತಿ ಖಾತೆಗಳಾಗಿ ಬಳಸುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

    ಆನ್‌ಲೈನ್ ಜೂಜಿನಂತಹ ಅಕ್ರಮ ಕೃತ್ಯಗಳಲ್ಲಿ ತೊಡಗಿದ್ದ ಸಂಸ್ಥೆಗಳು ಈ ಬ್ಯಾಂಕ್ ಖಾತೆಗಳನ್ನು ಹಣ ವರ್ಗಾವಣೆಗೆ ಬಳಸಿಕೊಂಡಿದ್ದವು. ಈ ಕಾರಣಕ್ಕೆ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್ ಬ್ಯಾಂಕಿಗೆ ಈ ಹಿಂದೆ 5.49 ಕೋಟಿ ರೂ. ದಂಡ ವಿಧಿಸಿತ್ತು.

    ಬ್ಯಾಂಕಿನ ದತ್ತಾಂಶಗಳು ಮತ್ತು ಸರ್ವರ್‌ಗಳು ವಿದೇಶಿ ಮೂಲದ ಸಂಸ್ಥೆಗಳೊಂದಿಗೆ ಅಥವಾ ಪೇಟಿಎಂನ ಇತರ ಅಂಗಸಂಸ್ಥೆಗಳೊಂದಿಗೆ ಸರಿಯಾದ ಪರವಾನಗಿ ಇಲ್ಲದೆ ಹಂಚಿಕೆಯಾಗುತ್ತಿವೆ ಎಂಬ ಆತಂಕವಿತ್ತು. ಬಹಳ ಮುಖ್ಯವಾಗಿ ಚೀನಾ ಮೂಲದ ಕಂಪನಿಗಳಿಗೆ (ಆಂಟ್ ಗ್ರೂಪ್‌ನಂತಹ ಹೂಡಿಕೆದಾರರು) ಸೋರಿಕೆಯಾಗುತ್ತಿರುವ ಆತಂಕವಿತ್ತು. ಭಾರತೀಯ ಗ್ರಾಹಕರ ಆರ್ಥಿಕ ಮಾಹಿತಿ ವಿದೇಶಕ್ಕೆ ಹೋಗುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಆರ್‌ಬಿಐ ಪರಿಗಣಿಸಿತ್ತು

    ಹಣ ವರ್ಗಾವಣೆಯ ಮೇಲೆ ನಿಗಾ ಇಡುವ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಸಂಶಯಾಸ್ಪದ ವಹಿವಾಟುಗಳನ್ನು ಗುರುತಿಸಲು ಬ್ಯಾಂಕ್ ವಿಫಲವಾಗಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಮಾತೃ ಸಂಸ್ಥೆಯಾದ One97 Communications (OCL) ನೊಂದಿಗೆ ಅತಿಯಾದ ಅವಲಂಬನೆ ಹೊಂದಿತ್ತು. ಬ್ಯಾಂಕಿಂಗ್ ನಿಯಮಗಳ ಪ್ರಕಾರ ಬ್ಯಾಂಕ್ ಒಂದು ಸ್ವತಂತ್ರ ಘಟಕವಾಗಿ ಕಾರ್ಯನಿರ್ವಹಿಸಬೇಕು. ಆದರೆ ಪೇಟಿಎಂನಲ್ಲಿ ಹಣಕಾಸಿನ ನಿರ್ಧಾರಗಳು ಮತ್ತು ದತ್ತಾಂಶಗಳು ಈ ಎರಡು ಸಂಸ್ಥೆಗಳ ನಡುವೆ ಸರಿಯಾದ ಅಂತರವಿಲ್ಲದೆ ಹಂಚಿಕೆಯಾಗುತ್ತಿದ್ದವು.

    ಆರ್‌ಬಿಐ ಈ ಬ್ಯಾಂಕಿನ ಮೇಲೆ ಕಣ್ಣಿಟ್ಟಿದ್ದು, ನಿಯಮಗಳನ್ನು ಸರಿಪಡಿಸಿಕೊಳ್ಳಲು ಹಲವು ಅವಕಾಶಗಳನ್ನು ನೀಡಿತ್ತು. ಆದರೆ ಬ್ಯಾಂಕ್ ಈ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಪದೇ ಪದೇ ವಿಫಲವಾಗಿತ್ತು. ಆರ್‌ಬಿಐ ಕೇಳಿದಾಗಲೆಲ್ಲಾ ಬ್ಯಾಂಕ್ ಎಲ್ಲವೂ ಸರಿಯಿದೆ ಎಂದು ವರದಿ ನೀಡುತ್ತಿತ್ತು. ಆದರೆ ಆರ್‌ಬಿಐ ನಡೆಸಿದ ಆಡಿಟಿಂಗ್‌ನಲ್ಲಿ ಬ್ಯಾಂಕ್ ನೀಡಿದ ವರದಿಗಳು ಸುಳ್ಳು ಎನ್ನುವುದು ಸಾಬೀತಾಗಿತ್ತು.

    ಬ್ಯಾಂಕಿನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಲೋಪಗಳಿದ್ದು ಆನ್‌ಲೈನ್ ವಂಚನೆಗಳನ್ನು ತಡೆಯುವಲ್ಲಿ ವಿಫಲವಾಗಿತ್ತು. ಸೈಬರ್ ಭದ್ರತೆಯ ಕೊರತೆಯಿಂದಾಗಿ ಹಣಕಾಸಿನ ಅಪಾಯಗಳು ಹೆಚ್ಚಿದ್ದವು. ಆದರೂ ಬ್ಯಾಂಕ್ ತನ್ನ ಕಾರ್ಯವೈಖರಿಯಲ್ಲಿ ಯಾವುದೇ ಗಂಭೀರ ಬದಲಾವಣೆ ಮಾಡಿಕೊಂಡಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಬ್ಯಾಂಕ್ ಮೂಲಕ ನಡೆಯುವ ಹಣಕಾಸು ವ್ಯವಹಾರಗಳು ದೇಶದ ಆರ್ಥಿಕ ಭದ್ರತೆಗೆ ಮತ್ತು ಠೇವಣಿದಾರರಿಗೆ ಅಪಾಯಕಾರಿ ಎಂದು ಪರಿಗಣಿಸಿ ಈಗ ಕಠಿಣ ಕ್ರಮ ಕೈಗೊಂಡಿದೆ.‌

    • ಟ್ಯಾಗ್ಗಳು
    • cancellation
    • Communications
    • deposit
    • Dormant
    • IT
    • KYC
    • Licence
    • loan
    • Money Laundering
    • Monitoring system
    • One97
    • One97 Communications
    • Paytm Payments
    • PPBL
    • RBI
    • Savings Account
    • Strict action
    • Zero Balance
    Share
    WhatsApp
    Telegram
    Facebook
    Twitter
    Email
      ಹಿಂದಿನ ಲೇಖನಒಂದೇ ಪಂದ್ಯದಲ್ಲಿ ಡಬಲ್ ದಾಖಲೆ ಬರೆದ ಕಿಂಗ್‌ ಕೊಹ್ಲಿ
      ಮುಂದಿನ ಲೇಖನದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಾಲು ಸಂಕ
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ಸುದ್ದಿ ಜಾಲ

      IPL 2026 : ರಘುವಂಶಿಗೆ 4.28 ಲಕ್ಷರೂ. ದಂಡ!

      ರಾಜ್ಯ

      ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’ – ಕುಣಿಗಲ್ ಶಾಸಕ ರಂಗನಾಥ್

      ರಾಜ್ಯ

      ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ – ಅಶೋಕ್ ಪಟ್ಟಣ್

      EDITOR PICKS

      ಜಾಗತಿಕ  ಬಂಡವಾಳ ಹೂಡಿಕೆದಾರರ ಸಮಾವೇಶ : ವರ್ಚುಯಲ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

      Saval - November 2, 2022

      ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ: 17 ಮಂದಿ ಸಾವು- ನೆರವಿಗೆ ಮನವಿ

      Saval - April 18, 2024

      ಭಾರತೀಯ ಸೇನಾ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು

      Saval - October 5, 2022

      ಕೇರಳ: ದರೋಡೆಗೆಂದು ಬಂದಿದ್ದ ವ್ಯಕ್ತಿಯಿಂದ ಮಹಿಳೆ ಮೇಲೆ ಅತ್ಯಾಚಾರ

      Saval - August 26, 2024
      Saval TV on YouTube
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಚಿತ್ರದುರ್ಗದಲ್ಲಿ ಹೆಚ್ಚಾಯ್ತು ಕಳ್ಳರ ಹಾವಳಿ #shorts
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Chicken Pepper Special #shorts
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಸುತ್ತೂರು ಜಾತ್ರಾ ಮಹೋತ್ಸವ 2026 #shorts
      Load More... Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies