ಅರಿಶಿಣ ಪುಡಿ ಇಲ್ಲದೇ ಅಡುಗೆ, ಆಹಾರ ತಯಾರಿಕೆ ಸಂಪೂರ್ಣ ಆಗಲ್ಲ. ಅರಿಶಿಣ ಪುಡಿ ಅತ್ಯವಶ್ಯಕ. ಆದರೆ ಈಗ ರಾಜ್ಯದ ಜನರು ಆತಂಕ ಪಡುವಂತಹ ವಿಚಾರ ಬಯಲಿಗೆ ಬಂದಿದೆ. ಅರಿಶಿಣಪುಡಿಯಲ್ಲಿ ಕಲಬೆರಕೆ ಕುರಿತು ದೂರು ದಾಖಲಾಗುತ್ತಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಮಸಾಲೆ ಪೌಡರ್, ಅರಿಶಿಣ ಪುಡಿ ಟೆಸ್ಟ್ಗೆ ಸರ್ಕಾರವೇ ಆದೇಶಿಸಿದೆ.
ಅರಿಶಿಣ ಪುಡಿ ಮತ್ತು ಬೇರುಗಳಲ್ಲಿ ಸೀಸದ ಅಂಶ ಕಲಬೆರಕೆ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಗೆ ದೂರು ದಾಖಲಾಗಿದೆ. ಅರಿಶಿಣಪುಡಿ ಮತ್ತು ಮಸಾಲೆ ಪುಡಿ ಗಟ್ಟಿ ಬರಲಿ ಅಂತಾ ಕಲಬೆರಕೆ ಮಾಡುತ್ತಿದ್ದಾರೆ ಎಂದು ದೂರು ದಾಖಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಮಸಾಲೆ ಪುಡಿ ಅರಿಶಿಣ ಪುಡಿ ಟೆಸ್ಟ್ ಮಾಡಲು ಸರ್ಕಾರ ಆದೇಶ ಮಾಡಿದೆ.
ಅರಿಶಿಣ ಪುಡಿಗೆ ಯಾವುದೋ ಚೆಕ್ಕೆಯ ಪುಡಿಗಳನ್ನ ಮಿಕ್ಸ್ ಮಾಡುತ್ತಿದ್ದಾರೆ ಎಂಬುದು ದೂರು. ಈ ಕಲಬೆರಕೆಯಿಂದ ಕ್ಯಾನ್ಸರ್ಗೆ ಕಾರಣ ಆಗೋದು ಅಲ್ಲದೇ ಹಲವು ಹಾನಿಕಾರಕ ಅಂಶಗಳಿಗೆ ಕಾರಣ ಆಗಲಿದೆ. ಜೊತೆಗೆ ಖಾಯಿಲೆಗಳಿಗೆ ಮಾರ್ಗ ಆಗುತ್ತದೆ ಎಂಬುದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ಇರುವ ಅಂಶ. ಹೀಗಾಗಿ ರಾಜ್ಯಾದ್ಯಂತ ಮಸಾಲೆ ಪುಡಿ, ಅರಿಶಿಣ ಪುಡಿ ಸ್ಯಾಂಪಲ್ಗಳನ್ನ ಕಲೆಕ್ಟ್ ಮಾಡಿ ಟೆಸ್ಟ್ಗೆ ರವಾನೆ ಮಾಡಲಾಗುತ್ತಿದೆ.














