ಸಿನಿಮಾ ರಂಗದ ಬಹುತೇಕ ಜನರು ದೇವರಲ್ಲಿ ವಿಶ್ವಾಸ ಇರುವವರೇ ಆಗಿದ್ದಾರೆ. ಸಿನಿಮಾಗಳ ಚಿತ್ರೀಕರಣ ಆರಂಭವಾಗುವುದೇ ದೇವರ ಪೂಜೆಯ ಮೂಲಕ, ಮುಗಿಯುವುದು ಸಹ ಪೂಜೆಯ ಮೂಲಕವೇ ಆಗಿದೆ. ಆದರೆ ನಟ-ನಟಿಯರ ಶ್ರೀಮಂತ ಜೀವನ ಶೈಲಿಯಲ್ಲಿ, ಪಾರ್ಟಿಗಳು, ಅವರ ಬಟ್ಟೆಗಳು ಇನ್ನಿತರೆಗಳನ್ನು ಗಮನಿಸುವ ಜನ ದೇವರಲ್ಲಿ ನಂಬಿಕೆ ಇಲ್ಲದವರು ಎಂದು ಅಂದುಕೊಂಡಿರುತ್ತಾರೆ. ಆದರೆ ನಟಿ ಶ್ರುತಿ ಹಾಸನ್, ಪಾಶ್ಚಾತ್ಯ ಶೈಲಿಯ ಜೀವನ ನಿರ್ವಹಣೆ ಮಾಡುವ ನಟಿಯರಲ್ಲಿ ಒಬ್ಬರು. ಲಿವಿನ್ ರಿಲೇಶನ್ ಶಿಪ್, ಪದೇ ಪದೇ ಬದಲಾಗುವ ಬಾಯ್ಫ್ರೆಂಡ್, ನೈಟ್ ಲೈಫ್, ಪಾರ್ಟಿಗಳು, ಇನ್ನೂ ಹಲವು ರೀತಿ. ಆದರೆ ಅವರು ಅಪ್ಪಟ ದೇವರ ಭಕ್ತೆ. ದೇವಸ್ಥಾನ ಒಂದಕ್ಕೆ ಭೇಟಿ ನೀಡಿದ್ದಕ್ಕೆ ತಮ್ಮ ಬದುಕು ಬದಲಾಯ್ತು ಎಂದು ಶ್ರುತಿ ಹಾಸನ್ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅವರು ಇತ್ತೀಚಿನ ದಿನಗಳಲ್ಲಿ ಕೊಟ್ಟ ಸಂದರ್ಶನವೊಂದರಲ್ಲಿ ತಮ್ಮ ಬದುಕಿನಲ್ಲಿ ಉಂಟಾದ ಬದಲಾವಣೆಯ ಬಗ್ಗೆ ಹೇಳಿದ್ದಾರೆ. ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದರಂತೆ ಶ್ರುತಿ ಹಾಸನ್, ಜೀವನದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ, ಸೋಲುತ್ತಿದ್ದೇನೆ ಎಂದು ಅನಿಸಲು ಆರಂಭಿಸಿತ್ತಂತೆ. ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದವಂತೆ. ಆಗ ಅವರ ಸ್ನೇಹಿತನೊಬ್ಬ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದನಂತೆ. ಗೆಳೆಯನ ಮಾತೀನಂತೆ ಶ್ರುತಿ ಹಾಸನ್, ಚೆನ್ನೈನ ವಾರಾಹಿ ಅಮ್ಮನ ಗುಡಿಗೆ ಭೇಟಿ ನೀಡಿದರು. ನಂತರ ತಮ್ಮ ಬದುಕಿನಲ್ಲಿ ಒಳ್ಳೆಯ ಬದಲಾವಣೆಗಳಿ ಆಗಿವೆ ಎಂದು ಅವರು ಹೇಳಿದ್ದಾರೆ. ‘ಅದು ಒಂದು ಚಿಕ್ಕ ದೇವಸ್ಥಾನ, ಅಲ್ಲಿ ಯಾವುದೇ ವಿಐಪಿ ಸಾಲುಗಳಿಲ್ಲ ಅಥವಾ ಅದ್ದೂರಿತನವಿಲ್ಲ. ಆದರೆ ಅಲ್ಲಿಗೆ ಹೋದಾಗ ನನಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಶಾಂತಿ ಸಿಕ್ಕಿತು’ ಎಂದು ಶ್ರುತಿ ಅವರು ಹೇಳಿದ್ದಾರೆ ಎನ್ನಲಾಗಿದೆ. ‘ದೇವರೇ ನಮ್ಮನ್ನು ಆರಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಅಲ್ಲಿಗೆ ಹೋದ ಮೇಲೆ ನಂಬಿದ್ದಾಗಿ ಅವರು ತಿಳಿಸಿದ್ದಾರೆ. ನಂತರ ಅವರ ಮನಸ್ಸಿನಲ್ಲಿದ್ದ ಭಯಗಳೆಲ್ಲಾ ದೂರವಾಗಿ, ಜೀವನದ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿತಂತೆ ಎಂದು ಹೇಳಿದ್ದಾರೆ ಎನ್ನಲಾಗಿದೆ.















