ಮನೆ ಸುದ್ದಿ ಜಾಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಸಚಿವೆ ನಿರ್ಮಲಾ ಸೀತಾರಾಮನ್

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಸಚಿವೆ ನಿರ್ಮಲಾ ಸೀತಾರಾಮನ್

0

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ. ಮೂಕಾಂಬಿಕೆ ದೇವಿಯ ದರ್ಶನ ಪಡೆದು, ದೇವಾಲಯವನ್ನು ವೀಕ್ಷಿಸಿದರು.

ಬಳಿಕ ದೇವಾಲಯದ ಮುಂಭಾಗದ ಗರುಡಗಂಭದ ಮುಂದೆ ದೇವಾಲಯದ ಅರ್ಚಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ದೇವಾಲಯದ ಆಡಳಿತ ಮಂಡಳಿಯಿಂದ ಸಚಿವೆಗೆ ಗೌರವಿಸಲಾಯಿತು. ದೇವಾಲಯ ಭೇಟಿಯ ಬಳಿಕ, ಅಲ್ಲಿಂದ ಉಡುಪಿಯ ಕಾರ್ಯಕ್ರಮವೊಂದಕ್ಕೆ ಅವರು ತೆರಳಿದರು.