ಮನೆ ಸುದ್ದಿ ಜಾಲ ಮಕ್ಕಳೊಂದಿಗೆ ಮಕ್ಕಳಾಗಿ ಫುಟ್​ಬಾಲ್  ಆಟವಾಡಿದ ಪ್ರಧಾನಿ ನರೇಂದ್ರ ಮೋದಿ

ಮಕ್ಕಳೊಂದಿಗೆ ಮಕ್ಕಳಾಗಿ ಫುಟ್​ಬಾಲ್  ಆಟವಾಡಿದ ಪ್ರಧಾನಿ ನರೇಂದ್ರ ಮೋದಿ

0

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಪ್ರಚಾರ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂಗೆ ಬಂದಿದ್ದಾರೆ. ಗ್ಯಾಂಗ್ಟಾಕ್​​​ನ ಆಟದ ಮೈದಾನದಲ್ಲಿ  ಮಕ್ಕಳೊಂದಿಗೆ ಮಕ್ಕಳಾಗಿ ಫುಟ್​ಬಾಲ್ ಆಟ ಆಡಿರುವ ಫೋಟೊಗಳನ್ನು ಖುದ್ದಾಗಿ ಪ್ರಧಾನಿಯವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗ್ಯಾಂಗ್ಟಕ್‌ನಲ್ಲಿ ಒಂದು ಸುಂದರವಾದ ಬೆಳಗ್ಗೆಯಲ್ಲಿ ನನ್ನ ಯುವ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುವುದಕ್ಕಿಂತ  ಸಂತೋಷ  ಬೇರೇನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಸಿಕ್ಕಿಂ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ರಾಜ್ಯದ 50ನೇ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಹಾಗೂ 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ ಎನ್ನಲಾಗಿದೆ.

ಫುಟ್ಬಾಲ್  ಆಟ ಪಶ್ಚಿಮ ಬಂಗಾಳದಲ್ಲಿ ಮತ್ತು ಸಿಕ್ಕಿಂನಲ್ಲಿ ಬಹಳ ಪ್ರಸಿದ್ದವಾಗಿದೆ . ಕೋಲ್ಕತ್ತಾ ಪಶ್ಚಿಮ ಬಂಗಾಳದ ರಾಜಧಾನಿಯಾಗಿದ್ದು, ಭಾರತದಲ್ಲಿ ಕ್ಲಬ್ ಫುಟ್ಬಾಲ್‌ಗೆ ಪ್ರಮುಖ ಕೇಂದ್ರವಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಫುಟ್ಬಾಲ್ ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ತಮ್ಮ ಭೇಟಿಯ ಮೊದಲ ದಿನವಾದ (ಏ: 27) ಸೋಮವಾರದಂದು, ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಂಗ್ಟಕ್‌ನಲ್ಲಿ ಮೆಗಾ ರೋಡ್ ಶೋ ನಡೆಸಿದ್ದು ಅವರನ್ನು ನೋಡಲು ಬೃಹತ್ ಜನಸಮೂಹವೇ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿತ್ತು ಎನ್ನಲಾಗಿದೆ.