ಮನೆ ರಾಜ್ಯ ಧಮ್​​ ಇದ್ರೆ ಚುನಾವಣೆಗೆ ನಿಲ್ಲಲು ಹೇಳಿ; ಚೇತನ್​​ಗೆ ನಿಖಿಲ್​​ ಚಾಲೆಂಜ್​..!

ಧಮ್​​ ಇದ್ರೆ ಚುನಾವಣೆಗೆ ನಿಲ್ಲಲು ಹೇಳಿ; ಚೇತನ್​​ಗೆ ನಿಖಿಲ್​​ ಚಾಲೆಂಜ್​..!

0

ಮೈಸೂರು : ತಮ್ಮ ಬಗ್ಗೆ ಮಾತನಾಡಿದ್ದ ನಟ ಚೇತನ್​​ ಅಹಿಂಸ ಬಗ್ಗೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್​​ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಧಮ್​​ ಇದ್ದರೆ ಬಂದು ಅವರಿಗೆ ಚುನಾವಣೆಗೆ ನಿಲ್ಲಲು ಹೇಳಿ. ಅವರಂತೆ ಮನೆಯಲ್ಲಿ ಕುಳಿತು ಟ್ವಿಟ್ಟರ್​​ನಲ್ಲಿ ನಾನೂ ಸಾವಿರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರನಟ ಡಾ. ರಾಜ್​​ಕುಮಾರ್​​ ಅವರ ಬಗ್ಗೆ ಚೇತನ್​​ ಮಾತನಾಡಿದ್ದನ್ನು ನಿಖಿಲ್​​ ಇತ್ತೀಚೆಗೆ ಖಂಡಿಸಿದ್ದರು. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ ಎಂದು ದೂರಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದರು.