ಮನೆ ಸುದ್ದಿ ಜಾಲ ವಿರಾಟ್ ಕೊಹ್ಲಿಗಾಗಿ ಕಾದಿದ್ದ ಪುಟ್ಟ ಅಭಿಮಾನಿ ಕಣ್ಣೀರಿಟ್ಟಿದ್ದೇಕೆ?

ವಿರಾಟ್ ಕೊಹ್ಲಿಗಾಗಿ ಕಾದಿದ್ದ ಪುಟ್ಟ ಅಭಿಮಾನಿ ಕಣ್ಣೀರಿಟ್ಟಿದ್ದೇಕೆ?

0

ದೆಹಲಿ: ಟೀಮ್ ಇಂಡಿಯಾ ಹಾಗೂ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕರು ಒಮ್ಮೆಯಾದರೂ ಕೊಹ್ಲಿಯನ್ನು ಭೇಟಿ ಮಾಡಿ ಅವರ ಆಟೋಗ್ರಾಫ್ ಪಡೆಯಲು ಕಾಯುತ್ತಿರುತ್ತಾರೆ. ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಕೊಹ್ಲಿಯ ಮೇಲೆ ಅಪಾರ ಕ್ರೇಜ್ ಇದೆ. ಅಭಿಮಾನಿಗಳು ಕೊಹ್ಲಿಯನ್ನು ನೋಡಲು ಮೈದಾನಕ್ಕೆ ಧಾವಿಸಿದ ಘಟನೆಗಳು ಕೂಡ ಹಲವು ಬಾರಿ ನಡೆದಿವೆ.

ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಆರ್ಸಿಬಿ ಪಂದ್ಯದಲ್ಲಿ ಒಂದು ವಿಭಿನ್ನ ಘಟನೆ ಗಮನಸೆಳೆದಿದೆ. ವಿರಾಟ್ ಕೊಹ್ಲಿಗಾಗಿ ಬಾಲಕನೊಬ್ಬ ಕಣ್ಣೀರಿಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಆರ್ಸಿಬಿ, ಡೆಲ್ಲಿಯನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿತು. ಇನ್ನೂ 81 ಎಸೆತಗಳು ಬಾಕಿ ಇರುವಾಗಲೇ ಈ ಗೆಲುವು ಬಂದಿದ್ದು, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ಗೆಲುವು ಎಂಬ ದಾಖಲೆಯಾಗಿದೆ.

ಪಂದ್ಯ ಮುಗಿದ ನಂತರ ಆರ್ಸಿಬಿ ತಂಡ ಹೋಟೆಲಿಗೆ ಬಂದಾಗ ಈ ಘಟನೆ ನಡೆದಿದೆ. ಬ್ಯಾಟ್ ಹಿಡಿದು ಸಂತೋಷದಿಂದ ಓಡಿಬಂದ ಬಾಲಕನೊಬ್ಬ ವಿರಾಟ್ ಕೊಹ್ಲಿಯ ಆಟೋಗ್ರಾಫ್ ಪಡೆಯಲು ಪ್ರಯತ್ನಿಸಿದ. ಆದರೆ ಅಲ್ಲಿದ್ದ ಸಿಬ್ಬಂದಿ ಅವನನ್ನು ತಡೆದ ಕಾರಣ ಕೊಹ್ಲಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು ಬಾಲಕನಿಗೆ ಅತಿಯಾದ ನೋವನ್ನು ತರಿಸಿತು.