ಮನೆ ಸುದ್ದಿ ಜಾಲ ವೈದ್ಯರ ಬೇಜವಾಬ್ದಾರಿ ತನ್ನಕ್ಕೆ ಹೆರಿಗೆಗೂ ಮುಂಚೆನೆ ಬಲಿಯಾಯ್ತಾ ಪುಟ್ಟ ಕಂದಮ್ಮನ ಜೀವ

ವೈದ್ಯರ ಬೇಜವಾಬ್ದಾರಿ ತನ್ನಕ್ಕೆ ಹೆರಿಗೆಗೂ ಮುಂಚೆನೆ ಬಲಿಯಾಯ್ತಾ ಪುಟ್ಟ ಕಂದಮ್ಮನ ಜೀವ

0

ರಾಯಚೂರು : ಮಂಗಳವಾರ (ಏ​​ 28) ಹೆರಿಗೆಗೂ ಮೊದಲೇ  ಪುಟ್ಟ ಕಂದಮ್ಮ ಒಂದು  ಮೃತಪಟ್ಟಿರುವ ಘಟನೆ  ರಾಯಚೂರು ಜಿಲ್ಲೆಯ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ಬೇಜವಾಬ್ದಾರಿಯಿಂದ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ, ಆಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ರಾಯಚೂರಿನ ಮಸ್ಕಿ ತಾಲೂಕಿನ ಜಂಗಮರ ಹಳ್ಳಿ ಗ್ರಾಮದ ಗುಂಡಪ್ಟ ಅವರ ಪತ್ನಿ ಪರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಬೆನ್ನಲೆ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆದುಕೊಂದು ಬಂದಿದ್ದಾರೆ ಎನ್ನಲಾಗಿದೆ.ನಿನ್ನೆಯಿಂದ (ಸೋಮವಾರ) ಸಹಜ ಹೆರಿಗೆ ಆಗಲಿದೆ ಎಂದು ವೈದ್ಯರು ಹೇಳಿದ್ದರೆ. ಆದರೆ  ಅದು ಸಾಧ್ಯವಾಗದೇ ಇದಲ್ಲಿ ಸಿಜರಿಯನ್ ನಡೆಸುವಂತೆ ಪರಮ್ಮ ಕಡೆಯವರು ವೈದ್ಯರಿಗೆ ತಿಳಿಸಿದ್ದರು ಎನ್ನಲಾಗಿದೆ. ಇಂದು (ಮಂಗಳವಾರ) ಬೆಳ್ಳಿಗ್ಗೆ ಇಂಜೆಕ್ಷನ್ ನೀಡಿ ಸಹಜ ಹೆರಿಗೆಗೆ ಆಸ್ಪತ್ರೆಯವರು ಪ್ರಯತ್ನಿಸಿದ್ದು, ಅದು ಆಗದ ಕಾರಣ ಸಿಜರಿಯನ್ ಮಾಡಿ ಹೆರಿಗೆ ಮಾಡಿಸಲಾಗಿದ್ದು. ಆದರೆ ಅಷ್ಟರಲ್ಲಿ  ಮಗು ಮೃತಪಟ್ಟಿತ್ತು ಎನ್ನಲಾಗಿದೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆಯ ಆಡಳಿತಾಧಿಕಾರಿಗಳಿಂದ ಸ್ಪಷ್ಟನೆ

ಇನ್ನು ಮಗು ಮೃತಪಟ್ಟಿರುವ ಬಗ್ಗೆ ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕಾವೇರಿ ಅವರು ಪ್ರತಿಕ್ರಿಯೆ ನೀಡಿದ್ದು. ಹೆರಿಗೆಗಾಗಿ ಬೆಳಿಗ್ಗೆ 6 ಗಂಟೆಗೆ ಔಷಧಿ ನೀಡಿದ್ದೆವು. ಆಗ ಮಗು ಸುಸ್ತಾಗಿದೆ ಎಂಬ ಬಗ್ಗೆ ಗೊತ್ತಾಗಿದೆ. ತಂತ್ರಜ್ಞಾನದ ಮೂಲಕ ಮಗುವಿನ ಹಾರ್ಟ್ ಬೀಟ್ ತಿಳಿದುಕೊಂಡಿದ್ದು, ಕೂಡಲೇ ಸಿಜರಿಯನ್​​ಗೆ ಸಿದ್ಧರಾಗಿದ್ದೇವೆ ಎಂದಿದ್ದಾರೆ. ಆ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿತ್ತು. ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ್ದಿವಿ ಆದರೂ ಮಗುವಿನ ಜೀವ ಉಳಿಸಲು ಸಾಧ್ಯಾ ಆಗಲಿಲ್ಲ ಎಂದು ವೈಧ್ಯರು ತಿಳಿಸಿದ್ದಾರೆ ಎನ್ನಲಾಗಿದೆ.