ಮನೆ ಸುದ್ದಿ ಜಾಲ ಆರು ವರ್ಷದ ನಂತರ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಗೆ ದಕ್ಕಿತ್ತು ತಮ್ಮ ಹಣದ ಮೇಲಿನ ಅಧೀಕಾರ

ಆರು ವರ್ಷದ ನಂತರ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಗೆ ದಕ್ಕಿತ್ತು ತಮ್ಮ ಹಣದ ಮೇಲಿನ ಅಧೀಕಾರ

0

ಬಾಲಿವುಡ್ ನ ಹೆಸರಾಂತ ನಟ ಸುಶಾಂತ್‌ ಸಿಂಗ್ ರಾಜ್‌ಪೂತ್ ರವರು ನಿಧನವಾಗಿ ಆರು ವರ್ಷ ಕಳೆದಿದೆ. ಸುಶಾಂತ್ ಅವರು 2020ರ ಜೂನ್ ತಿಂಗಳಿನಲ್ಲಿ ನಿಧನವಾಗಿದ್ದರು. ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮುಂಬೈನ ಮನೆಯಲ್ಲಿ ಸಿಕ್ಕಿತ್ತು. ಅವರ ಸಾವು ಹಲವು ರೀತಿಯಲ್ಲಿ ಬಾಲಿವುಡ್ ಅನ್ನು ಬೆಚ್ಚಿಬಿಳಿಸಿತ್ತು. ಅದರಲ್ಲೂ ಸುಶಾಂತ್ ಅವರ ಮಾಜಿ ಗೆಳತಿಯುದ ರಿಯಾ ಚಕ್ರವರ್ತಿ ಅವರು ಹಲವು ರೀತಿಯ ಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ಈ ಪ್ರಕರಣದ ಕುರಿತ್ತಾಗಿ ಅವರು ಜೈಲಿಗೆ ಸಹ ಹೋಗಿ ಬಂದಿದ್ದರು. ಆದರೆ ವಿಚಾರಣೆ ನಡೆದು ಸತ್ಯಗಳು ಒಂದೊಂದಾಗಿ ಹೊರಗೆ ಬರತೊಡಗಿದಾಗ ಅವರ ಮೇಲಿದ್ದ ಅನುಮಾನಗಳು ಕಡಿಮೆ ಆದವು ಎನ್ನಲಾಗಿದೆ. ಈಗ ಸುಮಾರು ಆರು ವರ್ಷಗಳ ನಂತರ ರಿಯಾಗೆ ಅವರ ತಮ್ಮ ಹಣದ ಮೇಲಿನ ಅಧೀಕಾರ ಮರಳಿ ಸಿಕ್ಕಿದೆ.

ಮುಂಬೈನ ನ್ಯಾಯಾಲಯವು ನಟಿ ರಿಯಾ ಚಕ್ರವರ್ತಿ ಮತ್ತು  ಅವರ ಸಹೋದರ ಶೋವಿಕ್ ಹಾಗೂ ತಾಯಿ ಸಂಧ್ಯಾ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ‘ಡಿ-ಫ್ರೀಜ್’ ಮಾಡಲು ಅನುಮತಿ ನೀಡಿದೆ ಎನ್ನಲಾಗಿದೆ. ಹೀಗಾಗಿ 2020ರಲ್ಲಿ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ಮಂಡಳಿಯವರು  ಸುಶಾಂತ್ ಮತ್ತು ಅವರ ಸಹೋದರನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಡ್ರಗ್ಸ್ ಜಾಲದೊಂದಿಗೆ ಸಂಬಂಧ ಇದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದ್ದು ಈ ಕುರಿತು ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಯು ಎನ್‌ಡಿಪಿಎಸ್  ಕಾಯ್ದೆಯ ಸೆಕ್ಷನ್ 68F ಅಡಿಯಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದ್ದು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ 30 ದಿನಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಹಾಗೆ ಮಾಡಿಲ್ಲ ಎಂದು ಕೋರ್ಟ್ ಹೇಳಿಕೆ ನೀಡಿದೆ ಎನ್ನ ಬಹುದು. ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಯದ ಕಾರಣ, ಇನ್ನು ಮುಂದೆ ಈ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಇಡುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದುಇದರಿಂದಾಗಿ ರಿಯಾ ಕುಟುಂಬಕ್ಕೆ ತಮ್ಮ ಹಣವನ್ನು ಊಪಯೋಗಿಸಿಕೋಳ್ಳಲು ಈಗ ಅವಕಾಶ ಮಾಡಿಕೊಟ್ಟಿದೆ ಎನ್ನಬಹುದು.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಈಗಾಗಲೇ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ತನಿಖಾ ವರದಿಯಲ್ಲಿ ಸುಶಾಂತ್ ಸಾವಿನ ಹಿಂದಿ ರಿಯಾರ ಕೈವಾಡವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ ಎನ್ನಲಾಗಿದೆ.

ಹೀಗೆ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಳಿಕ ರಿಯಾ ಚಕ್ರವರ್ತಿಗ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲದಂತೆ ಆಗಿತ್ತು. ಆದರೆ ಇದೀಗ ರಿಯಾ ಮತ್ತು ಅವರ ಸಹೋದರ ಇಬ್ಬರು ಸೇರಿ ಬಟ್ಟೆ ಬ್ರ್ಯಾಂಡ್ ಒಂದನ್ನು ನಡೆಸುತ್ತಿದ್ದು, ಇತ್ತೀಚೆಗಷ್ಟೆ ಅವರ ಹೊಸ ಶಾಪ್ ಶುರು ಮಾಡಿದ್ದಾರೆ ಎನ್ನಬಹುದು.