ಮನೆ ರಾಜ್ಯ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ

ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ

0

ಉಡುಪಿ : ನಟಿ ಪೂಜಾ ಹೆಗ್ಡೆ ತಮ್ಮ ಮೂಲದ ಉಡುಪಿ ಜಿಲ್ಲೆಯ ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಪವಿತ್ರ ಡೆಕ್ಕೆ ಬಲಿ ಸೇವೆಯಲ್ಲಿ ಭಾಗವಹಿಸಿ ಭಕ್ತರ ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ ಎತ್ತರಕ್ಕೇರಿದರೂ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಕಳೆದುಕೊಳ್ಳದ ಪೂಜಾ, ಅಪ್ಪಟ ‘ಕುಡ್ಲದ ಪೊಣ್ಣು’ವಾಗಿ ಮಿಂಚಿದ್ದಾರೆ.

ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಡೆಕ್ಕೆ ಬಲಿ ಸೇವೆಯಲ್ಲಿ ಪೂಜಾ ಹೆಗ್ಡೆ ಕುಟುಂಬ ಸಮೇತರಾಗಿ ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸ್ಥಳೀಯರೊಂದಿಗೆ ಸರಳವಾಗಿ ಬೆರೆತ ಅವರು, ನಾಗದರ್ಶನ ಹಾಗೂ ಡಮರು ಮೇಳದ ನಡುವೆ ನಡೆದ ಈ ಸೇವೆಯಲ್ಲಿ ಭಕ್ತಿ ಮೆರೆದರು.