ಮನೆ ಸುದ್ದಿ ಜಾಲ ಪ್ರಭಾಸ್ ಕ್ರೇಜ್ ಹೇಗಿದೆ ಎಂಬ ಬಗ್ಗೆ ವಿವರಿಸಿದ ಕರಣ್ ಜೋಹರ್

ಪ್ರಭಾಸ್ ಕ್ರೇಜ್ ಹೇಗಿದೆ ಎಂಬ ಬಗ್ಗೆ ವಿವರಿಸಿದ ಕರಣ್ ಜೋಹರ್

0

ಮುಂಬೈ : ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್​ ನಟರಲ್ಲಿ ಪ್ರಭಾಸ್‌ ಕೂಡ ಒಬ್ಬರು. ಅವರ ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳ ನಂತರ ಅವರ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಗಿದೆ ಎನ್ನಬಹುದು. ‘ಬಾಹುಬಲಿ’ಗೆ ಮೊದಲು ಪ್ರಭಾಸ್ ಇಷ್ಟು ದೊಡ್ಡ ಸ್ಟಾರ್ ನಟ ಆಗಿರಲಿಲ್ಲ ಎಂದು ಹೇಳುವವರು ಇದ್ದಾರೆ. ಆದರೆ ಮುಂಚೆ ಒಮ್ಮೆ ಕರಣ್ ಜೋಹರ್ ಅವರು, ಪ್ರಭಾಸ್ ಅವರ ಕ್ರೇಜ್ ಬಗ್ಗೆ ಹೇಳಿದ್ದರು . ‘ಬಾಹುಬಲಿ’ ಸಿನಿಮಾ ಬಿಡುಗಡೆಗೆ ಮುಂಚೆಯೇ ಪ್ರಭಾಸ್ ಹವಾ, ಮುಂಬೈನಲ್ಲಿ ಹೇಗಿತ್ತು ಎಂಬುದನ್ನು ಕರಣ್ ಸಂದರ್ಶನದಲ್ಲಿ ವಿವರಿಸಿದ್ದರು ಎನ್ನಲಾಗಿದೆ.

‘ಬಾಹುಬಲಿ’ ಸಿನಿಮಾವನ್ನು ಕರಣ್ ಜೋಹರ್ ವಿತರಣೆ ಮಾಡಿದ್ದರು. ಪ್ರಭಾಸ್ ಹಾಗೂ ಕರಣ್ ಜೋಹರ್ ಅವರ ಮೊದಲ ಕೊಲ್ಯಾಬರೇಷನ್ ಆಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್ ಮುಂಬೈನಲ್ಲಿ ಕರಣ್ ಜೋಹರ್ ಅವರ ಕಚೇರಿಗೆ ಹೋಗಿದ್ದಾಗ ಕರಣ್ ಹೇಳಿರುವಂತೆ, ‘ನನ್ನ ಕಚೇರಿಗೆ ಸ್ಟಾರ್ ನಟ, ನಟಿಯರು ಹೊಸಬರೇನೂ ಅಲ್ಲ. ಪ್ರತಿ ದಿನವೂ ಒಬ್ಬರಲ್ಲ ಒಬ್ಬರು ಸ್ಟಾರ್ ನಟ, ನಟಿಯರು ಬರುತ್ತಲೇ ಇರುತ್ತಾರೆ. ಆದರೆ ಪ್ರಭಾಸ್ ಮೊದಲ ಸಲ ನನ್ನ ಕಚೇರಿಗೆ ಬಂದಾಗ ಅಲ್ಲೋಲ-ಕಲ್ಲೋಲವೇ ಆಗಿತ್ತು’ ಎಂದು ಕರಣ್ ಅವರು ಹೇಳಿದ್ದರು. ಕಚೇರಿಯ ಒಳಗೆ ಹೊರಗೆ ಜನ ತುಂಬಿ ತುಳುಕುತ್ತಿದ್ದರು ಎನ್ನಲಾಗಿತ್ತು.

ಹೊರಗಿನ ಜನರು ಎಲ್ಲರೂ ಕಚೇರಿಯ ಒಳಗೆ ನುಗ್ಗಿ ಬಂದರು, ನಮ್ಮ ಕಚೇರಿಯ ಲಾಬಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ನಿಂತಿದ್ದು ಹೊರಗಡೆ ಅದಕ್ಕಿಂತಲೂ ಹೆಚ್ಚು ಜನ ತುಂಬಿದ್ದರು. ಪ್ರಭಾಸ್, ಪ್ರಭಾಸ್ ಎಂದು ಜೋರಾಗಿ ಕಿರಿಚುತ್ತಿದ್ದರು ಎನ್ನಲಾಗಿದೆ. ಅದನ್ನೆಲ್ಲ ನೋಡಿ ನನಗೆ ತುಂಬಾ ಗಾಬರಿ ಆಗಿಬಿಟ್ಟಿತ್ತು. ಆಗ ನನಗೆ ಅರ್ಥವಾಯ್ತು, ಪ್ರಭಾಸ್ ಕ್ರೇಜ್ ಹೇಗಿದೆ ಎಂದು ಕರಣ್ ಹೇಳಿದ್ದಾರೆ ಎನ್ನಲಾಗಿತ್ತು.

‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗುವ ಮೊದಲೆ ಪ್ರಭಾಸ್ ಅವರ ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗಿ ಸೋನಿ, ಸೆಟ್ ಮ್ಯಾಕ್ಸ್ ಇನ್ನಿತರೆ ಚಾನೆಲ್​​ಗಳಲ್ಲಿ ಪ್ರಸಾರ ಆಗುತ್ತಿರುತ್ತಿತ್ತು. ಆ ಸಿನಿಮಾಗಳನ್ನು ನೋಡಿಯೇ ಉತ್ತರದ ಜನ ಪ್ರಭಾಸ್ ಅವರ ಫ್ಯಾನ್ಸ್ ಆಗಿಬಿಟ್ಟಿದ್ದರು ಎಂದು ಕಿರಣ್‌ ಅವರು ಪ್ರಭಾಸ್‌ ಕ್ರೇಜ್ ಹೇಗಿದೆ ಎಂಬ ಬಗ್ಗೆ ವಿವರಿಸಿದ್ದರು  ಎನ್ನಲಾಗಿದೆ.