ಮನೆ ಸುದ್ದಿ ಜಾಲ ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ : ಆರು ಮಂದಿ ಆರೋಪಿಗಳಿಗೆ ಗಲ್ಲು ಶಿಕ್ಷೆ

ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ : ಆರು ಮಂದಿ ಆರೋಪಿಗಳಿಗೆ ಗಲ್ಲು ಶಿಕ್ಷೆ

0

ಕೊಪ್ಪಳ, ಗುರುವಾರ (ಏಪ್ರಿಲ್ 30) : ಗಂಗಾವತಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಆರು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ ಜೊತೆ ದಂಡ ವಿಧಿಸಲಾಗಿದೆ. ಯಾಗಿದೆ ಎನ್ನಲಾಗಿದೆ . ಇದರ ಪ್ರಕರಣ ಸಂಬಂಧ ನಡೆಸಿದ ವಿಚಾರಣೆಯಲ್ಲಿ  ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಅವರು ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಗುರುವಾರ(ಏಪ್ರಿಲ್ 30) ದಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಹೀಗೆ ಇದರ ಜೊತೆಗೆ ಆರು ಆರೋಪಿ ಜನರಿಗೆ ತಲಾ ಮೂರು ಲಕ್ಷ ದಂಡ ನೀಡಲಾಗಿದೆ. ಆರೋಪಿಗಳಾದ ರವಿ , ವಿಜಯ್ ಅಲಿಯಾದ್ ಮೈಲಾರಿ, ಧನರಾಜ್, ಭೀಮ್‌ ಅಲಿಯಾದ್ ಭರತ್, ಸಲೀಮ್ ಮಹಮ್ಮದ್ ರಫೀಕ್, ಗಂಗಾಧರ ಗೌಳಿಗೆ ಇವರುಗಳು ಗಲ್ಲು ಶಿಕ್ಷೆಗೆ ಗುರಿಯಾದವರಾಗಿದ್ದಾರೆ ಎನ್ನಲಾಗಿದೆ.

ಮೊದಲಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಫೂಟೇಜ್​ಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ  ಸದಾನಂದ ನಾಗಪ್ಪ ನಾಯ್ಕ್, ಅಪರಾಧಿಗಳು ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ ನಡೆಸಿದ್ದು. ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎನ್ನಲಾಗಿದೆ. ಅಷ್ಟೆ ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಬೆನ್ನೆಲೆ ಪರಿಗಣಿಸಿ ಆರೋಪಿಗಳಿಗೆ  ನ್ಯಾಯಾಲಯ ಗಲ್ಲು ಶಿಕ್ಷೆ ನೀಡುವುದಾಗಿ ತೀರ್ಪು ನೀಡಿದೆ ಎಂಬ ಮಾಹಿತಿ ಹೊರ ಬಂದಿದೆ.

ವೆಂಕಟೇಶ (ಕೊಪ್ಪಳ ಎಸ್ಪಿ) ಕುರುಬರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಸಂಬಂಧ ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ವೆಂಕಟೇಶ ಕುರುಬರ ಕೊಲೆ ಕೇಸ್ ನ ಗಂಗಾವತಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು. ಇಂದು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದು. ಈ ಕೇಸ್ ಬಹಳಷ್ಟು ಚ್ಯಾಲೆಂಜಿಂಗ್ ಆಗಿತ್ತುಎಂದು ಈ ಕುರಿತು  ಪೊಲೀಸರು ಈ ಕೇಸ್ ಗೆ ನ್ಯಾಯ ಕೊಟ್ಟಿದ್ದಾರೆ. ಇಬ್ಬರು ಜೊತೆಯಲ್ಲೆ ಇದ್ದವರು, ಆದರೆ ಯಾವುದೊ  ವೈಷಮ್ಯದ ಕಾರಣ ಬೇರೆಯಾಗಿದ್ದರು ಎಂದು ಮಾಹಿತಿ ನೀಡಿದರು ಎನ್ನಲಾಗಿದೆ.

ಇದರ ಪ್ರಕಾರ ಎ1 ಆರೋಪಿ ರವಿ ಮೇಲೆ 17 ಪ್ರಕರಣಗಳು ದಾಖಲಾಗಿದ್ವು, ಗಂಗಾಧರ ಮೇಲೆ 4 ಪ್ರಕರಣಗಳು ಸೇರಿ ಎಲ್ಲರ ಮೇಲೂ ಪ್ರಕರಣಗಳಿವೆ. ಆರೋಪಿ ರವಿ ಮೇಲೆ ಸಾಕಷ್ಟು ಕೇಸ್ ಗಳು ದಾಖಲಾಗಿದ್ವು ಅವರ ನಡುವಳಿಕೆ ಇದರಲ್ಲಿ ಗೊತ್ತಾಗತ್ತೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟ ಪಡಿಸಿದೆ ಎಂದು ಹೇಳಲಾಗಿದೆ .

ಪ್ರಕರಣದ ವಿವರ :

ಗಂಗಾವತಿಯ ಹೊರ ವಲಯದಲ್ಲಿರುವ ರಾಣಾ ಪ್ರತಾಪ್​ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಹತ್ತಿರ ಅಕ್ಟೋಬರ್ 8 2025ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ಆಗಿದ ವೆಂಕಟೇಶ ಕುರುಬರ್ (32) ಅವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು ಎನ್ನಲಾಗಿದೆ.

ಅದೇ ಅ.8ರ ತಡರಾತ್ರಿ ಊಟ ಮಾಡಿಕೊಂಡು ಸ್ನೇಹಿತಋ ಜೋತೆಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಫಾಲೋ ಮಾಡಿಕೊಂಡು ಯುವಕರ ಗುಂಪು ಒಂದು ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು ಎನ್ನಲಾಗಿದೆ . ನಂತರ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ಹೋಡೆದು ಹಲ್ಲೇ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ಎನ್ನಲಾಗಿದೆ. ನಂತರ ಈ ಕೊಲೆ ಕೇಸ್ ಗೆ ಸಂಭಂದ ಪಟ್ಟಂತೆ ಗಂಗಾವತಿ ನಗರ ಪೊಲೀಸರು, 12 ಜನರನ್ನು ಬಂಧಿಸಿದ್ದು, ಸುಮಾರು 927 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು ಹಳೆಯ ದ್ವೇಷ ಮತ್ತು ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾಗಿದ್ದು ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಈ ಮಾಹಿತಿ ಕುರಿತ್ತಾಗಿ ತಿಳಿಸಿದ್ದರು ಎನ್ನಲಾಗಿದೆ.