ಮನೆ ರಾಜ್ಯ ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಗದಗ ಪೊಲೀಸರು

ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಗದಗ ಪೊಲೀಸರು

0

ಗದಗ : ಗದಗ ಮತ್ತು ಬೆಟಗೇರಿ ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿತ್ತು. ಕೈಯಲ್ಲಿ ಆಯುಧ ಹಿಡಿದು ಓಡಾಡುತ್ತಿದ್ದ ಭಯಾನಕ ಕಳ್ಳರಿಂದ ಜನರು ಬೆಚ್ಚಿಬಿದ್ದಿದ್ದರು. ಕಳ್ಳರ ಪತ್ತೆಗೆ ಆಗ್ರಹಿವು ಕೇಳಿಬಂದಿತ್ತು. ಆ ಬೆನ್ನಲ್ಲೇ ಕೊನೆಗೂ ಖದೀಮರ ಗುಂಪನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 1 ಕೋಟಿ 26 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಗದಗ-ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವೆಸಗಿದ್ದ 11 ಜನ ಕಳ್ಳರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ​ ಸುರೇಶ್​, ನಾಗಪ್ಪ, ಶಿವು, ಶಂಕರ್​, ಮಂಜುನಾಥ್​, ಹುಲಗೆಪ್ಪ, ಆನಂದ್​ ಬಂಧಿತರು. ಆರೋಪಿಗಳು ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಮೂಲದವರು.

ಬೆಟಗೇರಿ ಬಡಾವಣೆ ಹಾಗೂ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ಭೇದಿಸಲಾಗಿದೆ. ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಳ್ಳರ ಪತ್ತೆಗಾಗಿ ಮೂರು ತಂಡಗಳಲ್ಲಿ ಕಾರ್ಯಚರಣೆ ಮಾಡಲಾಗಿದೆ. 14 ಮನೆಗಳ್ಳತನ ಮಾಡಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1 ಕೋಟಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡು, ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್​​ ಮಾಡುತ್ತಿದ್ದರು. ಈ ಕಿಲಾಡಿ ಕಳ್ಳರು ರಾತ್ರೋರಾತ್ರಿ ಬಂದು ನಗರದ ಹೊರಗಡೆ ವಾಹನಗಳನ್ನು ನಿಲ್ಲಿಸಿ, ಯಾವುದೇ ಸುಳಿವು ಬಿಡದೇ ತಮ್ಮ ಕೈಚಳಕ ತೋರಿಸಿ ಪರಾರಿ ಆಗುತ್ತಿದ್ದರು. ಆದರೆ ಕಳ್ಳರು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗಿ, ಆರೋಪಿಗಳನ್ನು ಹಿಡಿಮುರಿ ಕಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಾಕಷ್ಟು ಆತಂಕ ಸೃಷ್ಟಿಸಿದ್ದ ಮುಸುಕುದಾರಿ ಕಳ್ಳರ ಗ್ಯಾಂಗ್ ಪತ್ತೆ ಮಾಡಿದ ಪೊಲೀಸರಿಗೆ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ. ಕಳೆದ ಆರೇಳು ತಿಂಗಳಿಂದ ಅವಳಿ ನಗರದ ಜನರ ಭಯವನ್ನು ದೂರ ಮಾಡಿದ್ದಾರೆ. ಒಟ್ಟಿನಲ್ಲಿ ಕಳ್ಳರ ಬಂಧನ ಬೆನ್ನಲ್ಲೇ ಅವಳಿ ನಗದರ ಜನರು ನಿಟ್ಟುಸಿರು ಬಿಟ್ಟಿದ್ದಾರೆ.