ಮನೆ ಸುದ್ದಿ ಜಾಲ ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಶೇ 5 ರ ರಿಯಾಯಿತಿ ಮತ್ತು ಮೇ 31 ರವರೆಗೆ ಆಸ್ತಿ...

ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಶೇ 5 ರ ರಿಯಾಯಿತಿ ಮತ್ತು ಮೇ 31 ರವರೆಗೆ ಆಸ್ತಿ ತೆರಿಗೆ ಪಾವತಿಗೆ ವಿಸ್ತರಣೆ

0

ಬೆಂಗಳೂರು, ಶುಕ್ರವಾರ (ಮೇ 1): ಬೆಂಗಳೂರಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಬಂದಿದೆ. ಆಸ್ತಿ ತೆರಿಗೆ  ಪಾವತಿಯ ಮೇಲೆ ನೀಡಲಾಗುತ್ತಿದ್ದ ಶೇ 5ರಷ್ಟು ರಿಯಾಯಿತಿ ಸಮಯವನ್ನು 2026ರ ಮೇ 31ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ನಿರ್ಧಾರದಿಂದ ಗ್ರೇಟರ್ ಬೆಂಗಳೂರು ಪ್ರದೇಶದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿ ಮಾಲೀಕರಿಗೆ ನೇರವಾಗಿ ಉಪಯೋಗವಾಗಲಿದೆ ಎನ್ನಬಹುದು.

ಏಪ್ರಿಲ್ ಕೊನೆಯಲ್ಲಿ ಈ ರಿಯಾಯಿತಿ ಅವಧಿ ಮುಕ್ತಾಯವಾಗುತ್ತಿತ್ತು. ಆದರೆ, ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಸಮಸ್ಯಗಳ ಕುರಿತು ಬೆಂಗಳೂರು ಅಪಾರ್ಟ್‌ಮೆಂಟ್) ಸೇರಿದಂತೆ ಕೆಲವು ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು ಎನ್ನಲಾಗಿದೆ. ವಿಶೇಷವಾಗಿ ಬಲ್ಕ್ ವೇಸ್ಟ್ ಜನರೇಟರ್‌ಗಳ ವರ್ಗೀಕರಣದಲ್ಲಿನ ಅಸ್ಪಷ್ಟತೆಯಿಂದಾಗಿ ತೆರಿಗೆ ಪಾವತಿಸಲು ಮಾಲೀಕರು ತಡ ಮಾಡಿದ್ದು ಇದಲ್ಲದೆ, ಮೇ ತಿಂಗಳಲ್ಲಿ ಶಾಲಾ ಶುಲ್ಕದಂತಹ ಪ್ರಮುಖ ಗೃಹ ವೆಚ್ಚಗಳು ಬರುವುದರಿಂದ, ಈ ರಿಯಾಯಿತಿ ಅವಧಿಯನ್ನು ವಿಸ್ತರಿಸಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು. ಅದಕ್ಕಾಗಿ ಸರ್ಕಾರ ಸ್ಪಂದಿಸಿದೆ ಎನ್ನಲಾಗಿದೆ.

ಆದಾಯ ಸಂಗ್ರಹದಲ್ಲಿ ಕುಸಿತ

ಜಿಬಿಎ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ವರ್ಷಕ್ಕೆ ನೋಡಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಸುಮಾರು 500 ಕೋಟಿ ರೂಪಾಯಿಗಳ ಕೊರತೆ ಕಂಡುಬಂದಿದೆ. ಕಳೆದ ವರ್ಷ ಸುಮಾರು 1,500 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದ್ದು ಏಪ್ರಿಲ್ 16 ರಂದು ತೆರಿಗೆ ಪಾವತಿಯಲ್ಲಿದ್ದ ತಾಂತ್ರಿಕ ಗೊಂದಲಗಳನ್ನು ಸರಿಪಡಿಸಲಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಪಾವತಿಯಾಗಿಲ್ಲ ಎನ್ನಬಹುದು. ಹೀಗಾಗಿ, ಹೆಚ್ಚಿನ ಕಾಲಾವಕಾಶ ಕೊಡುವುದರಿಂದ ಮಾಲೀಕರು ತೆರಿಗೆ ಪಾವತಿಸಲು ಆಸಕ್ತಿ ತೋರಿಬಹುದು ಮತ್ತು ಪಾಲಿಕೆಯ ಆದಾಯದ ಕೊರತೆಯನ್ನು ಕೂಡ ಸರಿಪಡಿಸಬಹುದು ಎಂದು ಅಧಿಕಾರಿಗಳು ಆಶಿಸಿದ್ದಾರೆ ಎಂದು ಹೇಳಲಾಗಿದೆ.