ಮೈಸೂರು : ಎಸ್‍ಡಿಜೆ ಗೋಲ್ಡ್ ಹಾಗೂ ಡಿಜಿಎಫ್ ಮಾಲೀಕ ಸೌಂದರ್ ರಾಜ್ ಅಲಿಯಾಸ್ ಚಿನ್ನುತಂಬಿ ಬಹಳ ವರ್ಷಗಳಿಂದ ಜನಗಳಿಗೆ ಕಡಿಮೆ ಬಡ್ಡಿಗೆ ಹೆಚ್ಚು ಮೊತ್ತದ ಚಿನ್ನದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಲಕ್ಷಾಂತರು ವಂಚಸಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದಾವಣಗೆರೆಯ ಎಚ್ ಮಹಂತೇಶ್ ನೀಡಿದ ದೂರಿನ ಅನ್ವಯ ಬುಧವಾರ ಎಫ್ಐಆರ್ ದಾಖಲಾಗಿತ್ತು. ಸೌಂದರ್ ರಾಜ್ ಮತ್ತು ಇತರರು ನಂಬಿಸಿ ಚಿನ್ನದ ಒಡವೆಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಮಹಾಂತೇಶ್ ದೂರಿನಲ್ಲಿ ಆರೋಪಿಸಿದರು.
ಮಹಾಂತೇಶ್ ಮತ್ತು ಸ್ನೇಹಿತರಾದ ಸುಷ್ಮಾ ಮಾಲಾ ಬ್ರಹ್ಮರೆಡ್ಡಿ ರೇಖಾ ಅವರು ದಾವಣಗೆರೆಯ ಡಿಪಿ ರಸ್ತೆಯ ಕರ್ನಾಟಕ ಬ್ಯಾಂಕ್ ನಲ್ಲಿ ಸುಮಾರು ಒಂದು ಕೆಜಿ ತೂಕದ ಚಿನ್ನಾಭರಣ ಹಾಗೂ 100 ಗ್ರಾಂ ಚಿನ್ನದ ಗಟ್ಟಿಯನ್ನು 62 ಲಕ್ಷ ರೂಗಳಿಗೆ 2024ರ ಏಪ್ರಿಲ್ 15ರಂದು ಗಿರವಿ ಇಟ್ಟಿದ್ದರು. ದನ ಗಣಪತಿ ಗೋಲ್ಡ್ ಅಂಡ್ ಡೈಮ, ಶ್ರೀರಾಂಪುರ ಮೈಸೂರು ಸಂಸ್ಥೆಯವರು ಗಿರವಿ ಇಟ್ಟಿರುವ ಚಿನ್ನಾಭರಣಗಳನ್ನು ಬಿಡಿಸಿಕೊಂಡು ನಮ್ಮಲ್ಲಿ ಗಿರವಿ ಇಟ್ಟರೆ ಅಥವಾ ಮಾರಾಟ ಮಾಡಿದರೆ ಕಡಿಮೆ ಬಡ್ಡಿಗೆ ಹೆಚ್ಚಿನ ಹಣ ನೀಡುವುದಾಗಿ ಜಾಹಿರಾತು ನಂಬಿ 2025ರ ಫೆಬ್ರವರಿ 20ರಂದು ಸದರಿ ಸಂಸ್ಥೆಯವರನ್ನು ಸಂಪರ್ಕಿಸಿದರು. ಗಿರವಿ ಇಟ್ಟಿದ ಈ ಮಾಹಿತಿ ಗಿರವಿ ಚೀಟಿಗಳನ್ನು ಸಂಸ್ಥೆಯವರಿಗೆ ವಾಟ್ಸಪ್ ಮೂಲಕ ಕಳುಹಿಸಿ ಕೊಟ್ಟಿದ್ದಾರೆ.
ಮಾರನೇ ದಿನ 2025ರ ಫೆಬ್ರವರಿ 21ರಂದು ಮಂಜುನಾಥ್ ಮತ್ತು ಇತರೆ ನಾಲ್ಕೈದು ಮಂದಿ ಬೆಳಗ್ಗೆ 7:00 ಗಂಟೆಗೆ ಮಹಾಂತೇಶ್ ಮನೆಗೆ ಬಂದಿರುತ್ತಾರೆ. ನಾವು ಮೈಸೂರಿನ ದನಗಣಪತಿ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯಿಂದ ಬಂದಿದ್ದೇವೆ ಎಂದು ತಿಳಿಸಿರುತ್ತಾರೆ. ಈ ವ್ಯಕ್ತಿಗಳು ಮಾಂತೇಶ್, ಸುಷ್ಮಾ ಮಾಲಾ ಪುಷ್ಪ ಬ್ರಹ್ಮರೆಡ್ಡಿ ಅವರ ಬ್ಯಾಂಕ್ ಖಾತೆಗಳಿಗೆ 62,05,000 ರೂ ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿದರು.
ಅದಾದ ನಂತರ ಮೈಸೂರಿಗೆ ಅವರ ಕಾರಿನಲ್ಲೇ ಕರೆದುಕೊಂಡು ಬಂದು ಚಿನ್ನವನ್ನು ತೂಕ ಮಾಡಿದರು. ಅದರಲ್ಲೂ ಸಹ ಅವರು ಮೋಸ ಮಾಡಿದರು. ಮಹಾಂತೇಶ್ ಬೇಡವೆಂದಾಗ ಇಲ್ಲಿಂದ ಜೀವಂತ ಹೋಗಲು ಸಾಧ್ಯವಿಲ್ಲ, ನಾವು ಹೇಳಿದ ಹಾಗೆ ಮಾಡಬೇಕು ಎಂದು ಮಹಾಂತೇಶ್ ಗೆ ಬೆದರಿಕೆ ಹಾಕಿದರು. ನಮ್ಮ ಎದುರೇ ಸುಮಾರು 560 ಗ್ರಾಂ ತೂಕದ ಚಿನ್ನಾಭರಣ ಹಾಗೂ 100 ಗ್ರಾಂ ಚಿನ್ನದ ಬಿಸ್ಕೆಟ್ ಅನ್ನು ಕರಗಿಸಿದರು. ಉಳಿದ ಚಿನ್ನವನ್ನು ಗಿರಿವಿ ಇಟ್ಟುಕೊಳ್ಳುವುದಾಗಿ 6 ತಿಂಗಳ ನಂತರ ಬಿಡಿಸಿಕೊಳ್ಳುವಂತೆ ಸೂಚಿಸಿ ರಶೀದಿಗಳನ್ನು ನೀಡಿದರು.
ಜೊತೆಗೆ ಈಗಾಗಲೇ ಬ್ಯಾಂಕಿಗೆ ವರ್ಗಾಯಿಸಿದ ಹಣದ ಜೊತೆಗೆ 2,00,000 ರು ನಗದು ಹಣ ನೀಡಿದರು. ಇದಾದ ಆರು ತಿಂಗಳಿಂದ ನಾನು ದೂರವಾಣಿ ಮೂಲಕ ಸಂಪರ್ಕಿಸಿ ಗಿರವಿ ಇಟ್ಟಿರುವ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳುವುದಾಗಿ ತಿಳಿಸಿದಾಗ, ಅವರು ನೀವು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದೀರಿ. ನಿಮಗೆ ಚಿನ್ನಾಭರಣ ವಾಪಸ್ಸು ಕೊಡಲು ಬರುವುದಿಲ್ಲ ಎಂದು ಹೇಳುತ್ತಾ ಬಂದರು.
ಮಾಂತೇಶ್ ಹಾಗೂ ಸ್ನೇಹಿತರಿಗೆ ಚಿನ್ನಾಭರಣಗಳನ್ನು ನೀಡದೆ ವಂಚಿಸಿ ಬೆದರಿಕೆ ಹಾಕಿರುವ ದನಗಣಪತಿ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ಮಾಲೀಕ ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ಮತ್ತು ಆತನ ಸಹಚಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿ ಕೊಡಬೇಕೆಂದು ಮಾಂತೇಶ್ ಹಾಗೂ ಸ್ನೇಹಿತರು ದೂರಿನಲ್ಲಿ ಕೋರಿದ್ದಾರೆ. ಇದಲ್ಲದೆ, ಸೌಂದರ್ ರಾಜ್ ಮಾಲೀಕತ್ವದ ಸಂಸ್ಥೆಯಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನಲಾದ ಗ್ರಾಹಕರು ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.















