ಮನೆ ಸುದ್ದಿ ಜಾಲ ರಾತ್ರೋ ರಾತ್ರಿ ಮನೆ ಮುಂದೆ ನಿಂತ್ತಿದ ಹೊಸ ಜೆಸಿಬಿ ಮಾಯ: ಇಬ್ಬರು ಆರೋಪಿಗಳ ಬಂಧನ

ರಾತ್ರೋ ರಾತ್ರಿ ಮನೆ ಮುಂದೆ ನಿಂತ್ತಿದ ಹೊಸ ಜೆಸಿಬಿ ಮಾಯ: ಇಬ್ಬರು ಆರೋಪಿಗಳ ಬಂಧನ

0

ವಿಜಯಪುರ ಮನೆ ಮುಂದೆ ಪೂಜೆ ಮಾಡಿ ನಿಲ್ಲಿಸಿದ್ದ ಹೊಸ ಜೆಸಿಪಿಯನ್ನು ಬೆಳಗಾಗುವರಷ್ಟರಲ್ಲಿ ಕಳ್ಳರು ಕದ್ದೊಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ‌ ಗೋಲಗೇರಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಕುರಿತು ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಶಿವಾಜಿ ರೈತಮುರೆ ಹಾಗೂ ಹೂವಣ್ಣ ಬಂಡಾಗಾರ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ.

ಗೋಲಗೇರಿ ಗ್ರಾಮದಲ್ಲಿ ಸೈಪನ್ ಭಾಗವಾನ್ ಅವರು 35 ಲಕ್ಷ ರೂ. ಖರ್ಚು ಮಾಡಿ ಬೆಳಗ್ಗೆ ಹೊಸ ಜೆಸಿಬಿ ಖರೀದಿಸಿದ್ದರು ನಂತರ  ಪೂಜೆ ಮಾಡಿ ತಮ್ಮ ಮನೆ ಮುಂದೆ ನಿಲ್ಲಿಸಿದ್ದರು ಎನ್ನಲಾಗಿದ್ದು. ರಾತೋರಾತ್ರಿ ಆ ಜೆಸಿಬಿ ಕಾಣೆಯಾಗಿತ್ತು ಅಲ್ಲಿನ  ಸಿಸಿ ಟಿವಿ ಕ್ಯಾಮೆರಾ ವಿಡಿಯೋದಲ್ಲಿ ಪರಿಶೀಲನೆ ಮಾಡಿದಾಗ ಕಳ್ಳರು ಕದ್ದೊಯ್ದಿರುವುದು ಬೆಳಕ್ಕಿಗೆ ಬಂದಿದೆ ಎನ್ನಲಾಗಿದೆ. ಖದೀಮರು ಜಿಪಿಎಸ್ ಕಿಟ್ ಅನ್ನೇ ಕಟ್ ಮಾಡಿ, ಜೆಸಿಬಿಯೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ವಿಜಯಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕಳ್ಳತನದ ಕುರಿತು ಆರಂಭದಲ್ಲಿ ಸರಿಯಾದ ಮಾಹಿತಿ ಸಿಗಲಿಲ್ಲ. ಒಂದೇ ಬೈಕ್​ನಲ್ಲಿ ಬಂದ ಇಬ್ಬರಲ್ಲಿ ಓರ್ವ ಜೆಸಿಬಿ ತೆಗೆದುಕೊಂಡು ಹೋದರೆ, ಇನ್ನೋರ್ವ ಬೈಕ್ ತೆಗೆದುಗೊಂಡು ಮುಂದೆ ಹೊರಟಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇವರು ದೇವರ ಹಿಪ್ಪರಗಿ ಪಟ್ಟಣದ ಬಂಕ್​ವೊಂದರಲ್ಲಿ ಬೈಕ್​ಗೆ ಫೋನ್ ಪೇ ಮೂಲಕ 100 ರೂಪಾಯಿಯ ಪೆಟ್ರೋಲ್ ಹಾಕಿಸಿದ್ದರು. ಇದರ ಆಧಾರದ ಮೇಲೆ ಆ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈದರ ಕುರಿತು ಇಬ್ಬರೂ ಆರೋಪಿಗಳು ಕದ್ದ ಜೆಸಿಬಿಯನ್ನು ತಾವೇ ಖರೀದಿ ಮಾಡಿಕೊಂಡು ಬಂದಿದ್ದೇವೆ ಎಂಬುದಾಗಿ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಹೇಳಿಕೊಂಡಿದ್ದರು. ನಂತರ ಸ್ವಲ್ಪ ದಿನದಲ್ಲಿ ಕಡಿಮೆ ದರಕ್ಕೆ ಜೆಸಿಬಿ ಮಾರಾಟ ಮಾಡಲು ಸಹ ಮುಂದಾಗಿದ್ದರು ಎನ್ನಲಾಗಿದೆ. ಪೆಟ್ರೋಲ್ ಬಂಕ್​ನಲ್ಲಿ ಫೋನ್ ಪೇ ಮಾಡಿದ ನಂಬರ್ ಆಧಾರದ ಮೇಲೆ  ಅವರ ಹಿಂದೆ ಬಿದ್ದ ನಮ್ಮ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್​ಪಿ ಹೇಳಿದರು. ಆರೋಪಿಗಳು ಜೆಸಿಬಿಯನ್ನು ಮಾತ್ರ ಕದ್ದಿರುವುದಾ? ಅಥವಾ ಬೇರೆ ಯಾವುದಾದರೂ ಪ್ರಕರಣ ಇವರ ಮೇಲೆ ಇದೆಯಾ ಎಂಬುದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.