ಮನೆ ಅಪರಾಧ ಪತ್ನಿಯ ಬೀಕರ ಕೊಲೆ; ಪೊಲೀಸರಿಗೆ ಶರಣಾದ ಪತಿರಾಯ..!

ಪತ್ನಿಯ ಬೀಕರ ಕೊಲೆ; ಪೊಲೀಸರಿಗೆ ಶರಣಾದ ಪತಿರಾಯ..!

0

ಮೈಸೂರು : ಪತ್ನಿಯ ಮೇಲಿನ ಶಂಕೆಯಿಂದ ಪತಿ-ಪತ್ನಿಯನ್ನು ಕೊಂದ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ನೆನ್ನೆ (ಗುರುವಾರ) ನಡೆದಿದೆ. ಪುಷ್ಪ ಪತಿಯಿಂದಲೇ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಪುಷ್ಪ ತಮ್ಮ ಜೀವನ ನಡೆಸಲು ಬ್ಯೂಟಿ ಪಾರ್ಲರ್ ಹಾಗೂ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದುವರೆ ವರ್ಷದ ಹಿಂದೆ ಮದುವೆಯಾಗಿ ಹಳೇ ಕೆಸರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೂ. ಪತಿಯು ಬಾರಿನಲ್ಲಿ ಕೆಲಸ ಮಾಡುತ್ತಿದ್ದು ಅವರಿಬ್ಬರ ಮಧ್ಯ ಹೊಂದಾಣಿಕೆ ಇಲ್ಲದೆ ಪುಷ್ಪ ರಾಜೀವ್ ನಗರ ಮೂರನೇ ಹಂತದಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದಳು.

ಮನೆಯ ಹಿರಿಕರು ತಿಳಿಯಲಿ ಅವಳನ್ನು ಗಂಡನ ಮನೆಗೆ ಕಳುಹಿಸಿದರು. ಬ್ಯೂಟಿ ಪಾರ್ಲರ್ ಕೆಲಸಕ್ಕೆ ಹೋಗುವುದನ್ನು ಸಹಿಸದ ಪತಿಯಾದ ಮಹೇಶ್ ಪುಷ್ಪಳೊಂದಿಗೆ ಆಗಾಗ ಜಗಳವಾಗುತ್ತಿತ್ತು. ಗುರುವಾರ ಸಾಂಬಾರ್ ಚೆನ್ನಾಗಿಲ್ಲ ಎಂಬ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಮುಂಜಾನೆ 4:00 ಗಂಟೆಗೆ ಮಹೇಶ್ ಮನೆಯಲ್ಲೇ ಇದ್ದ ಕೊಡಲಿಯನ್ನು ತೆಗೆದುಕೊಂಡು ಮಲಗಿದ್ದ ಪುಷ್ಪಾಳನ್ನು ಹತ್ಯೆ ಮಾಡಿದ್ದಾನೆ.

ತದನಂತರ ಮಹೇಶ್ ಎನ್ ಆರ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಎನ್ ಆರ್ ಠಾಣೆ ಇನ್ಸ್ಪೆಕ್ಟರ್ ಸ್ಥಳ ಮಾರ್ಜರ್ ಮಾಡಿ ಕೊಲೆ ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.