ಬೆಂಗಳೂರು ನಗರದಲ್ಲಿ ಕಾವೇರಿ ನೀರಿನ ದರ ಏರಿಕೆಯು ನಾಗರಿಕರಿಗೆ ಶಾಕ್ ನೀಡಿದ್ದು, ಇಂದಿನಿಂದಲೇ ಜೀವನ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಆಗುತ್ತಿದೆ ಎನ್ನಲಾಗಿದೆ. ಬೆಂಗಳೂರು ಜಲಮಂಡಳಿಯು ಈಗಾಗಲೇ ಏಪ್ರಿಲ್ 1ರಿಂದ ನೀರಿನ ದರದಲ್ಲಿ ಶೇ 3 ರಷ್ಟು ಏರಿಕೆ ಮಾಡಿದೆ ಎಂದು ಜಾರಿಗೆ ತಂದಿದೆ. ಜಲಮಂಡಳಿಯ ಪ್ರಕಾರ, ಆರ್ಥಿಕ ನಷ್ಟ, ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್ ಖರ್ಚು ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೆಚ್ಚಗಳ ಹೆಚ್ಚಳದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತೀಳಿಸಿದೆ ಎನ್ನಲಾಗಿದೆ. ನಗರವು ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಹೆಚ್ಚುವರಿ ಹಣಕಾಸು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಮಹತ್ವದ ಅಂಶವೆಂದರೆ, ಇನ್ನು ಮುಂದೆ ಪ್ರತಿ ವರ್ಷವೂ ಶೇ 3 ರಷ್ಟು ನೀರಿನ ದರವನ್ನು ಏರಿಕೆ ಮಾಡಲು ಜಲಮಂಡಳಿ ತೀರ್ಮಾನಿಸಿದ್ದು. ಇದರಂತೆ, ಈ ವರ್ಷದ ಪರಿಷ್ಕೃತ ದರಗಳು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ ಎಂಬ ಮಾಹಿತಿಯನ್ನು ನಿವಾಸಿಗಳಿಗೆ ತಿಳಿಸಲಾಗಿದೆ. ಪರಿಷ್ಕೃತ ದರಗಳ ಪ್ರಕಾರ, ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ ಗರಿಷ್ಠ 1 ಪೈಸೆಯವರೆಗೆ ಹೆಚ್ಚಳವಾಗಲಿದೆ. ಇದರ ಪರಿಣಾಮವಾಗಿ ಮನೆಮಠಗಳಲ್ಲಿ ಮಾಸಿಕ ನೀರಿನ ಶುಲ್ಕವು ಸರಾಸರಿ 20ರಿಂದ 30 ರೂಪಾಯಿ ಹೆಚ್ಚುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ, ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆ ಹೆಚ್ಚಳವಾಗಲಿದ್ದು, ಅವರ ಮಾಸಿಕ ಬಿಲ್‌ಗಳಲ್ಲಿ 50ರಿಂದ 60 ರೂಪಾಯಿ ಹೆಚ್ಚುವರಿ ಭಾರ ಬೀಳುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದೆ.
ಕಳೆದ ವರ್ಷವೇ 11 ವರ್ಷಗಳ ನಂತರ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವನ್ನು ಗಣನೀಯವಾಗಿ ಹಿಚ್ಚಿಸಲಾಗಿತ್ತು.ನಂತರ 2025ರಲ್ಲಿ ಜಲಮಂಡಳಿ ಕಾವೇರಿ ನೀರಿನ ಬಿಲ್‌ಗಳನ್ನು ಶೇ 27ರಿಂದ 30 ರಷ್ಟು ಹೆಚ್ಚಳ ಮಾಡಿತ್ತು. ಆದರೆ ಇದೀಗ ಅದರ ನಂತರದ ನಿರಂತರ ಏರಿಕೆ ನೀರಿನ ದರಗಳನ್ನು ಹಂತ ಹಂತವಾಗಿ ಹೆಚ್ಚಿಸುವ ನೀತಿಯ ಸೂಚನೆಯಾಗಿದೆ ಎಂದು ತಿಳಿದುಬಂದಿದೆ.















