ಮನೆ ಸುದ್ದಿ ಜಾಲ ಕಳೆಗುಂದಿದ ಐಪಿಎಲ್ 2026  : ಟಿಆರ್​ಪಿಯೂ ಇಲ್ಲ, ನೋಡುವವರೂ ಇಲ್ಲ

ಕಳೆಗುಂದಿದ ಐಪಿಎಲ್ 2026  : ಟಿಆರ್​ಪಿಯೂ ಇಲ್ಲ, ನೋಡುವವರೂ ಇಲ್ಲ

0

ಐಪಿಎಲ್‌ 2026  ಈಗಾಗಲೇ 47 ಪಂದ್ಯಗಳು ಮುಗಿದಿವೆ. ಅಂದರೆ ಐಪಿಎಲ್​ನ ಅರ್ಧ ಪ್ರಯಾಣ ಮುಗಿದಂತ್ತಾಗಿದೆ. ಆರಂಭದಲ್ಲಿ ಐಪಿಎಲ್​ಗೆ ಸಿಕ್ಕ ಬೆಂಬಲ ಪಂದ್ಯಗಳು ಮುಂದುವರೆದಂತೆ ಕಳೆಗುಂದಿದಂತೆ ಕಾಣುತ್ತಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಬರಿ ಬ್ಯಾಟರ್​ಗಳ ಪಾರುಪತ್ಯವೇ ಹೆಚ್ಚಾಗಿರುವುದು. ಇದರ ಜೊತೆಗೆ ಇನ್ನು ಅನೇಕ ಕಾರಣಗಳು ಐಪಿಎಲ್​ ಮೇಲೆ ಅಭಿಮಾನಿಗಳು ಉತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತಿವೆ ಎನ್ನಬಹುದು.

ಇದೀಗ ಅದಕ್ಕೆ ಪೂರಕವೆಂಬಂತೆ ಹೊರಬಿದ್ದಿರುವ ವರದಿಯೊಂದು ಐಪಿಎಲ್ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, 2026 ರ ಐಪಿಎಲ್​ನ ಟಿಆರ್​ಪಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಮಾತ್ರವಲ್ಲದೆ ಐಪಿಎಲ್ ವೀಕ್ಷಿಸುವವರ ಸಂಖ್ಯೆಯಲ್ಲೂ ಇಳಿಮುಖ ಕಂಡುಬಂದಿದೆ. ಇದರ ಪರಿಣಾಮವೆಂಬಂತೆ ಜಾಹೀರಾತುದಾರರ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲಿಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ ಬಗ್ಗೆ ಹೇಳುವುದಾದರೆ.. TAM ಸ್ಪೋರ್ಟ್ಸ್ ಮತ್ತು BARC ಇಂಡಿಯಾ ನೀಡಿರುವ ವರದಿ ಪ್ರಕಾರ, ಐಪಿಎಲ್ 2026 ರ ಟಿಆರ್​ಪಿ ಶೇಕಡಾ 18.8 ರಷ್ಟು ಕಡಿಮೆಯಾಗಿದೆ. ಅಂದರೆ ಐಪಿಎಲ್ 2026 ರ ಟಿಆರ್​ಪಿ 4.57 ರಿಂದ 3.71 ಕ್ಕೆ ಇಳಿದಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ವೀಕ್ಷಕರ ಸಂಖ್ಯೆಯೂ ಶೇ.26 ರಷ್ಟು ಕಡಿಮೆಯಾಗಿದೆ ಎನ್ನಬಹುದು.

ಅಂದರೆ ಐಪಿಎಲ್ ವೀಕ್ಷಕರ ಸಂಖ್ಯೆ 124 ಮಿಲಿಯನ್‌ನಿಂದ 113.6 ಮಿಲಿಯನ್‌ಗೆ ಕುಸಿದಿದೆ. ಐಪಿಎಲ್ 2026 ರಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾದ್ದರ ಪರಿಣಾಮವಾಗಿ ಜಾಹೀರಾತುದಾರರು ಸಹ ಆಸಕ್ತಿ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಐಪಿಎಲ್ 2026 ಜಾಹೀರಾತುದಾರರು ಶೇಕಡಾ 31 ರಷ್ಟು ಕುಸಿತ ಕಂಡಿದ್ದಾರೆ. ಹಿಂದೆ, ಜಾಹೀರಾತುದಾರರ ಸಂಖ್ಯೆ 65 ಮೀರಿತ್ತು, ಆದರೆ ಈಗ ಅದು 45 ಕ್ಕೆ ಕುಸಿದಿದ್ದು.ಈಗ ಪ್ರಶ್ನೆ ಏನೆಂದರೆ, ಟಿಆರ್‌ಪಿ, ವೀಕ್ಷಕರ ಸಂಖ್ಯೆ ಮತ್ತು ಜಾಹೀರಾತುದಾರರ ಸಂಖ್ಯೆಯಲ್ಲಿನ ಕುಸಿತಕ್ಕೆ ಕಾರಣವೇನು? ಎಂಬುದು. ಇದಕ್ಕೆ ಕಾರಣ, ಲೀಗ್‌ನ ಸ್ವರೂಪದ ದೀರ್ಘೀಕರಣ, ಪಂದ್ಯಗಳನ್ನು ಫ್ಲಾಟ್ ಪಿಚ್‌ಗಳಲ್ಲಿ ಆಡಿಸುತ್ತಿರುವುದು ಮತ್ತು ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧ ಸೇರಿದಂತೆ ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ ಎನ್ನಬಹುದು.

ಫ್ಲಾಟ್ ಪಿಚ್‌ಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುತ್ತಿರುವುದರಿಂದ ಕೇವಲ ಬ್ಯಾಟರ್​ಗಳ ಅಬ್ಬರವೇ ಹೆಚ್ಚಿದೆ. ಇದರಿಂದ ಆಟದಲ್ಲಿನ ಸಮತೋಲನೆ ಮಾಯಾವಾಗಿರುವುದು ಅಭಿಮಾನಿಗಳ ನಿರಾಸಕ್ತಿಗೆ ಕಾರಣವಾಗಿದೆ.ಹಾಗೆಯೇ ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವು ಐಪಿಎಲ್‌ನಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಇದಲ್ಲದೆ, ವೀಕ್ಷಕರ ಅಭ್ಯಾಸದಲ್ಲಿನ ಇತ್ತೀಚಿನ ಬದಲಾವಣೆಗಳು ಟಿಆರ್‌ಪಿಗಳಲ್ಲಿನ ಕುಸಿತಕ್ಕೆ ಪ್ರಮುಖ ಕಾರಣ. ಹೆಚ್ಚಿನ ವೀಕ್ಷಕರು ಈಗ ತಾವು ಬೆಂಬಲಿಸುವ ತಂಡಗಳನ್ನು ಒಳಗೊಂಡ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಐಪಿಎಲ್​ನ​ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನಬಹುದಾಗಿದೆ.