ವಾಷಿಂಗ್ಟನ್ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳು ಸುಗಮವಾಗಿ ಚಲಿಸಲು ಮಾರ್ಗದರ್ಶನ ನೀಡುವ ಅಮೆರಿಕದ ‘ಪ್ರಾಜೆಕ್ಟ್ ಫ್ರೀಡಂ’ ಮಿಲಿಟರಿ ಕಾರ್ಯಾಚರಣೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಂಗಳವಾರ (ಮೇ 5) ರಂದು ಸಂಜೆ ಹೇಳಿದ್ದಾರೆ ಎನ್ನಲಾಹಿದೆ. ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ಪಾಕಿಸ್ತಾನ ಮತ್ತು ಇತರ ದೇಶಗಳ ವಿನಂತಿ ಮೇರೆಗೆ ಹಾಗೂ ಇರಾನ್ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಸಿಕ್ಕ ಅದ್ಭುತ ಮಿಲಿಟರಿ ಯಶಸ್ಸಿನ ಆಧಾರದ ಮೇಲೆ ನಾವು ಈ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪರಸ್ಪರ ಒಪ್ಪಿಕೊಂಡಿದ್ದೇವೆ” ಎಂದು ಅವರು ಬರೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ ಪರಸ್ಪರ ಒಪ್ಪಂದದಿಂದ ಕೆಲವು ದಿನಗಳ ಹಿಂದೆ ಆರಂಭವಾದ ಪ್ರಾಜೆಕ್ಟ್ ಪ್ರೀಡಂ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ಇರಾನಿನ ಪ್ರತಿನಿಧಿಗಳೊಂದಿಗಿನ ಮಾತುಕತೆಗಳು ಸಂಪೂರ್ಣ ಮತ್ತು ಅಂತಿಮ ಒಪ್ಪಂದಕ್ಕೆ ಹತ್ತಿರವಾಗಿವೆ. ಒಪ್ಪಂದದ ಕಡೆಗೆ ಮಹಾನ್ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ಹಾಗೂ ಕಡಲ ಕಾರ್ಯಾಚರಣೆಗಳಲ್ಲಿ ವಿರಾಮವಿದ್ದರೂ, ಇರಾನ್ ಮೇಲಿನ ಒತ್ತಡ ಮುಂದುವರಿಯುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗುತ್ತಿದೆ.
ಈ ಯುಧ “ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಉಳಿಯುತ್ತದೆಯಾದರೂ, ಪ್ರಾಜೆಕ್ಟ್ ಫ್ರೀಡಂ ಅನ್ನು ಅಲ್ಪಾವಧಿಗೆ ವಿರಾಮಗೊಳಿಸಲಾಗುತ್ತದೆ” ಎಂದು ಅವರು ಹೇಳಿದರು. “ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯುತ್ತದೆಯಾದರೂ, ಒಪ್ಪಂದವನ್ನು ಅಂತಿಮಗೊಳಿಸಿ ಸಹಿ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಪ್ರಾಜೆಕ್ಟ್ ಫ್ರೀಡಂ ಅನ್ನು ಅಲ್ಪಾವಧಿಗೆ ವಿರಾಮಗೊಳಿಸಲಾಗುವುದು ಎಂದು ನಾವು ಪರಸ್ಪರ ಒಪ್ಪಿಕೊಂಡಿದ್ದೇವೆ” ಎಂದು ಟ್ರಂಪ್ ಹೇಳಿದರು ಎನ್ನಲಾಗಿದ್ದು. ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಲು ಇರಾನ್ ಮೇಲೆ ಒತ್ತಡ ಹೇರುವ ಭಾಗವಾಗಿ ವಾಷಿಂಗ್ಟನ್ ಇರಾನ್‌ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಇನ್ನೂ ಕಾಯ್ದುಕೊಳ್ಳುತ್ತಿದೆ.
ಹಾಗೂ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ವಶಪಡಿಸಿಕೊಂಡಿರುವ ಕೊಲ್ಲಿಗೆ ಹಾರ್ಮುಜ್ ಜಲಸಂಧಿಯಿಂದ ಹಡಗುಗಳು ಹೊರಹೋಗಲು ಸಹಾಯ ಮಾಡಲು ಟ್ರಂಪ್ ಸೋಮವಾರ ಪ್ರಾಜೆಕ್ಟ್ ಫ್ರೀಡಂ ಪ್ರಾರಂಭಿಸಿದ್ದರು. ಮಂಗಳವಾರದಂದು (ಮೇ 5) ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, ಇರಾನ್ ವಿರುದ್ಧದ ಆಕ್ರಮಣ ಕಾರ್ಯಾಚರಣೆಗಳನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಹೇಳಿದ್ದು, ಇದನ್ನು “ಆಪರೇಷನ್ ಎಪಿಕ್ ಫ್ಯೂರಿ” ಎಂದು ಕರೆದಿದ್ದರು. “ಇದು ಆಕ್ರಮಣಕಾರಿ ಕಾರ್ಯಾಚರಣೆಯಲ್ಲ; ಇದು ರಕ್ಷಣಾತ್ಮಕ ಕಾರ್ಯಾಚರಣೆ. ತುಂಬಾ ಸರಳವಾದ ಅರ್ಥದಲ್ಲಿ ಮೊದಲು ನಮ್ಮ ಮೇಲೆ ಗುಂಡು ಹಾರಿಸದ ಹೊರತು ನಾವು ಯಾವುದೇ ಗುಂಡು ಹಾರಿಸುವುದಿಲ್ಲ” ಎಂದಿದ್ದರು ಎಂಬ ವಿಷಯ ತಿಳಿದುಬಂದಿದೆ.
















