ಮನೆ ಸುದ್ದಿ ಜಾಲ ರಾಜಕೀಯ ಭೂಪಟವನ್ನೇ ಬದಲು ಮಾಡಿದ ಉಪಚುನಾವಣೆ : ಬಾಗಲಕೋಟೆ

ರಾಜಕೀಯ ಭೂಪಟವನ್ನೇ ಬದಲು ಮಾಡಿದ ಉಪಚುನಾವಣೆ : ಬಾಗಲಕೋಟೆ

0

ಬಾಗಲಕೋಟೆ  ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಇದು ಕೈ ಪಾಳಯದಲ್ಲಿ ಮತ್ತಷ್ಟು ಹುಮ್ಮಸ್ಸು ತರಿಸಿದೆ. ಜಯದ ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷ ಬಿಜೆಪಿಗೆ ಈ ಫಲಿತಾಂಶವು ತೀವ್ರ ನಿರಾಸೆ ಮೂಡಿಸಿದೆ. ಸದ್ಯ ಉಭಯ ಪಕ್ಷಗಳಲ್ಲಿ ಸೋಲು ಗೆಲುವಿನ ಪರಾಮರ್ಶೆ ನಡೆಯುತ್ತಿದೆ ಎನ್ನಬಹುದು.

ಸಚಿವ ಸತೀಶ ಜಾರಕಿಹೊಳಿ ಅವರ ತಂತ್ರಗಾರಿಕೆ ಕೈ ಹಿಡಿದಿದೆ. ಚುನಾವಣೆ ಘೋಷಣೆಗೂ ಮುನ್ನ ತಿಂಗಳ ಮುಂಚೆ ಗೆಲುವಿಗಾಗಿ ರಣತಂತ್ರ ಮಾಡಿದ್ದರು ಎನ್ನಲಾಗಿದೆ. ತಮ್ಮದೇ ಆದ ತಂಡ ರಚಿಸಿ ಹಳ್ಳಿ ಹಳ್ಳಿಗೆ ತಂಡದ ಸದಸ್ಯರನ್ನು ಬಿಟ್ಟು ಸರ್ವೇ ಮಾಡಿಸಿದ್ದರು. ಟಿಕೆಟ್ ಯಾರಿಗೆ ನೀಡಬೇಕು, ಗೆಲುವಿಗೆ ಹೇಗೆಲ್ಲಾ ತಂತ್ರಗಾರಿಕೆ ಮಾಡಬೇಕೆಂದು ಸಿಎಂಗೆ ಮಾಹಿತಿ‌ ಕೂಡ ರವಾನಿಸುತ್ತಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಹಿಡಿದು ಕ್ಷೇತ್ರದಲ್ಲಿ ಬೀಡುಬಿಟ್ಟು ಹೆಣೆದ ಅವರ ಚುನಾವಣೆ ರಣತಂತ್ರ ಹುಸಿಯಾಗಲಿಲ್ಲ. ಎಲ್ಲದರ ಪರಿಣಾಮ ಬಾಗಲಕೋಟೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ದಾಖಲೆ ಅಂತರದಿಂದ ಜಯಗಳಿಸಿರುವುದು ಗಮನಾರ್ಹ. 1952ರಲ್ಲಿ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ದಾಖಲೆ ಆಗಿತ್ತು.

ಆಗಿನ ಕಾಂಗ್ರೆಸ್‌ನ ಬಿ.ಟಿ. ಮುರನಾಳ ಅವರು ಪ್ರತಿಸ್ಪರ್ಧಿ ಜಿ.ಕೆ. ದೇಸಾಯಿ ವಿರುದ್ಧ 18,108 ಮತಗಳ ಅಂತರದಿಂದ ಗೆದ್ದಿದ್ದರು. ಆಗಿನ ಕಾಲದಲ್ಲಿ ದಾಖಲೆ ಆಗಿತ್ತು. ಕಳೆದ ಏಳು ದಶಕಗಳಿಂದ ಈ ದಾಖಲೆ ಅಜೇಯವಾಗಿ ಉಳಿದಿತ್ತು. ಈ ಉಪಚುನಾವಣೆ ಬಾಗಲಕೋಟೆಯ ರಾಜಕೀಯ ಭೂಪಟವನ್ನೇ ಬದಲಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ದಿ. ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ, ತಮ್ಮ ತಂದೆಯ ನಿಧನದಿಂದ ಸೃಷ್ಟಿಯಾದ ಅನುಕಂಪದ ಅಲೆಯನ್ನಷ್ಟೇ ಬಳಸಿಕೊಳ್ಳಲಿಲ್ಲ, ಬದಲಿಗೆ ಎದುರಾಳಿ ವೀರಣ್ಣ ಚರಂತಿಮಠ ಅವರ ಭದ್ರಕೋಟೆಯನ್ನು 22,332 ಮತಗಳ ಬೃಹತ್ ಅಂತರದಿಂದ ಛೇದಿಸಿದ್ದಾರೆ ಎನ್ನಬಹುದಾಗಿದೆ.

ಹೀಗೆ ಕಾಂಗ್ರೆಸ್ ಪಕ್ಷದ ಗೆಲುವಿನ ಮೊಟ್ಟ ಮೊದಲು ಕಾರಣ ಸಿಎಂ ಸಿದ್ದರಾಮಯ್ಯನವರು. ಈ ಕ್ಷೇತ್ರ ಉಳಿಸುಕೊಳ್ಳುವುದಕ್ಕೆ ಪಣ ತೊಟ್ಟಿದ್ದರು. ಹೀಗಾಗಿ ಸಚಿವ ಸತೀಶ ಜಾರಕಿಹೊಳಿ ಅವರ ಟೀಂ ರೆಡಿ ಮಾಡಿಸಿ ರಣತಂತ್ರ ಮಾಡಿಸಿದರು. ಗ್ರಾಮ ಪಂಚಾತಿಯಿಂದ ಹಿಡಿದು ಬೂತ್ ಮಟ್ಟದಲ್ಲಿ ಸರ್ವೇ ಕಾರ್ಯ ನಡೆಸಿದ್ದರು. ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಬಾಗಲಕೋಟೆಯಲ್ಲಿ ಕಾಂಗ್ರೆಸ್​ ತನ್ನ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ ಎಂಬುದಾಗಿದೆ.

ಆದರೆ ಬಿಜೆಪಿ ಪಕ್ಷದ ಸೋಲಿಗೆ ಮೊದಲ ಕಾರಣ ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಸರಿಯಾಗಿ ಸ್ಪಂದನ ಇಲ್ಲದೇ ಇರುವುದು. ಸ್ನೇಹಪರ, ಆತ್ಮೀಯವಾಗಿ ಮಾತನಾಡುವ ಬದಲು ನಿಷ್ಠುರವಾಗಿ ಮಾತನಾಡುವುದೇ ಸೋಲಿನ ಕಾರಣ ಎಂದು ಹೇಳಲಾಗುತ್ತಿದೆ. ಇನ್ನೂ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು ಹೊಂದಾಣಿಕೆ ಮಾಡಿಕೊಳ್ಳುವ ಇಚ್ಚೇ ಇದ್ದರೂ, ವೈಮನಸ್ಸು ಮುಂದುವರೆಸಿ ದೂರ ಮಾಡಿಕೊಂಡಿರು.

ನಂತರ ಮಹಿಳಾ ಮತದಾರರು ಹೆಚ್ಚಾಗಿದ್ದರಿಂದಲೇ ಮಹಿಳಾ ಮತದಾರರಿಗೆ ಸೆಳೆಯುವ ಯತ್ನ ಮಾಡದೇ ಇರುವುದು, ಒಳ ಏಟು ಹಾಗೂ ವಿದ್ಯಾರ್ಥಿಗಳು ಮತ್ತು ಕೆಲ ಯುವಕರು ಮೊದಲು ಸಲ ಹಕ್ಕು ಚಲಾಯಿಸಿದ ಮತದಾರರು ‘ಕೈ’ ಕೊಟ್ಟಿರುವುದು ಬಹಿರಂಗವಾಗಿದೆ. ಎರಡು ಕ್ಷೇತ್ರಗಳ ಪೈಕಿ ಬಾಗಲಕೋಟೆಯಲ್ಲಿ ಉಮೇಶ್ ಹುಲ್ಲಪ್ಪ ಮೇಟಿ 22 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಇತ್ತ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಶಾಮನೂರು 5,708 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ ಎನ್ನಲಾಗಿದೆ.