ಮನೆ ಸುದ್ದಿ ಜಾಲ ಚೀನಾ ಸರ್ಕಾರದಿಂದ ರೇಡ್‌ ಕಾರ್ಪೆಟ್ ಹಾಸಿ ಡೊನಾಲ್ಡ್ ಟ್ರಂಪ್​ಗೆ ಅದ್ದೂರಿ ಸ್ವಾಗತ : ಬೀಜಿಂಗ್​​

ಚೀನಾ ಸರ್ಕಾರದಿಂದ ರೇಡ್‌ ಕಾರ್ಪೆಟ್ ಹಾಸಿ ಡೊನಾಲ್ಡ್ ಟ್ರಂಪ್​ಗೆ ಅದ್ದೂರಿ ಸ್ವಾಗತ : ಬೀಜಿಂಗ್​​

0

ಬೀಜಿಂಗ್, ಚೀನಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಚೀನಾ ಪ್ರವಾಸದಲ್ಲಿದ್ದಾರೆ. ಬೀಜಿಂಗ್​ಗೆ ಆಗಮಿಸಿದ ಟ್ರಂಪ್​ಗೆ ಚೀನಾ ಸರ್ಕಾರ ರೇಡ್‌ ಕಾರ್ಪೆಟ್ ಹಾಸಿನ ಅದ್ದೂರಿ ಸ್ವಾಗತ ನೀಡಿದೆ ಎನ್ನಲಾಗುತ್ತಿದೆ. ಆದರೆ, ಟ್ರಂಪ್​ ಸ್ವಾಗತಕ್ಕೆ ಕ್ಸಿ ಜಿನ್​ ಪಿಂಗ್​ ಆಗಮಿಸದೇ ಇರುವುದು ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಡೊನಾಲ್ಡ್​ ಟ್ರಂಪ್ ಅವರನ್ನು ಚೀನಾದ ಉಪಾಧ್ಯಕ್ಷ ಹಾನ್ ಝೆಂಗ್ ವಿಮಾನ ನಿಲ್ದಾಣದಲ್ಲಿ ಕೆಂಪು ಹಾಸಿನ ಸ್ವಾಗತ ಕೋರಿದರು.

ಇದು ಸಾಮಾನ್ಯ ರಾಜತಾಂತ್ರಿಕ ಶಿಷ್ಟಾಚಾರವನ್ನು ಮುರಿದ ಅಪರೂಪದ ಗೌರವ ಎಂದು ಬಣ್ಣಿಸಲಾಗುತ್ತಿದೆ. ಕ್ಸಿ ಅವರ ಆಪ್ತ ಮಿತ್ರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಚೀನಾಕ್ಕೆ ಭೇಟಿ ನೀಡುವ ಹೆಚ್ಚಿನ ಉನ್ನತ ನಾಯಕರನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಉನ್ನತ ಹುದ್ದೆಯಾದ ಸ್ಟೇಟ್ ಕೌನ್ಸಿಲರ್‌ಗಳು ಸ್ವಾಗತ ಕೋರುತ್ತಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಟ್ರಂಪ್ ಅವರನ್ನು ಸ್ವಾಗತಿಸಲು ಉಪಾಧ್ಯಕ್ಷ ಹಾನ್ ಅವರನ್ನು ನಿಯೋಜಿಸುವ ಮೂಲಕ, ಚೀನಾ, ಟ್ರಂಪ್​ ಅವರ ಈ ಭೇಟಿಗೆ ತಾನು ಎಷ್ಟು ಪ್ರಾಮುಖ್ಯತೆಯನ್ನು ನೀಡಿದ್ದೇವೆ ಎಂಬ ಬಗ್ಗೆ ಸಂದೇಶವನ್ನು ಕಳುಹಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನೀಲಿ ಮತ್ತು ಬಿಳಿ ಸಮವಸ್ತ್ರ ಧರಿಸಿದ 300 ಚೀನೀ ಯುವಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರನ್ನು ಸ್ವಾಗತಿಸಿದರು. ಚೀನೀ ಮತ್ತು ಅಮೆರಿಕನ್​ ಧ್ವಜಗಳನ್ನು ಏಕಸ್ವರದಲ್ಲಿ ಬೀಸುತ್ತಾ, ಸ್ವಾಗತ, ಸ್ವಾಗತ! ಆತ್ಮೀಯ ಸ್ವಾಗತ! ಎಂದು ಚೀನೀ ಭಾಷೆಯಲ್ಲಿ ಘೋಷಣೆ ಕೂಗಿದರು.  ಹಾಗೆ ಟ್ರಂಪ್ ಅವರೊಂದಿಗೆ ಏರ್ ಫೋರ್ಸ್ ಒನ್‌ನಿಂದ ಅವರ ಮಗ ಎರಿಕ್ ಮತ್ತು ಸೊಸೆ ಲಾರಾ, ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಸಹ ಇಳಿದು ಬಂದರು.

ಚೀನಾ ಪ್ರವಾಸದಲ್ಲಿ ಟ್ರಂಪ್ ಅವರೊಂದಿಗೆ ಅಮೆರಿಕದ ಕೆಲವು ಉನ್ನತ ಮಟ್ಟದ ಉದ್ಯಮಿಗಳು ಇದ್ದರು. ಎನ್ವಿಡಿಯಾದ ಜೆನ್ಸನ್ ಹುವಾಂಗ್, ಆಪಲ್‌ನ ಟಿಮ್ ಕುಕ್, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮಸ್ಕ್ ಮತ್ತು ಬ್ಲ್ಯಾಕ್‌ರಾಕ್‌ನ ಲ್ಯಾರಿ ಫಿಂಕ್ ಅಮೆರಿಕ ಅಧ್ಯಕ್ಷರೊಂದಿಗೆ ಚೀನಾಕ್ಕೆ ಆಗಮಿಸಿದ ಪ್ರಮುಖರಾಗಿದ್ದಾರೆ. ಬೀಜಿಂಗ್​ಗೆ ಬಂದಿಳಿದ ಮೇಲೆ ಸೋಷಿಯಲ್​ ಮೀಡಿಯಾ ಪೋಸ್ಟ್ ಹಾಕಿರುವ ಟ್ರಂಪ್​, ಚೀನಾ ಅಧ್ಯಕ್ಷರನ್ನು ಗುಣಗಾನ ಮಾಡಿದ್ದಾರೆ. ಸೆಮಿಕಂಡಕ್ಟರ್ ಚಿಪ್‌ಗಳು ಅಮೆರಿಕ ಚೀನಾ ನಡುವೆ ತಂತ್ರಜ್ಞಾನ ಪೈಪೋಟಿಗೆ ಕಾರಣವಾಗಿದೆ. ಹೀಗಾಗಿ ಟ್ರಂಪ್​ ಚಿಪ್​ ಗಳ ತಯಾರಿಕಾ ದೈತ್ಯ ಎನ್ವಿಡಿಯಾದ ಜೆನ್ಸನ್ ಹುವಾಂಗ್ ಅವರನ್ನು ತಮ್ಮ ನಿಯೋಗದೊಂದಿಗೆ ಕೆರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ಉಭಯ ರಾಷ್ಟ್ರಗಳ ನಡುವೆ ಮಹತ್ವದ ಒಪ್ಪಂದವಾಗುವ ಸಾಧ್ಯತೆಗಳಿವೆ. ಚೀನಾ ತನ್ನ AI ತಂತ್ರಜ್ಞಾನ ಅಭಿವೃದ್ಧಿಗಾಗಿ ಸೆಮಿಕಂಡಕ್ಟರ್ ಚಿಪ್‌ಗಳಿಗಾಗಿ ಚೌಕಾಶಿ ಮಾಡುತ್ತಿದೆ.

ಆದರೆ, ಅಮೆರಿಕ ಮೊಬೈಲ್ ಫೋನ್‌ಗಳು ಮತ್ತು ವಿಮಾನ ಜೆಟ್‌ಗಳನ್ನು ತಯಾರಿಸಲು ಬಳಸುವ ಅಪರೂಪದ – ಖನಿಜಗಳನ್ನು ಬಯಸುತ್ತಿದೆ. ಟ್ರಂಪ್ ಆಗಮನದ ಮೊದಲು ಚೀನಾದ ಉಪಾಧ್ಯಕ್ಷ ಹೆ ಲೈಫೆಂಗ್ ಮತ್ತು ಸ್ಕಾಟ್ ಬೆಸೆಂಟ್ ದಕ್ಷಿಣ ಕೊರಿಯಾದಲ್ಲಿ ಅಂತಿಮ ಸುತ್ತಿನ ವ್ಯಾಪಾರ ಮಾತುಕತೆಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಅದರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಟ್ರಂಪ್ ಮತ್ತು ಕ್ಸಿ ಅವರು ಮಹತ್ವದ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಈ ವೇಳೆ, ಜಾಗತಿಕ ಸಮಸ್ಯೆಗಳ ಬಗ್ಗೆ ಸಮಾಲೋಚಿಸಲಿದ್ದಾರೆ. ಇದರಲ್ಲಿ ವಿಶೇಷವಾಗಿ ಇರಾನ್ ಯುದ್ಧದ ಬಗ್ಗೆ ಉಭಯ ನಾಯಕರು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾತುಕತೆಗಳು ವ್ಯಾಪಾರ, ಸುಂಕಗಳು, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ, ತೈವಾನ್ ಮತ್ತು ತೈಪೆ, ಇರಾನ್ ಮತ್ತು ಪೂರ್ವ ಏಷ್ಯಾ ಭದ್ರತೆ ಮತ್ತು ಪೂರೈಕೆ ಸರಪಳಿಗಳಿಗೆ ಶಸ್ತ್ರಾಸ್ತ್ರ ಮಾರಾಟದ ವಿಚಾರಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಕ್ಸಿ ಜಿನ್​ ಪಿಂಗ್​ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಡುವಣ ಶೃಂಗಸಭೆಯಲ್ಲಿ ಇರಾನ್ ಅಮೆರಿಕ ಇಸ್ರೇಲ್​ ಯುದ್ಧವನ್ನು ಕೊನೆಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಕೊನೆಗೊಳಿಸಬಹುದಾದ ಕ್ರಮಗಳ ಬಗ್ಗೆ ಯಾವೆಲ್ಲ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಇಡೀ ವಿಶ್ವ ಕಾತರದಿಂದ ಕಾದು ನೋಡುತ್ತಿದೆ. ಟ್ರಂಪ್ ಭೇಟಿಗೂ ಮುನ್ನ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಬೀಜಿಂಗ್​​ಗೆ ನೀಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅರಘ್ಚಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಚೀನಾ ಇರಾನ್‌ನ ತೈಲದ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ಟೆಹ್ರಾನ್‌ನೊಂದಿಗೆ ಮಹತ್ವದ ರಕ್ಷಣಾ ಸಂಬಂಧಗಳನ್ನು ಹೊಂದಿದೆ ಎನ್ನಲಾಗುತ್ತಿದೆ.