ಮನೆ ರಾಜ್ಯ ಸಾಗಿಸುತ್ತಿದ್ದ, 47 ವನ್ಯಜೀವಿಗಳ ವಶಕ್ಕೆ ಪಡೆದ ಅಧಿಕಾರಿಗಳು

ಸಾಗಿಸುತ್ತಿದ್ದ, 47 ವನ್ಯಜೀವಿಗಳ ವಶಕ್ಕೆ ಪಡೆದ ಅಧಿಕಾರಿಗಳು

0

ಚಿಕ್ಕಬಳ್ಳಾಪುರ : ಬ್ಯಾಂಕಾಕ್‌ ನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವನ್ಯಜೀವಿಗಳನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್‌ ನಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಕೆಂಪು ಪಾದದ ಆಮೆಗಳು, ಆಫ್ರಿಕನ್ ಆಮೆಗಳು, ಅರ್ಜೆಂಟಿನಾ ಕಪ್ಪು-ಬಿಳಿ ತೇಗು, ಗೋಲ್ಡೀಸ್‌ ಮಾರ‍್ಮೋಸೆಟ್‌ ಸೇರಿದಂತೆ 47 ವನ್ಯ ಜೀವಿಗಳನ್ನ ವಶಕ್ಕೆಪಡೆದುಕೊಂಡಿದ್ದಾರೆ. ಕಸ್ಟಮ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮುಂದಿನ ಕಾನೂನು ಕ್ರಮಕ್ಕಾಗಿ ಬೆಂಗಳೂರು ಗ್ರಾಮಾಂತರ ಆರ್‌ಎಫ್‌ಇ ವಶಕ್ಕೆ ನೀಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬ್ಯಾಂಕಾಕ್‌ ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರ ತಪಾಸಣೆ ವೇಳೆ ಲಗೇಜ್‌ ನಲ್ಲಿ ಗಾಂಜಾ ಪತ್ತೆಯಾಗಿದೆ. ಓರ್ವ ಪ್ರಯಾಣಿಕನ ಬಳಿ ಎಂಟೂವರೆ ಕೆಜಿಯ ಬರೋಬ್ಬರಿ 2.98 ಕೋಟಿ ಮೌಲ್ಯದ ಗಾಂಜಾ ಹಾಗೂ ಮತ್ತೊರ್ವ ಪ್ರಯಾಣಿಕನ ಬಳಿ 28 ಲಕ್ಷ ಮೌಲ್ಯದ 800 ಗ್ರಾಂ ಗಾಂಜಾ ಪತ್ತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 3 ಕೋಟಿ 26 ಲಕ್ಷ ಮೌಲ್ಯದ ಹೈಡ್ರೋಪೋನಿಕ್‌ ಗಾಂಜಾವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.