ಮನೆ ಮನರಂಜನೆ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

0

ಚೆನ್ನೈ(ತಮಿಳುನಾಡು): ತಮಿಳು ಚಿತ್ರರಂಗದ ಹೆಸರಾಂತ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಅವರು ಆಂಜಿಯೋ ಥೆರಪಿ ಚಿಕಿತ್ಸೆಗೆ ಒಳಗಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಂದು ಸಂಜೆ ೬ ಗಂಟೆಗೆ ನಡೆಯಬೇಕಿದ್ದ ಅವರ ಮುಂಬರುವ ಚಿತ್ರ ’ಪೊನ್ನಿಯಿನ್ ಸೆಲ್ವನ್’ ಚಿತ್ರದ ಟ್ರೇಲರ್ ಕಾರ್ಯಕ್ರಮದಲ್ಲಿ ನಟ ಭಾಗವಹಿಸಬೇಕಾಗಿತ್ತು. ಆದರೆ, ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದೆ.
೫೬ ವರ್ಷದ ನಟ ವಿಕ್ರಮ್, ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್‌ನಲ್ಲಿ ನಟನೆ ಮಾಡಿದ್ದು, ಸೆಪ್ಟೆಂಬರ್ ೩೦ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ಶರತ್ ಕುಮಾರ್ ಮತ್ತು ತ್ರಿಷಾ ನಟನೆ ಮಾಡಿದ್ದಾರೆ. ಇವರು ನಟನೆ ಮಾಡಿರುವ ಕೋಬ್ರಾ ಆಗಸ್ಟ್ ೧೧ರಂದು ರಿಲೀಸ್ ಆಗಲಿದ್ದು, ಇದರಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಶ್ರೀನಿಧಿ ಶೆಟ್ಟಿ, ಮಿರ್ನಾಲಿನಿ ರವಿ, ಕೆಎಸ್ ರವಿಕುಮಾರ್ ಮತ್ತು ಮಿಯಾ ಜಾರ್ಜ್ ಸೇರಿದಂತೆ ಇತರರು ಇದ್ದಾರೆ.