ಮೈಸೂರು : ತಂದೆ-ಮಗಳ ಸಂಬಂಧವು ಪ್ರೀತಿ, ನಂಬಿಕೆ ಮತ್ತು ಆತ್ಮೀಯತೆಯ ಸಂಕೇತವಾಗಿದೆ. ಇದೇ ಬಾಂಧವ್ಯವನ್ನು ಪ್ರತಿಬಿಂಬಿಸುವಂತೆ ಕನಸು ಎಂಬ ಮಗಳು ತನ್ನ ತಂದೆ ಪ್ರದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಕೈಬರಹದ ಪತ್ರದ ಮೂಲಕ ಹೃದಯಸ್ಪರ್ಶಿ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾಳೆ. ತನ್ನ ಪತ್ರದಲ್ಲಿ ಅಪ್ಪ ನೀವು ನನ್ನ ನಿಸ್ವಾರ್ಥ ಪ್ರೀತಿಯ ಮತ್ತು ಧೈರ್ಯದ ಸಂಕೇತ. ನನ್ನ ಪ್ರತಿ ಕನಸನ್ನು ನನಸು ಮಾಡಲು ನೀವು ನನ್ನ ಜೊತೆ ನಿಂತು ಸಹಾಯ ಮಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ. ನಾನು ಯಾವಾಗಲು ನಿಮ್ಮ ಹೆಮ್ಮೆಯ ಮಗಳಾಗಿರಲು ಬಯಸುತ್ತೇನೆ ಎಂದು ಬರೆದಿದ್ದಾಳೆ.

ನೀವು ನನ್ನ ಜೀವನದಲ್ಲಿ ದೇವರು ಕೊಟ್ಟ ಅಮೂಲ್ಯ ಉಡುಗೊರೆ. ನಿಮ್ಮಂತಹ ಅಪ್ಪನನ್ನು ಪಡೆದಿರುವುದು ನನ್ನ ಅದೃಷ್ಟ” ಎಂದು ಭಾವನಾತ್ಮಕವಾಗಿ ಉಲ್ಲೇಖಿಸಿದ್ದಾಳೆ. ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ತಂದೆಯ ಉತ್ತಮ ಆರೋಗ್ಯ, ಸಂತೋಷ ಮತ್ತು ಯಶಸ್ಸಿಗಾಗಿ ಹಾರೈಸಿರುವ ಕನಸು, “ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಐ ಲವ್ ಯು ಸೋ ಮಚ್ ಅಪ್ಪ” ಎಂದು ತನ್ನ ಪತ್ರವನ್ನು ಮುಕ್ತಾಯಗೊಳಿಸಿದ್ದಾಳೆ.
ಕೈಬರಹದ ಈ ಶುಭಾಶಯ ಪತ್ರ ತಂದೆಯ ಮೇಲಿನ ಮಗಳ ಅಪಾರ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಅನಾವರಣಗೊಳಿಸಿದ್ದು, ತಂದೆ-ಮಗಳ ಬಾಂಧವ್ಯದ ಸೊಗಸಾದ ನಿದರ್ಶನವಾಗಿ ಗಮನ ಸೆಳೆಯುತ್ತಿದೆ.
















