ಮನೆ ಸುದ್ದಿ ಜಾಲ ಜಿಆರ್‌ಎಸ್‌ ನ ಅಪ್‌ ಡೌನ್‌ಗೆ ಸಿಕ್ಕಿದ ಪ್ರಶಸ್ತಿ : ಮೈಸೂರು

ಜಿಆರ್‌ಎಸ್‌ ನ ಅಪ್‌ ಡೌನ್‌ಗೆ ಸಿಕ್ಕಿದ ಪ್ರಶಸ್ತಿ : ಮೈಸೂರು

0

ಮೈಸೂರು: ಇಲ್ಲಿನ ಮೇಟಗಳ್ಳಿಯ ಜಿಆರ್‌ಎಸ್‌ ಅಪ್‌ಡೌನ್ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಟ್ರಿಪ್‌ಅಡ್ಡೆಸರ್‌ನ ಟಾಪ್ 10 ಪ್ರತಿಶತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಟ್ರಾವೆಲರ್ಸ್ ಚಾಯ್ಸ್ ಅವಾರ್ಡ್- 2026 ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಟ್ರಿಪ್‌ಅಡ್ಡೆಸರ್‌ನಲ್ಲಿ 12 ತಿಂಗಳ ಅವಧಿಯಲ್ಲಿ ಸಂಗ್ರಹಿಸಿದ ಪ್ರವಾಸಿಗರ ವಿಮರ್ಶೆಗಳು, ರೇಟಿಂಗ್‌ಗಳ ಆಧಾರದ ಮೇಲೆ ಪ್ರಶಸ್ತಿ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.

ಜಿಆರ್‌ಎಸ್ ಅಪ್‌ಡೌನ್ 4.8 ರೇಟಿಂಗ್ ಹೊಂದಿದೆ ಎಂದು ನಿರ್ವಹಣಾ ಸಂಸ್ಥೆ ಬಾಳಿಗ ಇನ್ವೆಸ್ಟ್‌ಮೆಂಟ್ಸ್ ನಿರ್ದೇಶಕ ಯೋಗೇಶ್ ಡಾಂಗೆ ತಿಳಿಸಿದ್ದಾರೆ. ದೇಶದ ಮೊದಲ ತಲೆಕೆಳಗಿನ ಛಾಯಾಗ್ರಹಣ ಆಕರ್ಷಣೆ ಇದಾಗಿದ್ದು, ಕಿಚನ್, ಲಿವಿಂಗ್ ರೂಮ್, ಡೈನಿಂಗ್ ಹಾಲ್, ಕಚೇರಿ ವಿನ್ಯಾಸ ಸೇರಿದಂತೆ 12 ಥೀಮ್ ಆಧಾರಿತ ಕೊಠಡಿಗಳಿವೆ. ವಿನ್ನೇಜ್ ಕಾರು, ಸ್ಕೂಟರ್ ಮಾದರಿಗಳನ್ನೂ ಅಳವಡಿಸಲಾಗಿದೆ. ಟಿಕೆಟ್‌ಗಳು grs.fun ನಲ್ಲಿ ಲಭ್ಯವಿವೆ ಎಂದು ವಿವರಿಸಿದ್ದಾರೆ. ಪ್ರಶಸ್ತಿ ಸಂಭ್ರಮಾಚರಣೆಯಲ್ಲಿ ಸಹಾಯಕ ವ್ಯವಸ್ಥಾಪಕ ಶ್ರೀಕಾಂತ್, ಆದಾಯ ಕಾರ್ಯಾಚರಣೆ ಸಹಾಯಕ ವ್ಯವಸ್ಥಾಪಕ ಸುನಿಲ್‌, ಜನರಲ್ ಮ್ಯಾನೇಜರ್ ಶ್ರೀನಿವಾಸ್ ಕೆ.ಟಿ.ಮಾರ್ಕೆಟಿಂಗ್ ಮುಖ್ಯಸ್ಥೆ ಪ್ರಿಯಾಂಕಾ, ಸಹಾಯಕ ವ್ಯವಸ್ಥಾಪಕರಾದ ವೀಣಾ ಎ, ಅರ್ಜುನ್, ಬ್ರಾಂಡ್ ಮ್ಯಾನೇಜರ್‌ಗಳಾದ ಮಧುಸೂದನ್, ಕಾವ್ಯಾ, ಕಾರ್ಯಾಚರಣೆ ಮುಖ್ಯಸ್ಥ ಬಿಕೆ, ಪಾರ್ಕ್‌ ಮುಖ್ಯಸ್ಥ ಶಿವಲಿಂಗೇಗೌಡ, ಅಪ್‌ಡೌನ್ ಸೂಪರ್‌ವೈಸರ್ ಗೀತಾ, ಎಕ್ಸಿಕ್ಯೂಟಿವ್‌ ಗಳಾದ ಮೇಘನಾ, ಶಿಲ್ಪಾ, ಸಿಬ್ಬಂದಿ ವರ್ಷಿತಾ, ಚಂದನಾ, ಭವ್ಯಾ ಹಾಜರಿದ್ದರು ಎನ್ನಲಾಗಿದೆ.