ಕುಣಿಗಲ್: ತಾಲ್ಲೂಕಿನ ಲಾಳಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ತಾಯಿ, ಮಗಳು ಮೃತಪಟ್ಟಿದ್ದು ಬೆಂಗಳೂರಿನ ಜಯಮಾಲಾ (59), ರಾಜೇಶ್ವರಿ (42) ಮೃತರು. ಇವರು ರಾಯಚೂರು ನಗರದವರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ರಾಜೇಶ್ವರಿ ಮಗ ಪ್ರೀತಮ್ ರನ್ನು ಶ್ರವಣಬೆಳಗೊಳದ ಶಾಲೆಗೆ ಸೇರಿಸಲು ಬೆಂಗಳೂರಿನಿಂದ ತುಮಕೂರಿಗೆ ರೈಲಿನಲ್ಲಿ ಬಂದಿದ್ದರು. ತುಮಕೂರಿನಿಂದ ಸಂಬಂಧಿ ಮಹಾವೀರ ಅವರೊಂದಿಗೆ ಕಾರಿನಲ್ಲಿ ಶ್ರವಣಬೆಳಗೊಳಕ್ಕೆ ಹೋಗುವಾಗ ಅವಘಡ ಸಂಭವಿಸಿದೆ. ಮಹಾವೀರ ಮತ್ತು ಪ್ರೀತಮ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕುಣಿಗಲ್ ಸಿಪಿಐ ಮತ್ತು ತಂಡದವರು ಸ್ಥಳಕ್ಕೆ ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
















