ಮನೆ ಸುದ್ದಿ ಜಾಲ ಗುಂಡಿನ ದಾಳಿಗೆ ಮಸೀದಿಯಲ್ಲಿ ಅಪ್ರಾಪ್ತ ದಾಳಿಕೋರರು ಜೊತೆಗೆ ಐವರ ಸಾವು : ಅಮೆರಿಕ

ಗುಂಡಿನ ದಾಳಿಗೆ ಮಸೀದಿಯಲ್ಲಿ ಅಪ್ರಾಪ್ತ ದಾಳಿಕೋರರು ಜೊತೆಗೆ ಐವರ ಸಾವು : ಅಮೆರಿಕ

0

ಸ್ಯಾನ್​ ಡಿಯಾಗೋ (ಅಮೆರಿಕ): ಅಮೆರಿಕದ ಸ್ಯಾನ್ ಡಿಯಾಗೋ ಮಸೀದಿಯ ಮೇಲೆ ಹದಿಹರೆಯದ ಅಪ್ರಾಪ್ತರ ಗುಂಪೊಂದು ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದವರು ತಮಗೆ ತಾವೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ದ್ವೇಷಾಪರಾಧದ ಘಟನೆ ಎಂದು ಪರಿಗಣಿಸಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಯಾನ್ ಡಿಯಾಗೋದ ಇಸ್ಲಾಮಿಕ್ ಸೆಂಟರ್ ವಿರುದ್ಧ ಯಾವುದೇ ನಿರ್ದಿಷ್ಟ ಬೆದರಿಕೆ ಎದುರಾಗಿರಲಿಲ್ಲ. ಆದರೆ, ಈ ಅಪ್ರಾಪ್ತರು ದ್ವೇಷದ ಮಾತಿನಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಅಧಿಕಾರಿಗಳಿಗೆ ಪುರಾವೆಗಳು ಲಭಿಸಿವೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿರುವ ಅವರು, ಈ ಕುರಿತು ನಿರ್ದಿಷ್ಟ ಕಾರಣಗಳು ಮುಂದಿನ ದಿನಗಳಲ್ಲಿ ತಿಳಿದು ಬರಲಿವೆ ಎಂದರು. ಗುಂಡಿನ ದಾಳಿ ನಡೆಸಿದವರಲ್ಲಿ ಓರ್ವ ಅಪ್ರಾಪ್ತನಾಗಿದ್ದು, ದಾಳಿಗೂ ಮುನ್ನ ಆತನ ತಾಯಿ ಪೊಲೀಸರಿಗೆ ಕರೆ ಮಾಡಿ, ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆತ ಮನೆಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ನನ್ನ ವಾಹನದೊಂದಿಗೆ ಕಣ್ಮರೆಯಾಗಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಆತನ ಶೋಧಕ್ಕೆ ಪೊಲೀಸರು ಮುಂದಾಗಿದ್ದರು. ಈ ಬೆನ್ನಲ್ಲೇ ಈ ದುರಂತ ನಡೆದಿದೆ. ತಂತ್ರಜ್ಞಾನದ ಬಳಕೆ ಮಾಡಿಕೊಂಡು ಹುಡುಕಾಟ ನಡೆಸಲಾಯಿತು.

ಮತ್ತು ಇವರ ಹುಡುಕಾಟದ ವೇಳೆ ಮಸೀದಿಯ ಕೆಲವು ಬ್ಲಾಕ್​ ಅಂತರದಲ್ಲಿ ಗುಂಡಿನ ಶಬ್ಧ ಕೇಳಿದೆ. ಈ ದಾಳಿ ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ. ಶಂಕಿತರಲ್ಲಿ ಒಬ್ಬ ಶಾಲೆ ವಿದ್ಯಾರ್ಥಿ ಹಾಗೂ 17 ಮತ್ತು 18ವರ್ಷದ ಇಬ್ಬರು, ಮತ್ತಿಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಕೇಂದ್ರವು ಅಂತರ್ಧರ್ಮೀಯ ಸಂಬಂಧಗಳು ಮತ್ತು ಸಮುದಾಯ ನಿರ್ಮಾಣದ ಮೇಲೆ ಕೇಂದ್ರೀಕರಿಸಿದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಮುಸ್ಲಿಮೇತರರ ಗುಂಪು ಸೋಮವಾರ ಬೆಳಗ್ಗೆ ಮಸೀದಿಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾಗೂಮಸೀದಿಯಲ್ಲಿ ಗುಂಡಿನ ದಾಳಿ ಕುರಿತು ಕರೆ ಮಾಡಿದ ನಾಲ್ಕು ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದರು. ಈ ವೇಳೆ ಕೆಲವು ಬ್ಲಾಕ್‌ಗಳ ದೂರದಲ್ಲಿ ಗುಂಡು ಹಾರಿಸಿದ ಶಬ್ಧ ಕೇಳಿಬಂದಿತು. ಅಲ್ಲಿ ಒಬ್ಬನ ಮೇಲೆ ಗುಂಡು ಹಾರಿಸಲಾಯಿತು. ಆದರೆ, ಆತನಿಗೆ ಯಾವುದೇ ಗಾಯವಾಗಲಿಲ್ಲ. ಹತ್ತಿರದ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾದ ವಾಹನದಲ್ಲಿ ಶೂಟರ್‌ಗಳು ಸಾವನ್ನಪ್ಪಿರುವುದು ಕಂಡುಬಂದಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು ಎನ್ನಲಾಗಿದೆ.