ಮನೆ ರಾಜ್ಯ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ – ಸಿಎಂ ಸಿದ್ದರಾಮಯ್ಯ

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ – ಸಿಎಂ ಸಿದ್ದರಾಮಯ್ಯ

0

ಬೆಂಗಳೂರು : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಿನ್ನಲೆ ರಾಜ್ಯದಲ್ಲಿ ತೆರಿಗೆ ಕಡಿತ ಮಾಡುತ್ತೀರಾ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದವರು ಏರಿಸೋದು ನಾವು ಕಡಿಮೆ ಮಾಡೋದಾ? ಅವರು ಏರಿಕೆ ಮಾಡಿದ್ರು ನೀವು ಕೇಳೋದೆ ಇಲ್ಲ. ನಾವು ಕಡಿಮೆ ಮಾಡ್ತೀರಾ ಅಂತ ಪ್ರಶ್ನೆ ಕೇಳ್ತೀರಾ ಹೊರತು ಅವರು ಯಾಕೆ ಜಾಸ್ತಿ ಮಾಡಿಲ್ಲ ಅಂತ ಕೇಳಲ್ಲ ಎಂದು ಪ್ರಶ್ನೆ ಮಾಡಿದರು.

ಮೋದಿ ಅಧಿಕಾರಕ್ಕೆ ಬಂದಾಗ ಎಷ್ಟು ಇತ್ತು? ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್ 70 ರೂ. ಡಿಸೇಲ್ 48 ರೂ. ಇತ್ತು. ಗ್ಯಾಸ್ ಬೆಲೆ 414 ರೂ. ಇತ್ತು. ಈಗ ಎಷ್ಟು ಆಗಿದೆ? ಯಾರು ಜಾಸ್ತಿ ಮಾಡಿದ್ದು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಏನಾದ್ರು ಸಹಾಯ ಮಾಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಬೆಲೆ ಜಾಸ್ತಿ ಮಾಡಿ ಅಂದರೆ ನಮಗೆ ತೆರಿಗೆ ಕಡಿಮೆ ಮಾಡಿ ಅಂತ ಯಾಕೆ ಪ್ರಶ್ನೆ ಕೇಳ್ತೀರಾ? ನೀವೆಲ್ಲ ಕೇಂದ್ರ ಸರ್ಕಾರದ ಪರ. ನೀವು ಪ್ರಶ್ನೆ ಕೇಳೋದ್ರಲ್ಲೇ ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಮೇಲೆ ಗರಂ ಆದರು.