ಜಮುಯಿ (ಬಿಹಾರ): ಬಿಹಾರದ ಜಮುಯಿ ಜಿಲ್ಲೆಯ ಮೋಹನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲಾ ಗ್ರಾಮದಲ್ಲಿ ರಕ್ತ ಸಂಬಂಧಗಳನ್ನೇ ಬೆಚ್ಚಿ ಬೀಳಿಸುವ ಅಥವಾ ಎದೆನಡುಗಿಸುವ ಘಟನೆ ನಡೆದಿದೆ. ಸಸುರಾಲದಲ್ಲಿ ವಾಸವಿದ್ದ ದಾಮಾದ ಜಿತೇಂದ್ರ ಪಂಡಿತ್ (35) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಯ ನಾಲ್ಕು ಮಹಿಳೆಯರನ್ನು ಬಂಧಿಸಿದ್ದ ಜಿತೇಂದ್ರ ಪಂಡಿತ್ ಝಾರ್ಖಂಡ್‌ನ ಮಧುಪುರದವರಾಗಿದ್ದು ಸುಮಾರು 10 ವರ್ಷಗಳ ಹಿಂದೆ ಕಾಲಾ ಗ್ರಾಮದ ರಜನಿ ಅವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಅವರು ಸಸುರಾಲದಲ್ಲಿ ವಾಸವಿದ್ದರು. ದಂಪತಿಗೆ 5 ವರ್ಷದ ಮಗಳು ಮತ್ತು 2 ವರ್ಷದ ಮಗ ಕೂಡಾ ಇದ್ದಾರೆ ಎನ್ನಲಾಗುತ್ತಿದೆ.
ಗ್ರಾಮಸ್ಥರ ಪ್ರಕಾರ ಬುಧವಾರ ಬೆಳಗ್ಗೆ ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಜಗಳವಾಗಿ ಮಾರಾಮಾರಿ ನಡೆದಿದೆ. ಇದರಲ್ಲಿ ಜಿತೇಂದ್ರ ಪಂಡಿತ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಕೊಲೆಯ ನಂತರ ಮೃತದೇಹವನ್ನು ಮನೆಯ ಹಿಂದೆ ಸುಮಾರು 3 ಅಡಿ ಆಳದ ಗುಂಡಿ ತೆಗೆದು ಹೂತು ಹಾಕಿದ್ದಾರೆ. ಶವ ಬೇಗನೇ ಕೊಳೆಯಬೇಕು ಎಂಬ ಕಾರಣಕ್ಕಾಗಿ 15 ಪ್ಯಾಕೆಟ್ ಉಪ್ಪನ್ನು ಹಾಕಿ ಶವವು ಬೇಗನೆ ಕೊಳೆಯುವಂತೆ ಮಾಡಲಾಗಿತ್ತು. ಘಟನೆ ನಡೆದು 24 ಗಂಟೆಗಳ ನಂತರ ಶವದಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಯಾರೋ ಗುಪ್ತ ಮಾಹಿತಿ ನೀಡಿದ್ದಾರೆ. ಈ ದೂರು ಆಧರಿಸಿ ಶುಕ್ರವಾರ ಪೊಲೀಸರು ಶವವನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಹಾಗೂ ಇತರ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತರ ಪತ್ನಿ ರಜನಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನನ್ನ ಗಂಡ ಶರಾಬು ಸೇವಿಸುವುದು ವಾಡಿಕೆಯಾಗಿತ್ತು.
ಅವರು ಆಗಾಗ್ಗೆ ನನ್ನ ಮೇಲೆ ನಿರಂತರ ಹಲ್ಲೆ ಮಾಡುತ್ತಿದ್ದರು. ಘಟನೆ ದಿನವೂ ಅವರು ನಶೆಯಲ್ಲಿದ್ದರು, ಇದೇ ಅಮಲಿನಲ್ಲಿ ಅವರು ಛಾವಣಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅನೈತಿಕ ಸಂಬಂಧ ಇತ್ತು ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಜಮುಯಿ ಸದರ್ ಎಸ್‌ಡಿಪಿಒ ಸತೀಶ್ ಸುಮನ್ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಹೊರತೆಗೆದಿದ್ದಾರೆ. ಇದು ಕುಟುಂಬದಲ್ಲಿನ ಕಲಹದಿಂದ ನಡೆದ ಕೊಲೆಯಾಗಿದೆ. ಕೊಲೆ ಬಳಿಕ ಸಾಕ್ಷ್ಯಗಳನ್ನು ನಾಶ ಮಾಡುವ ಪ್ರಯತ್ನ ನಡೆದಿದೆ. ಎಫ್‌ಎಸ್‌ಎಲ್ ತಂಡವನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಪೋಸ್ಟ್‌ಮಾರ್ಟಂ ವರದಿ ಬಂದ ನಂತರ ಮರಣದ ನಿಜ ಕಾರಣ ತಿಳಿಯಲಿದೆ ಎಂದು ಸತೀಶ್ ಸುಮನ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

















